More

    ವಿವಾದದ ನಡುವೆ ಭಾರತ- ನೇಪಾಳ ಗಡಿಯಲ್ಲಿ ಹುಟ್ಟಿಕೊಂಡ ಮತ್ತೊಂದು ‘ಬಾರ್ಡರ್​’

    ನವದೆಹಲಿ: ಸದ್ಯ ಭಾರತದೊಂದಿಗೆ ನೆರೆ ರಾಷ್ಟ್ರಗಳದ್ದು ಗಡಿ ತಂಟೆ. ಅತ್ತ ಲಡಾಖ್​ನಲ್ಲಿ ಚೀನಾ ಸೇನೆಯನ್ನೇ ಜಮಾಸಿದ್ದರೆ, ಇತ್ತ ನೇಪಾಳ ಸಂಸತ್ತಿನಲ್ಲಿ ಭಾರತದ ಭೂಪ್ರದೇಶವನ್ನು ಒಳಗೊಂಡ ನಕ್ಷೆಯನ್ನು ಮಂಡಿಸಲಾಗಿದೆ.

    ಈ ಗಡಿ ವಿವಾದಗಳ ನಡುವೆಯೇ, ನೇಪಾಳ ಹಾಗೂ ಭಾರತದ ನಡುವಿನ ನೋ ಮ್ಯಾನ್ಸ್​ ಲ್ಯಾಂಡ್​ ಅಥವಾ ಅಂತಾರಾಷ್ಟ್ರೀಯ ಗಡಿಯಲ್ಲಿ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇನ್ನೂ ವಿಶೇಷವೆಂದರೆ, ಈ ಮಗುವಿಗೆ ದಂಪತಿ ‘ಬಾರ್ಡರ್​’ ಎಂದು ಹೆಸರಿಟ್ಟಿದ್ದಾರೆ.

    ಇದನ್ನೂ ಓದಿ; ಮೋದಿಗೆ ಕೈರುಚಿ ಬಡಿಸೋದು ಮಿಸ್​ ಆಯ್ತಲ್ಲಾ ಎಂದು ಪರಿತಪಿಸಿದ ಪ್ರಧಾನಿ 

    ದಂಪತಿ ಮೂಲತಃ ಉತ್ತರಪ್ರದೇಶದ ಮಹಾರಾಜಾಗಂಜ್​ ಜಿಲ್ಲೆಯವರು. ನೇಪಾಳದ ನವಾಲ್​ಪಾರಸಿಯಲ್ಲಿರುವ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಕ್ಕೆಂದು ತೆರಳಿದ್ದರು. ಆದರೆ, ಲಾಕ್​ಡೌನ್​ ಕಾರಣದಿಂದಾಗಿ ಕೆಲಸ ಸ್ಥಗಿತವಾಗಿತ್ತು. ಈ ಕಾರಣದಿಂದಾಗಿ ತಮ್ಮೂರಿಗೆ ತೆರಳಲು ಗಡಿ ಭಾಗಕ್ಕೆ ಆಗಮಿಸಿದ್ದರು.

    ಪರಿಶೀಲನೆಗಾಗಿ ಗಡಿಯಲ್ಲಿ ನಿಂತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಪತಿ ಲಾಲಾರಾಮ್​ ಹಾಗೂ ಸರದಿಯಲ್ಲಿ ನಿಂತಿದ್ದ ಮತ್ತೊಬ್ಬ ಮಹಿಳೆ ಆಕೆಗೆ ಹೆರಿಗೆ ಮಾಡಿಸಿದ್ದಾರೆ. ಬಳಿಕ ಆಕೆಯನ್ನು ನೇಪಾಳದ ನೌತಾನ್ವಾ ಸಮುದಾಯಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇದನ್ನೂ ಓದಿ; ಸರ್ಕಾರಿ ನೌಕರರಿಗೆ ಸಂಬಳ ಪಾವತಿಸಲು ಹಣವಿಲ್ಲ; 5,000 ಕೋಟಿ ರೂ. ನೀಡಿ ಎಂದು ಕೇಂದ್ರದ ಮೊರೆ ಹೋದ ಡಿಸಿಎಂ 

    ತಾಯಿ ಜಮ್​ತಾರಾ ಹಾಗೂ ಗಂಡು ಮಗು ಆರೋಗ್ಯದಿಂದ ಇದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಇದಲ್ಲದೇ, ಈ ದಂಪತಿಗೆ ಇನ್ನಿಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಪುತ್ರ ಇದ್ದಾನೆ.

    ಕರೊನಾ ನಿಗ್ರಹ ಲಸಿಕೆ ಶೇ.99 ಯಶಸ್ವಿ; ಚೀನಿ ಕಂಪನಿ ವಿಶ್ವಾಸ, ಬೀಜಿಂಗ್​ ಹೊರವಲಯದಲ್ಲಿ​ ಬೃಹತ್ ಕಾರ್ಖಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts