ಸಿನಿಮಾ

ಕಟೀಲಿನಲ್ಲಿ ಬಸ್ ಬೆಂಕಿಗಾಹುತಿ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಒಎಂಪಿಎಲ್‌ಗೆ ಸೇರಿದ ಬಸ್ ಸುಟ್ಟು ಭಸ್ಮವಾಗಿದೆ.

ಕಟೀಲು ರೂಟ್‌ನಲ್ಲಿ ಚಲಿಸುವ ಬಸ್, ಕಟೀಲು ಕಡೆಯ ನೌಕರನ್ನು ಬಿಟ್ಟು ವಾಪಸ್ಸಾಗುವ ಸಂದರ್ಭ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ಡ್ರೈವರ್ ಸೇರಿ ಮೂರು ಮಂದಿ ಇದ್ದರೆಂದು ತಿಳಿದು ಬಂದಿದೆ. ಶಾಟ್ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿದ್ದು, ಬೆಂಕಿ ಕಾಣಿಸಿಕೊಂಡ ಸಂದರ್ಭ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕರ್ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಕೂಡಲೇ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಆದರೆ ಬಸ್ ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಕಟೀಲು ದೇವಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಸಹಕರಿಸಿದ್ದು, ಹೆಚ್ಚಿನ ಅವಘಡ ತಪ್ಪಿದಂತಾಗಿದೆ.

Latest Posts

ಲೈಫ್‌ಸ್ಟೈಲ್