More

    ನಾಳೆಯಿಂದಲೇ ಬಸ್ ಸಂಚಾರ: ರೆಡ್​ ಜೋನ್ ಹೊರತುಪಡಿಸಿ ಎಲ್ಲ ಕಡೆಗೂ ಸಂಚರಿಸಲಿವೆ ಬಸ್​ಗಳು

    ಕಲಬುರಗಿ: ರಾಜ್ಯದಾದ್ಯಂತ ನಾಳೆಯಿಂದಲೇ ಎಲ್ಲ ಕಡೆಗೂ ಬಸ್​ಗಳು ಸಂಚರಿಸಲಿವೆ. ಆದರೆ, ರೆಡ್​ಜೋನ್​ಗಳ ವ್ಯಾಪ್ತಿಯಲ್ಲಿ ಬಸ್​ಗಳು ಸಂಚಾರ ನಡೆಸುವುದಿಲ್ಲ ಎಂದು ಉಪಮುಖ್ಯಮಂತ್ರಿಯೂ ಆಗಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಬಸ್ ದರ ಹೆಚ್ಚಳದ ಪ್ರಸ್ತಾವನೆ ಇಲ್ಲ
    ಸದ್ಯ ಬಸ್ ದರ ಹೆಚ್ಚಳ ಮಾಡುವ ಯಾವುದೆ ಪ್ರಸ್ತಾವನೆ ನಮ್ಮ‌ ಮುಂದೆ ಇಲ್ಲ. ನಾಲ್ಕು ತಿಂಗಳ ಹಿಂದೆಯೆ 12 % ಹೆಚ್ಚಳ ಮಾಡಲಾಗಿದೆ. ಸಾರ್ವಜನಿಕರು ತೊಂದರೆಯಲ್ಲಿರುವಾಗ ನಾವು ದರ ಹೆಚ್ಚಳ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುವುದಿಲ್ಲ. ಸಾರಿಗೆ ಇಲಾಖೆಗೆ ಪ್ರತಿ ತಿಂಗಳು 326 ಕೋಟಿ ಕೊಡಲಾಗುತ್ತಿದೆ. ಸಾರಿಗೆ ಇಲಾಖೆಯ ಸಿಬ್ಬಂದಿ ಬಲವಂತವಾಗಿ ರಜೆ ಹಾಕುವಂತೆ ಅಧಿಕಾರಿಗಳು ಸೂಚಿಸಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ಎಚ್ಚರಿಸಿದರು.

    ನಾಳೆಯಿಂದಲೇ ಬಸ್ ಸಂಚಾರ: ರೆಡ್​ ಜೋನ್ ಹೊರತುಪಡಿಸಿ ಎಲ್ಲ ಕಡೆಗೂ ಸಂಚರಿಸಲಿವೆ ಬಸ್​ಗಳು ಮುಂದೆ ಮೇ 22ರಿಂದ ಹಂತ ಹಂತವಾಗಿ ಸಾರಿಗೆ ವ್ಯವಸ್ಥೆ ಪ್ರಾರಂಭ ಮಾಡಲಾಗಿದೆ. ನಾಳೆಯಿಂದ ಹೋಬಳಿಯಿಂದ ಪ್ರತಿ ಹಳ್ಳಿಗೂ ಬಸ್ ಸಂಚಾರ ಆರಂಭ ಆಗುತ್ತೆ. ಎಲ್ಲ ಇಲಾಖೆಗಳಿಗಿಂತಲೂ ಅತಿಹೆಚ್ಚು ನಷ್ಟ ಆಗಿರೋದು ಸಾರಿಗೆ ಇಲಾಖೆಗೆ. 2,200 ಕೋಟಿ ರೂಪಾಯಿಗಿಂತಲೂ ಹೆಚ್ಚು ನಷ್ಟ ಆಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳು ಸೇರಿ 2,200 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಆಗಿದೆ. ಸೋಷಿಯಲ್ ಡಿಸ್ಟೆನ್ಸ್ ಸಲುವಾಗಿ 30 ಪ್ಯಾಸೆಂಜರ್ ಹಾಕಿಕೊಂಡು ಹೋಗುವ ಹಿನ್ನಲೆ ನಷ್ಟ ಆಗ್ತಿದೆ. ನಷ್ಟದ ಪ್ರಮಾಣ ಶೀಘ್ರವೇ ಮೂರು ಸಾವಿರ ಕೋಟಿ ರೂಪಾಯಿ ಆಗಬಹುದೆಂಬ ನಿರೀಕ್ಷೆ ಇದೆ.

    ಇವತ್ತು ಕೇಂದ್ರದಿಂದ ಮತ್ತೊಂದು ಮಾರ್ಗಸೂಚಿ ಬರಬಹುದು. ಆ ಮಾರ್ಗಸೂಚಿ ಅನ್ವಯ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಸಾರಿಗೆಯ ನಾಲ್ಕು ನಿಗಮಗಳ ಸಾರಿಗೆಯಲ್ಲಿ 1 ಕೋಟಿ ಜನ ಸಂಚಾರ ಮಾಡ್ತಾ ಇದ್ದರು. ಆದ್ರೆ ಈಗ 14 ಲಕ್ಷ ಜನ‌ಮಾತ್ರ ಸಂಚಾರ ಮಾಡ್ತಾ ಇದ್ದಾರೆ. ಜನ ಭಯದಿಂದ ಹೊರಗಡೆ ಬರದೆ ಮನೆಯಲ್ಲೆ ಇದ್ದಾರೆ. ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಎಸಿ ನಾನ್, ಎಸಿ ಸೇರಿ ಎಲ್ಲ ಬಸ್ ಸಂಚಾರ ಶುರುವಾಗಲಿದೆ. ಬುಕ್ಕಿಂಗ್ ಸ್ಟಾರ್ಟ್ ಮಾಡುವಂತೆ ಸೂಚನೆ‌ ನೀಡಲಾಗಿದೆ. ಇಂದಿನಿಂದಲೇ ಎಸಿ ನಾನ್ ಎಸಿ ಬಸ್ ಗಳನ್ನು ಸ್ಟಾರ್ಟ್ ಮಾಡುವಂತೆ ಸೂಚನೆ ನೀಡಿದ್ದು, ಎಸಿ ಬಸ್ ನಲ್ಲಿ 25 ಜನ ಮಾತ್ರ ಪ್ರಯಾಣ ಮಾಡಬೇಕು ಎಂಬ ನಿಯಮ ಪಾಲಿಸುವುದಕ್ಕೂ ಹೇಳಲಾಗಿದೆ.

    ಇದನ್ನೂ ಓದಿ: ಕೇಂದ್ರ ಸಚಿವ ಜಾವಡೇಕರ್ ಜತೆಗೆ ಬುಧವಾರ ವೇದಿಕೆ ಹಂಚಿಕೊಂಡಿದ್ದ ಪಿಐಬಿ ಡಿಜಿಗೆ ಕೋವಿಡ್-19 ಸೋಂಕು ದೃಢ

    ಗೋವಾ ಆಂಧ್ರ , ತಮಿಳುನಾಡು ಮತ್ತು ಕೇರಳ ಕ್ಕೆ ಬಸ್ ಸಂಚಾರಕ್ಕೆ ಅನುಮತಿ ಕೇಳಿ ಪತ್ರ ಬರೆಯಲಾಗಿದೆ. ಹೊರ ರಾಜ್ಯದಿಂದ ಒಪ್ಪಿಗೆ ಬಂದಿಲ್ಲ ಬಂದ ನಂತರ ಹೊರ ರಾಜ್ಯಕ್ಕೆ ಕಳುಹಿಸಲಾಗುತ್ತೆ.  ಸದ್ಯ ನಷ್ಟ ಅನುಭವಿಸುತ್ತಿದ್ದರೂ ಸೇವೆಯ ದೃಷ್ಟಿಯಿಂದ ಬಸ್ ಸಂಚಾರ ಆರಂಭ ಮಾಡಲಾಗಿದೆ. ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಕರೊನಾ ದಿಂದ ಜೀವ ಹಾನಿಯಾದ್ರೆ 30 ಲಕ್ಷ ರೂಪಾಯಿ ಪರಿಹಾರ ಕೊಡ್ತೇವೆ.

    ಬಿಎಂಆರ್​ಸಿಎಲ್​ನಿಂದ ಮತ್ತೊಂದು ಪ್ರಯೋಗ: ಹಳದಿ ಮಾರ್ಗದಲ್ಲಿ ಚಾಲಕರಹಿತ ರೈಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts