More

    ಟೆಸ್ಲಾ ತಯಾರಿಸಿದೆ ‘ಮಿಲಿಯನ್​ ಮೈಲ್​’ ಬ್ಯಾಟರಿ; ವಿದ್ಯುತ್​ಚಾಲಿತ ವಾಹನಗಳ ಕ್ಷೇತ್ರದಲ್ಲಿ ನೂತನ ಯುಗಾರಂಭ

    ನವದೆಹಲಿ: ಖಾಸಗಿ ಗಗನನೌಕೆಯನ್ನು ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾಯಿಸುವ ಮೂಲಕ ಬಾಹ್ಯಾಕಾಶ ಯಾನ ರಂಗದಲ್ಲಿ ಹೊಸ ವಿಕ್ರಮ ಸಾಧಿಸಿರುವ ಎಲಾನ್​ ಮಸ್ಕ್​, ಇದೀಗ ವಿದ್ಯುತ್​ಚಾಲಿತ ವಾಹನಗಳ ಕ್ಷೇತ್ರದಲ್ಲೂ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ.

    ಮಸ್ಕ್​ ಒಡೆತನದ ಟೆಸ್ಲಾ ಕಂಪನಿ ವಿದ್ಯುತ್​ಚಾಲಿತ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಈ ಕಾರಿನಲ್ಲಿ ಅತ್ಯಂತ ಪ್ರಮುಖ ಭಾಗವಾಗಿರುವ ಬ್ಯಾಟರಿ ತಾಂತ್ರಿಕತೆಯಲ್ಲಿ ಭಾರಿ ಯಶಸ್ಸು ಪಡೆದಿದೆ. ಅಂದರೆ, ಟೆಸ್ಲಾ ತಯಾರಿಸಿರುವ ಬ್ಯಾಟರಿ ದಶಕಗಳ ಕಾಳ ಬಾಳಿಕೆ ಬರಲಿದೆ. ಜತೆಗೆ, ಲಕ್ಷಾಂತರ ಮೈಲಿಗಳ ಪ್ರಯಾಣಕ್ಕೆ ಬಳಕೆಯಾಗಲಿದೆ. ಈ ಕ್ರಾಂತಿಕಾರಕ ಸಂಶೋಧನೆಯ ಫಲವನ್ನು ಎಲ್ಲ ಕಂಪನಿಗಳು ಪ್ರಯೋಜನ ಪಡೆದುಕೊಳ್ಳಲಿವೆ ಎಂದೇ ವಿಶ್ಲೇಷಿಸಲಾಗಿದೆ.

    ಇದನ್ನೂ ಓದಿ; ಬಾಹ್ಯಾಕಾಶಯಾನದಲ್ಲಿ ಎಲಾನ್​ ಮಸ್ಕ್​ನ ಸ್ಪೇಸ್​ ಎಕ್ಸ್​ ಸಂಸ್ಥೆ ತ್ರಿವಿಕ್ರಮ 

    ಈ ಬ್ಯಾಟರಿಯಂದಾಗಿ ವಿದ್ಯುತ್​ ಚಾಲಿತ ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ. ಬಹುದೂರದವರೆಗೆ ಪ್ರಯಾಣ ಸಾಧ್ಯವಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಟೆಸ್ಲಾ ಕಂಪನಿಯನ್ನು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಿಸಲಿದೆ.

    ಸದ್ಯ ವಿದ್ಯುತ್​ಚಾಲಿತ ವಾಹನಗಳ ಬಳಕೆಗೆ ಅಡ್ಡಿಯಾಗಿರುವ ಸಂಗತಿಗಳೆಂದರೆ, ಕಾರಿನ ಬೆಲೆ ಹೆಚ್ಚಾಗಿರುವುದು ಹಾಗೂ ಒಮ್ಮೆ ಚಾರ್ಜ್​ ಮಾಡಿದರೆ ಕಾರು ಬಹು ದೂರದವರೆಗೆ ಸಂಚರಿಸಲು ಸಾಧ್ಯವಾಗದಿರುವುದು. ಟೆಸ್ಲಾ ಕಂಪನಿ ತನ್ನ ‘ಮಿಲಿಯನ್​ ಮೈಲ್​’ ಬ್ಯಾಟರಿಯೊಂದಿಗೆ ಇವೆರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದೆ.
    ದುಬಾರಿಯಾಗಿರುವ ಬ್ಯಾಟರಿ ಬೆಲೆ ಇಳಿಯಲಿದೆ ಹಾಗೂ ಅತಿ ಧೀರ್ಘ ಕಾಲದವರೆಗೆ ಇದನ್ನು ಬಳಸಲು ಸಾಧ್ಯವಾಗುವುದರಿಂದ ಹೆಚ್ಚಿನ ಮೈಲೇಜ್​ ಕೂಡ ಸಾಧ್ಯವಾಗಲಿದೆ. 2021ರ ವೇಳೆಗೆ ಇದು ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಕಂಪನಿ ಹೇಳಿದೆ.

    ಇದನ್ನೂ ಓದಿ; ವಿವಾದದ ನಡುವೆ ಭಾರತ- ನೇಪಾಳ ಗಡಿಯಲ್ಲಿ ಹುಟ್ಟಿಕೊಂಡ ಮತ್ತೊಂದು ‘ಬಾರ್ಡರ್​’ 

    ಈ ಬ್ಯಾಟರಿ ಬಗ್ಗೆ ವಾಹನ ಉತ್ಪಾದನೆ ಕ್ಷೇತ್ರದಲ್ಲಿ ಭಾರಿ ಚರ್ಚೆಗಳಾಗುತ್ತಿವೆ. ಕಡಿಮೆ ದರದಲ್ಲಿ ವಿದ್ಯತ್​ಚಾಲಿತ ವಾಹನಗಳು ಲಭ್ಯವಾಗುವುದಾದರೆ, ತೈಲ ಹಾಗೂ ತೈಲೋತ್ಪನ್ನಗಳ ಬೇಡಿಕೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ. ಅಂತೆಯೇ, ಸದ್ಯ ಬಳಕೆಯಲ್ಲಿರುವ ಸಾಂಪ್ರದಾಯಿಕ ವಾಹನಗಳ ಬೇಡಿಕೆಯೂ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

    ಮಾರಕ ಕರೊನಾಗೆ ನಂಜನಗೂಡಿನಲ್ಲಿ ತಯಾರಾಗುತ್ತಿರುವ ಲಸಿಕೆ ಬಳಕೆಗೆ ಅನುಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts