More

    ಶಾಲೆಗೆ ತಡವಾಗುತ್ತೆ ಎಂದು ಬಾಲಕನೊಬ್ಬ ಹೇಳಿದ್ದಕ್ಕೆ ಬದಲಾಗೇ ಬಿಡ್ತು ಬಸ್​ ಟೈಮಿಂಗ್!

    ನವದೆಹಲಿ: ರಾಜ್ಯದ ರಾಜಧಾನಿಯಲ್ಲಿ ಎಲ್ಲಿಗಾದರೂ ಟೈಮ್​ಗೆ ಸರಿಯಾಗಿ ತಲುಪಲು ಆಗಿಲ್ಲವೆಂದರೆ ಮೊದಲಿಗೆ ನೆರವಿಗೆ ಬರುವುದೇ ಬಸ್​ ಲೇಟಾಯ್ತು ಎಂಬ ನೆಪ. ಅರ್ಥಾತ್ ಸಿಕ್ಕಾಪಟ್ಟೆ ಟ್ರಾಫಿಕ್​ ಎಂಬ ನೆವ. ಇನ್ನು, ‘ನಮ್​ ಟೈಮ್​ಗೆ ಬಸ್​ ಬರುತ್ತಾ? ಬಸ್​ ಬರೋ ಟೈಮ್​ಗೆ ನಾವು ಹೋಗ್ಬೇಕು’ ಎನ್ನೋ ಮಾತು ಕೂಡ ಆಗಾಗ ಕೇಳೇ ಇರುತ್ತೇವೆ. ಅದಾಗ್ಯೂ ಇಲ್ಲೊಂದು ಕಡೆ ಶಾಲಾ ಬಾಲಕನಿಗೊಬ್ಬನಿಂದಾಗಿ ಬಸ್ ಬರೋ ಟೈಮೇ ಬದಲಾಗಿದೆ!

    ಸಾರಿಗೆ ಸಂಸ್ಥೆಯೊಂದು ಹೀಗೆ ಬಾಲಕನೊಬ್ಬನ ಮಾತಿಗೆ ಬೆಲೆ ಕೊಟ್ಟು ವೇಳಾಪಟ್ಟಿ ಬದಲಿಸಿಕೊಂಡಿದ್ದಕ್ಕೆ ನೆಟ್ಟಿಗರು ಅಧಿಕಾರಿಗಳ ಬಗ್ಗೆ, ಸಂಸ್ಥೆಯ ಕುರಿತು ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ. ಶಾಲಾ ಬಾಲಕ ಮಾಡಿದ ಒಂದು ಟ್ವೀಟ್​ಗೆ ಸಾರಿಗೆ ಸಂಸ್ಥೆ ತ್ವರಿತವಾಗಿ ಸ್ಪಂದಿಸಿದೆ.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ಒಡಿಶಾದ ಭುವನೇಶ್ವರದ ಸಾಯಿ ಅನ್ವೇಶ್ ಎಂಬ ಈ ಬಾಲಕ ಜ. 9ರಂದು ಸರಣಿ ಟ್ವೀಟ್​ ಮಾಡಿ ತನ್ನ ಸಮಸ್ಯೆ ಹೇಳಿಕೊಂಡಿದ್ದ. ‘ಸರ್ ನಾನು ಭುವನೇಶ್ವರದ ಎಂಬಿಎಸ್​ ಪಬ್ಲಿಕ್​ ಸ್ಕೂಲ್ ವಿದ್ಯಾರ್ಥಿ. ನಾನು ‘ಮೊ ಬಸ್’ನಲ್ಲಿ ದಿನಾ ಹೋಗುತ್ತಿದ್ದೇನೆ. ಇತ್ತೀಚೆಗೆ ಬಸ್ ಸಮಯ ಬದಲಾಗಿದೆ. ನಾನು 7.30ಕ್ಕೆ ಶಾಲೆಯಲ್ಲಿರಬೇಕು. ಆದರೆ ನಮ್ಮ ರೂಟ್​ ನಂ-13ರ ಬಸ್​ ಲಿಂಗಿಪುರದಿಂದ ಬೆಳಗ್ಗೆ 7.40ಕ್ಕೆ ಹೊರಡುತ್ತೆ. ಹೀಗಾಗಿ ನನಗೆ ಶಾಲೆಗೆ ತಡವಾಗುತ್ತಿದೆ. ಈ ಬಗ್ಗೆ ನೀವು ಸ್ಪಂದಿಸಿ ಸಮಸ್ಯೆ ಪರಿಹರಿಸಿ’ ಎಂದು ಟ್ವಿಟರ್​ನಲ್ಲಿ ಕೇಳಿಕೊಂಡಿದ್ದ.

    ಇದನ್ನೂ ಓದಿ: ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು? 

    ಕ್ಯಾಪಿಟಲ್ ರೀಜನ್​ ಅರ್ಬನ್ ಟ್ರಾನ್ಸ್​ಪೋರ್ಟ್ ಭುವನೇಶ್ವರ್ (CRUT) ಇದಕ್ಕೆ ಸಕಾರಾತ್ಮಕವಾಗಿ ಹಾಗೂ ಶೀಘ್ರವಾಗಿ ಸ್ಪಂದಿಸಿದೆ. ಸಾಯಿ ನಿನ್ನ ಕೋರಿಕೆಯನ್ನು ನಾವು ಪರಿಗಣಿಸಿದ್ದು ಸಂಬಂಧಪಟ್ಟ ವಿಭಾಗಕ್ಕೆ ಕಳಿಸಿ ಸಾಧ್ಯವೇ ಎಂದು ಪರಿಶೀಲಿಸಲು ಹೇಳಿದ್ದೇವೆ ಎಂದು ಸಂಸ್ಥೆ ತಕ್ಷಣ ಪ್ರತಿಕ್ರಿಯಿಸಿದೆ. ಅಲ್ಲದೆ ಐಪಿಎಸ್ ಅಧಿಕಾರಿ ಹಾಗೂ ಕ್ರಟ್​ ಎಂಡಿ ಕೂಡ ಪ್ರತಿಕ್ರಿಯಿಸಿ, ಸಾಯಿ.. ನಿಮ್ಮಂಥ ಪ್ರಯಾಣಿಕರ ಪ್ರೀತಿಯಿಂದಲೇ ನಮ್ಮ ಮೊ ಬಸ್ ಸಂಚರಿಸುತ್ತಿದೆ. ಬಸ್​ ಟೈಮಿಂಗ್ ಸೋಮವಾರದಿಂದಲೇ ಬದಲಾಗಲಿದೆ. ಅಂದಿನಿಂದ ಅಲ್ಲಿಂದ ನಮ್ಮ ಮೊದಲ ಬಸ್​ ಬೆಳಗ್ಗೆ ಏಳಕ್ಕೆ ಹೊರಡಲಿದೆ, ನಿಮಗೆ ಇನ್ನುಮುಂದೆ ಶಾಲೆಗೆ ತಡವಾಗುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ನಾನು ಜೀನ್ಸ್​ ಧರಿಸಿದ್ರೆ 4ನೇ ಮದ್ವೆಯಾಗ್ತೇನೆ ಎಂದು ಗಂಡನಿಂದ ಬೆದರಿಕೆ- ಪೊಲೀಸ್​ ಕಂಪ್ಲೇಂಟ್​

    ಜನರು ಡಾಕ್ಟರ್ ಆಗೋದೇ ಕೈತುಂಬ ವರದಕ್ಷಿಣೆ ಪಡೆಯೋಕಂತೆ!; ಹೇಳಿಕೆ ವಿರೋಧಿಸಿ ಮುಖ್ಯಮಂತ್ರಿಗೆ ದೂರಿತ್ತ ಐಎಂಎ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts