More

    ಇಬ್ಬರನ್ನು ಬಲಿ ಪಡೆದ ಬಸ್ ಚಾಲಕಗೆ ಶಿಕ್ಷೆ

    ಕಾರ್ಕಳ: ಕೆದಿಂಜೆ ಮಾವಿನ ಕಟ್ಟೆ ಎಂಬಲ್ಲಿ ರಿಕ್ಷಾವೊಂದಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ನಂದಳಿಕೆ ಕಕ್ಕೆಪದವಿನ ಶ್ರೀನಿವಾಸ ಪೂಜಾರಿ ಎಂಬಾತನನ್ನು ಅಪರಾಧಿ ಎಂದು ಕಾರ್ಕಳ ನ್ಯಾಯಾಲಯ ತೀರ್ಪು ನೀಡಿ ಶಿಕ್ಷೆ ವಿಧಿಸಿದೆ.

    ಅಪರಾಧಿಗೆ 6 ತಿಂಗಳು ಜೈಲು, 7,500 ರೂ. ದಂಡ ವಿಧಿಸಲಾಗಿದೆ. 2014 ಅ.17ರಂದು ಘಟನೆ ಸಂಭವಿಸಿತ್ತು. ಕಾರ್ಕಳದಿಂದ ಪಡುಬಿದ್ರಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಎದುರುಗಡೆಯಿಂದ ಬರುತ್ತಿದ್ದ ರಿಕ್ಷಾಗೆ ಡಿಕ್ಕಿ ಹೊಡೆದಿತ್ತು. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 3 ಜನ ವಯಸ್ಕರು ಮತ್ತು ಚಿಕ್ಕ ವಯಸ್ಸಿನ ಮಕ್ಕಳು ಸೇರಿದಂತೆ 9 ಜನ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಜಮೀಲಾ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಹಾಗೂ ನಿಹಾ ಅವರನ್ನು ಉಡುಪಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದರು. ಈ ಕುರಿತು ಅಂದಿನ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ಜಿ.ಎಂ.ನಾಯ್ಕ ದೋಷಾರೋಪಣೆಯನ್ನು ಕಾರ್ಕಳ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

    ಕಾರ್ಕಳದ 2ನೇ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ ನ್ಯಾಯಾಧೀಶೆ ಚೇತನಾ ಸಿ.ಎಫ್ ಪ್ರಕರಣದ ವಿಚಾರಣೆ ನಡೆಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜಶೇಖರ್ ಪಿ.ಶಾಮರಾವ್ ವಾದಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts