More

    ಕೈಕಾಲು ಕಟ್ಟಿ ಮರಳಿನಲ್ಲಿ ಜೀವಂತ ಹೂತರೂ ಎದ್ದು ಬಂದ ಭೂಪ!

    ರಾಜ್​ಕೋಟ್​: ಹಣಕಾಸು ವ್ಯವಹಾರದಲ್ಲಿ ಮನಸ್ತಾಪ ಉಂಟಾಗಿದ್ದರಿಂದ, ಮೂರು ಮಂದಿ ಸೇರಿಕೊಂಡು ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ಥಳಿಸಿದ್ದರು. ಬಳಿಕ ಆತನ ಕೈಕಾಲು ಕಟ್ಟಿಹಾಕಿ ಮರಳಿನಲ್ಲಿ ಜೀವಂತವಾಗಿ ಸಮಾಧಿ ಮಾಡಿದ್ದರು. ಆದರೂ ಆತ ಅದು ಹೇಗೋ ಸಮಾಧಿಯಿಂದ ಮೇಲೆದ್ದು, ತಪ್ಪಿಸಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದ. ಹೀಗಾಗಿ ಈಗ ಆ ಮೂವರು ಜೈಲಿನ ಕಂಬಿ ಎಣಿಸುವಂತಾಗಿದೆ.

    ಇದಾವುದೋ ಬಾಲಿವುಡ್​ ಚಿತ್ರದ ಕತೆಯಲ್ಲ. ಬದಲಿಗೆ ನಿಜಜೀವನದಲ್ಲಿ ನಡೆದ ಘಟನೆ. ಕಪಿಲ್​ ಮರ್ಕಾನಾ (30) ಜೀವಂತ ಸಮಾಧಿಯಿಂದ ಮೇಲೆದ್ದು ಬಂದು ಬದುಕಿದವ. ಅರವಿಂದ ಬಂಭಾವಾ, ರವಿ ವಕ್ತಾರ್​ ಮತ್ತು ಚಂದು ಭಾರ್ವಾಡ್​ ಬಂಧಿತರು.

    ರಾಜ್​ಕೋಟ್​ ಜಿಲ್ಲೆಯ ಗೊಂಡಾಲ್​ ಪಟ್ಟಣದಲ್ಲಿ ಅರವಿಂದ ಬಂಭಾವಾ ಶಿವಶಕ್ತಿ ಡೇರಿ ಎಂಬ ಡೇರಿ ಇಟ್ಟುಕೊಂಡಿದ್ದ. ಕಪಿಲ್​ ಮರಕಾನಾ ಈ ಡೇರಿಯಲ್ಲಿ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಆದರೆ ಇತ್ತೀಚೆಗೆ ವ್ಯವಹಾರಿಕ ನಷ್ಟ ಉಂಟಾಗಿದ್ದರಿಂದ ಆರು ತಿಂಗಳ ಹಿಂದೆ ತನ್ನ ಡೇರಿಯನ್ನು ಯೋಗೇಶ್​ ಭಾರ್ವಾಡ್​ ಎಂಬಾತನಿಗೆ ಬಂಭಾವಾ ಮಾರಾಟ ಮಾಡಿದ್ದ. ಮರಕಾನಾ ತನ್ನ ಡೇರಿಯಲ್ಲಿ ಆರ್ಥಿಕ ಅವ್ಯವಹಾರ ಮಾಡಿದ್ದೇ ನಷ್ಟಕ್ಕೆ ಕಾರಣ ಎಂದು ಆತನ ವಿರುದ್ಧ ಬಂಭಾವಾ ದ್ವೇಷ ಬೆಳೆಸಿಕೊಂಡಿದ್ದ.

    ಗೊಂಡಾಲ್​ನ ವೋರಾ ಕೋಟಾಡ ರಸ್ತೆಯಲ್ಲಿರುವ ಮತ್ತೊಂದು ಡೇರಿಯಲ್ಲಿ ಕೆಲಸ ಮಾಡುತ್ತಿದ್ದ ಮರಕಾನಾನನ್ನು ಬಂಭಾವಾ ಸೋಮವಾರ ಅಪಹರಿಸಿದ್ದ. ಆತನ ಈ ಕೃತ್ಯಕ್ಕೆ ರವಿ ವಕ್ತಾರ್​ ಮತ್ತು ಚಂದು ಬಾರ್ವಾಡ್​ ಸಹಕರಿಸಿದ್ದರು.

    ಇದನ್ನೂ ಓದಿ: ರಸ್ತೆಯಲ್ಲಿ ನಡೆದು ಹೋಗುವಾಗ ಮೊಬೈಲ್​ ನೋಡಿದ್ರೆ ಜೈಲಿಗೆ ಹೊತ್ತೊಯ್ಯಲಿದ್ದಾರೆ ಹುಷಾರ್​!

    ಬಳಿಕ ದೂರದ ಪ್ರದೇಶಕ್ಕೆ ಕರೆದೊಯ್ದ ಅವರು ಮರಕಾನಾನನ್ನು ಮನಸೋಇಚ್ಛೆ ಥಳಿಸಿದ್ದರು. ಪೆಟ್ಟು ತಡೆಯಲಾರದೆ ನಿತ್ರಾಣಗೊಂಡ ಬಳಿಕ ಮರಕಾನಾನ ಕೈಕಾಲು ಕಟ್ಟಿ ಹಾಕಿದ ಮೂವರು, ಮರಳಲ್ಲಿ ಆತನನ್ನು ಜೀವಂತವಾಗಿ ಸಮಾಧಿ ಮಾಡಿದ್ದರು.

    ಪೀಡೆ ತೊಲಗಿತು ಎಂದು ಭಾವಿಸಿದ ಮೂವರು ಸ್ವಲ್ಪ ದೂರದಲ್ಲೇ ಇದ್ದ ಚಂದು ಭಾರ್ವಾಡ್​ನ ಕಚೇರಿಯಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದರು. ಆದರೆ, ಮರಳಿನಲ್ಲಿ ಹೂಳಲ್ಪಟ್ಟಿದ್ದ ಮರಕಾನಾ ಬಿರುಸಾಗಿ ಒದ್ದಾಡುತ್ತಾ, ಕಟ್ಟಿದ್ದ ತನ್ನ ಕೈಕಾಲು ಬಿಚ್ಚಿಕೊಂಡು ಮರಳಿನ ಸಮಾಧಿಯಿಂದ ಮೇಲೆದ್ದು ಬಂದಿದ್ದ. ಚಂದು ಭರ್ವಾಡ್​ನ ಕಚೇರಿ ಎದುರೇ ಹಾದು ಮನೆಗೆ ತೆರಳುತ್ತಿದ್ದ.

    ಮದ್ಯಪಾನ ಮಾಡುತ್ತಿದ್ದ ಮೂವರು ಇದನ್ನು ಗಮನಿಸಿ ಮರಕಾನಾನ ಬೆನ್ನಟ್ಟಿದ್ದರು. ಆದರೆ, ಹತ್ತಿರದಲ್ಲೇ ಇದ್ದ ಉಪಬಂಧಿಖಾನೆಯ ಕಾವಲು ಕಾಯುತ್ತಿದ್ದ ಪೊಲೀಸ್​ ಸಿಬ್ಬಂದಿಯ ಮೊರೆ ಹೋದ ಮಕರಾನಾ ಬಚಾವ್​ ಆಗಿದ್ದ.

    ಈತ ಪೊಲೀಸರಿಗೆ ಮಾಹಿತಿ ನೀಡಿದ್ದನ್ನು ಗಮನಿಸಿದ ಮೂವರು ಪರಾರಿಯಾಗಲು ಯತ್ನಿಸಿದ್ದರು. ಆದರೆ, ಅವರ ಬೆನ್ನಟ್ಟಿದ ಪೊಲೀಸರು ಮೂವರನ್ನೂ ಬಂಧಿಸುವಲ್ಲಿ ಯಶಸ್ವಿಯಾದರು.

    ಟೆಸ್ಲಾ ತಯಾರಿಸಿದೆ ‘ಮಿಲಿಯನ್​ ಮೈಲ್​’ ಬ್ಯಾಟರಿ; ವಿದ್ಯುತ್​ಚಾಲಿತ ವಾಹನಗಳ ಕ್ಷೇತ್ರದಲ್ಲಿ ನೂತನ ಯುಗಾರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts