More

    ಅತಿವೇಗದಲ್ಲಿ ಚಲಿಸಿದ ಸಾರಿಗೆ ಬಸ್​ ಪಲ್ಟಿಯಾಗಿ ನಿಂತಿತು! 15ಕ್ಕೂ ಹೆಚ್ಚು ಜನರಿಗೆ ಗಾಯ

    ಯಾದಗಿರಿ: ಚಾಲಕ ವೇಗವಾಗಿ ಬಸ್ ಚಾಲನೆ ಮಾಡಿದ ಪರಿಣಾಮ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯಗಳಾಗಿದ್ದು, ತೆಲಂಗಾಣದ ನಾರಾಯಣಪೇಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಯಾದಗಿರಿ ಗಡಿಭಾಗವಾದ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಯತ್ಲಾಸಪುರ ಗ್ರಾಮದ ಸಮೀಪದ ಲೋಕಪಲ್ಲಿ ಬಳಿ ದುರ್ಘಟನೆ ಸಂಭವಿಸಿದೆ. ಶನಿವಾರ ಬೆಳಿಗ್ಗೆ ಕಲಬುರಗಿ ಜಿಲ್ಲೆಯ ಸೇಡಂ ಡಿಪೋದ ಬಸ್ ಗುರುಮಠಕಲ್​‌ನಿಂದ ಹೈದರಾಬಾದ್​​ಗೆ ತೆರಳುತ್ತಿತ್ತು. ಲೋಕಪಲ್ಲಿ ರಸ್ತೆ ತಿರುವಿನಲ್ಲಿ ಚಾಲಕ ವೇಗವಾಗಿ ಬಸ್ ಚಾಲನೆ ಮಾಡಿದ ಪರಿಣಾಮ ಬಸ್ ಪಲ್ಟಿಯಾಗಿ ರಸ್ತೆಪಕ್ಕದ ತಗ್ಗಿನಲ್ಲಿ ತಲೆಕೆಳಗಾಗಿ ನಿಂತಿತು.

    ಇದನ್ನೂ ಓದಿ: ಪ್ರಧಾನಿ ರ‍್ಯಾಲಿಗೆ ತೆರಳುತ್ತಿದ್ದ ಬಸ್‌- ಕಾರಿನ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ ಮೂವರ ದುರ್ಮರಣ

    ಚಾಲಕ ಹಾಗೂ ನಿರ್ವಾಹಕ ಸೇರಿ 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ನಾರಾಯಣಪೇಟೆ ಪೊಲೀಸರು ಹಾಗೂ ಗುರುಮಠಕಲ್ ಬಸ್ ಡಿಪೋದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    VIDEO| ಮೈತೋರಿಸೋ ಬಟ್ಟೆ​ ಬಗ್ಗೆ ಟ್ರೋಲ್​ ಮಾಡೋರ್ಗೆ ಉರ್ಫಿ ನೀಡಿದ ಉತ್ತರ..

    ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪೆಟ್ಟು: ಹಿರಿಯ ನಟ ಶಿವರಾಂ ವಿಧಿವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts