More

    ಮತ್ತೆ ಗಡಿ ವಿವಾದ ಕೆದಕಿದ ಮಹಾರಾಷ್ಟ್ರ: ನಾಗ್ಪುರ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ವಿರುದ್ಧ ನಿರ್ಣಯ

    ಬೆಳಗಾವಿ: ಕರ್ನಾಟಕದ ವಿರುದ್ಧ ಪದೇ ಪದೇ ಗಡಿ ವಿವಾದ ಕೆದಕುವ ಮಹಾರಾಷ್ಟ್ರ, ಸೋಮವಾರ ನಾಗ್ಪುರದಲ್ಲಿ ಆರಂಭವಾದ ಅಲ್ಲಿನ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ವಿರುದ್ಧ ನಿರ್ಣಯ ಮಾಡಿದೆ.

    ಅಜಿತ್ ಪವಾರ್ ಗಡಿ ವಿವಾದವನ್ನು ಪ್ರಸ್ತಾಪಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಯಲ್ಲಿ ಕರ್ನಾಟಕಕ್ಕೆ ತೆರಳುವ ಮಹಾರಾಷ್ಟ್ರ ಸಚಿವರನ್ನು ತಡೆಯುವುದಿಲ್ಲವೆಂಬ ಮಾತನ್ನು ಬಸವರಾಜ ಬೊಮ್ಮಾಯಿ ಕೊಟ್ಟಿದ್ದರು. ಆದರೆ, ಈಗ ಮಾತಿಗೆ ತಪ್ಪಿದ್ದಾರೆ ಎಂದು ಅದನ್ನು ಖಂಡಿಸುವ ನಿರ್ಣಯ ಮಾಡಿದ್ದಾರೆ. ಅಲ್ಲಿನ ವಿಧಾನಮಂಡಲ ಅಧಿವೇಶನ ಮುಗಿದ ನಂತರ ಸಚಿವರ ತಂಡವನ್ನು ಬೆಳಗಾವಿಗೆ ಕಳುಹಿಸಲು ತೀರ್ಮಾನ ಮಾಡಿದ್ದಾರೆ.

    ರಾಜ್ಯದಲ್ಲಿ ಆಕ್ರೋಶ
    ಮಹಾರಾಷ್ಟ್ರದ ಈ ನಿರ್ಧಾರಕ್ಕೆ ರಾಜ್ಯದಲ್ಲಿ ಆಕ್ರೋಶ ಕೇಳಿ ಬಂದಿದೆ. ಕೂಡಲೇ ರಾಜ್ಯದ ಸಚಿವರನ್ನು ಜತ್, ಅಕ್ಕಲಕೋಟೆಗೆ ಕಳುಹಿಸಬೇಕು. ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷರನ್ನು ಕಳುಹಿಸಬೇಕೆಂದು ಕನ್ನಡ ಪರ ಹೋರಾಟಗಾರ ಅಶೋಕ್ ಚಂದರಗಿ ಒತ್ತಾಯಿಸಿದ್ದಾರೆ.

    ಓದಿದ್ದು 8ನೇ ತರಗತಿ ಆದ್ರೆ ವೈದ್ಯೆಯನ್ನೇ ಪಟಾಯಿಸಿದ ಈತನ ಹಿಸ್ಟರಿ ನೋಡಿ ದಂಗಾದ ಪೊಲೀಸರು!

    ಉದ್ರೇಕಕಾರಿ ಫೋಟೋ, ವಿಡಿಯೋ ಮೂಲಕ ಯುವಕರಿಗೆ ಬಲೆ ಬೀಸುತ್ತಿದ್ದ ಕಿಲಾಡಿ ಲೇಡಿಯ ಕರಾಳ ಕತೆಯಿದು!

    ತಮಿಳುನಾಡು ರಾಜಕಾರಣದಲ್ಲಿ ಅಣ್ಣಾಮಲೈ ದುಬಾರಿ ವಾಚ್​ನದ್ದೇ ಸದ್ದು! ಇದರ ವಿಶೇಷತೆ ತಿಳಿದ್ರೆ ಹುಬ್ಬೇರಿಸ್ತೀರಾ​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts