More

    ಬಾಹ್ಯಾಕಾಶಯಾನದಲ್ಲಿ ಹೊಸ ಯುಗಾರಂಭ, ಅಮೆರಿಕದ ನೆಲದಿಂದಲೇ ಹಾರಿದ ಗಗನಯಾನಿಗಳು

    ಫ್ಲೋರಿಡಾ: ಇಲ್ಲಿನ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಸಾದ ಇಬ್ಬರು ಗಗನಯಾನಿಗಳನ್ನು ಹೊತ್ತ ಸ್ಪೇಸ್​ ಎಕ್ಸ್​ ಸಂಸ್ಥೆಯ ರಾಕೆಟ್​ ಯಶಸ್ವಿಯಾಗಿ ಆಗಸಕ್ಕೆ ಚಿಮ್ಮಿತು.
    ಸ್ಪೇಸ್​ ಎಕ್ಸ್​ ಸಂಸ್ಥೆಯ ಫಾಲ್ಕನ್​ ರಾಕೆಟ್​ 9ರಲ್ಲಿ ಗಗನಯಾನಿಗಳಾದ ಡಗ್ಲಸ್​ ಹರ್ಲಿ, ರಾಬರ್ಟ್​ ಬೆಹ್ನ​ಕನ್​ ಭೂಮಿಯಿಂದ ಅಂದಾಜು 402 ಕಿ.ಮೀ (250 ಮೈಲು)ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸೇರಿಕೊಂಡರು. ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಹಾಗೂ ಉಪಾಧ್ಯಕ್ಷ ಮೈಕ್​ ಪೆನ್ಸ್​ ಈ ಅಭೂತಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

    ಇದನ್ನೂ ಓದಿ; ನೂರಾರು ಭಾರತೀಯರನ್ನು ಕರೊನಾದಿಂದ ಕಾಪಾಡಿದ ಏರ್​ ಇಂಡಿಯಾ ಸಿಬ್ಬಂದಿ ಸಮಯ ಪ್ರಜ್ಞೆ 

    ಈ ಯಾನವು ಹಲವು ಇತಿಹಾಸ ನಿರ್ಮಿಸಿದೆ. ಬಾಹ್ಯಾಕಾಶ ಯಾನದಲ್ಲಿ ಹೊಸ ಯುಗಾರಂಭಕ್ಕೆ ನಾಂದಿ ಹಾಡಿದೆ. ಬರೋಬ್ಬರಿ 11 ವರ್ಷಗಳ ಬಳೀಕ ಅಮೆರಿಕ ತನ್ನದೇ ನೆಲದ ಮೂಲಕ ಗಗನಯಾನಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದೆ. ಈವರೆಗೆ ಅಮೆರಿಕ ಈ ಯಾನಕ್ಕಾಗಿ ರಷ್ಯಾವನ್ನು ಅವಲಂಬಿಸಿತ್ತು. ಅಲ್ಲದೇ. 1981ರ ಬಳಿಕ ಮೊದಲ ಬಾರಿಗೆ ಹೊಸ ಗಗನನೌಕೆಯಲ್ಲಿ ಅಮೆರಿಕದ ಗಗನಯಾನಿಗಳು ಪ್ರಯಾಣಿಸಿದಂತಾಗಿದೆ.

    ಸ್ಪೇಸ್​​ ಎಕ್ಸ್​ ಸಂಸ್ಥೆ ಗಗನಯಾನಿಗಳ ಪ್ರಯಾಣಕ್ಕೆಂದೇ ಕ್ರ್ಯೂ ಡ್ರ್ಯಾಗನ್​ ಸ್ಪೇಸ್​ಕ್ರಾಫ್ಟ್​ ನಿರ್ಮಿಸಿತ್ತು. ಶನಿವಾರ ಎಲ್ಲವೂ ನಿಗದಿಯಂತೆ ನಡೆಯಲಿದೆ ಎಂದು ಸ್ಪೇಸ್​ ಎಕ್ಸ್​ ಸಂಸ್ಥೆಯ ಇಂಜಿನಿಯರ್​ಗಳು ಗಗನಯಾನಿಗಳಿಗೆ ತಿಳಿಸಿದ್ದರು. ಅದರಂತೆ ಭಾನುವಾರ ಬೆಳಗಿನ ಜಾವ ಗಗನನೌಕೆ ಯಶಸ್ವಿಯಾಗಿ ಉಡ್ಡಯನ ಮಾಡಿತು. ಇದರಲ್ಲಿನ ಗಗನಯಾನಿಗಳು ನಾಲ್ಕು ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಲ ಕಳೆಯಲಿದ್ದಾರೆ.

    ಇದನ್ನೂ ಓದಿ; ಮೊಬೈಲ್​ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್​ ಶಿಫಾರಸು 

    ಅಲ್ಲದೇ, ಸ್ಪೇಸ್​ ಎಕ್ಸ್​ ಈ ಕಾರ್ಯದಲ್ಲಿ ಯಶಸ್ವಿಯಾಗುವ ಮೂಲಕ ಇದನ್ನು ಸಾಧಿಸಿದ ಜಗತ್ತಿನ ಮೊದಲ ಖಾಸಗಿ ಸಂಸ್ಥೆ ಎನಿಸಿದೆ. ಇದಾದ ಬಳಿಕ ಸ್ಪೇಸ್​ ಎಕ್ಸ್​ ಸಂಸ್ಥೆ ನಿಯಮಿತವಾಗಿ ನಾಸಾ ಅಭ್ಯರ್ಥಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕಾರ್ಯದಲ್ಲಿ ತೊಡಗಲಿದೆ.

    ಈ ಯಾತ್ರೆಯ ಇನ್ನೊಂದು ವಿಶೇಷವೆಂದರೆ, ಕರೊನಾ ಸಂಕಷ್ಟದ ನಡುವೆಯೇ ಈ ಬಾಹ್ಯಾಕಾಶ ಉಡ್ಡಯನ ನಡೆಸಲಾಗಿದೆ. ಹೀಗಾಗಿ, ಗಗನಯಾನಿಗಳಿಬ್ಬರನ್ನೂ ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಬ್ಬರ ಫಲಿತಾಂಶವೂ ನೆಗೆಟಿವ್​ ಬಂದ ಬಳಿಕವಷ್ಟೇ ಯಾತ್ರೆಗೆ ಅವಕಾಶ ಕಲ್ಪಿಸಲಾಯಿತು.

    ಇದನ್ನೂ ಓದಿ; ಬುಕ್​ ಅಲ್ಲ, ಟ್ಯಾಬ್​ ಹಿಡಿದು ಹೋಗಬೇಕಿಗ ಶಾಲೆಗೆ; ಆನ್​ಲೈನ್​ ಮೋಡ್​ಗೆ ಶಿಫ್ಟ್​ ಆದ ಶಿಕ್ಷಣ 

    ಇದಕ್ಕೂಮುನ್ನ, ಎರಡು ಬಾರಿ ಈ ಪರೀಕ್ಷೆ ನಡೆಸಿ ಹಲವು ವಾರಗಳವರೆಗೆ ಇಬ್ಬರನ್ನೂ ಕ್ವಾರಂಟೈನ್​ನಲ್ಲಿರಿಸಿ ಯಾತ್ರೆಗೆ ಸಜ್ಜುಗೊಳಿಸಲಾಗಿತ್ತು. ಇದಕ್ಕೂ ಮುನ್ನ ಮೇ 27ರಂದು ನಡೆಯಬೇಕಿದ್ದ ಉಡ್ಡಯನವನ್ನು ತಾಂತ್ರಿಕ ಕಾರಣದಿಂದಾಗಿ ಕೊನೆಯ ಕ್ಷಣದಲ್ಲಿ ರದ್ದುಪಡಿಸಲಾಗಿತ್ತು.

    ಗಗನಯಾನಿಗಳನ್ನು ಹೊತ್ತು ಸಾಗಿದ ಬಾಹ್ಯಾಕಾಶ ನೌಕೆಯ ಉಡ್ಡಯನದ ಕ್ಷಣಗಳು ಇಲ್ಲಿವೆ…

    ಬಾಹ್ಯಾಕಾಶ ಯಾನದಲ್ಲಿಯೇ ಹೊಸ ಯುಗಾರಂಭಕ್ಕೆ ಸಾಕ್ಷಿಯಾದ ಕ್ಷಣ, ಸ್ಪೇಸ್​ ಎಕ್ಸ್​ ರಾಕೆಟ್​ ಉಡ್ಡಯನ

    ರಷ್ಯಾ, ಅಮೆರಿಕ, ಚೀನಾ ಸರ್ಕಾರಿ ಸಂಸ್ಥೆಗಳಿಂದ ಮಾತ್ರ ಸಾಧ್ಯವಾಗಿದ್ದ ಬಾಹ್ಯಾಕಾಶಯಾನವನ್ನು ಇದೇ ಮೊದಲ ಬಾರಿಗೆ ಖಾಸಗಿ ಸಂಸ್ಥೆಯೊಂದು ನಡೆಸಿ, ಹೊಸ ಇತಿಹಾಸ ಬರೆದಿದೆ.

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 30, 2020

    ‘X Æ A-12’ ನಂಬರ್​ ಪ್ಲೇಟ್​ ಅಲ್ಲ…., ಎಲಾನ್​ ಮಸ್ಕ್​ ಮಗನ ಹೆಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts