ನಿಜಾಮಾಬಾದ್: ಮನೆ ದರೋಡೆಗೆ ಬಂದ ಕಳ್ಳರು ಹಣದ ಜತೆಗೆ ಟೊಮ್ಯಾಟೋ ಕದ್ದಿರುವ ವಿಚಿತ್ರ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಬೋಧನ್ ಪಟ್ಟಣದಲ್ಲಿ ನಡೆದಿದೆ.
ಇದನ್ನೂ ಓದಿ: ಮಾವು ತಿಂದ ಬಳಿಕ ಯುವತಿ ಸಾವು: ಕುಟುಂಬಸ್ಥರ ಹೇಳಿಕೆ ದಾಖಲಿಸಿಕೊಂಡು ತನಿಖೆಗೆ ಮುಂದಾದ ಪೊಲೀಸ್..!
ರಫಿ ಎಂಬುವರ ಮನೆಯಲ್ಲಿಯೇ ಕಳ್ಳತನವಾಗಿದ್ದು, ಸೋಮವಾರ ರಾತ್ರಿ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದರು. ಅದೇ ದಿನ ರಾತ್ರಿ ಇವರ ಮನೆಗೆ ಕಳ್ಳರು ನುಗ್ಗಿದ್ದು, ಮನೆಯಲ್ಲಿದ್ದ ನಗದು, ಚಿನ್ನಾಭರಣದ ಜತೆಗೆ ಫ್ರಿಡ್ಜ್‌ನಲ್ಲಿದ್ದ ಟೊಮ್ಯಟೋವನ್ನು ಸಹ ಕದ್ದಕೊಂಡು ಹೋಗಿದ್ದಾರೆ.
ರಫಿ ಹಾಗೂ ಆತನ ಕುಟುಂಬ ಮಂಗಳವಾರ ಬೆಳಗ್ಗೆ ತಮ್ಮ ಮನೆಗೆ ವಾಪಸ್ಸಾದ ವೇಳೆ ಮನೆಯ ಬೀಗ ಮುರಿದಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ಕೂಡಲೇ ಒಳಗೆ ಹೋಗಿ ನೋಡಿದಾಗ ಎಲ್ಲವೂ ಸಾಮಗ್ರಿಗಳಿಂದ ಅಸ್ತವ್ಯಸ್ತವಾಗಿ ಬಿದ್ದಿರುವುದನ್ನು ಕಂಡ ಕುಟುಂಬಸ್ಥರು ತಮ್ಮ ಮನೆಯ ಕಳ್ಳತನವಾಗಿದ್ದನ್ನು ಅರಿತುಕೊಂಡಿದ್ದಾರೆ. ಕೂಡಲೇ ಏನೆಲ್ಲ ವಸ್ತುಗಳು ಹೋಗಿವೆ ಎಂದು ನೋಡಿದಾಗ ಮನೆಯಲ್ಲಿದ್ದ 1.28 ಲಕ್ಷ ರೂಪಾಯಿ ನಗದು ಹಾಗೂ 12 ತೊಲ ಚಿನ್ನಾಭರಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಕಾಲೇಜ್ ಪ್ರೊಫೆಸರ್ ಕೈ ಕತ್ತರಿಸಿದ ಪ್ರಕರಣ: ಆರು ಪಿಎಫ್‌ಐ ಕಾರ್ಯಕರ್ತರು ದೋಷಿ, ಐವರನ್ನು ಖುಲಾಸೆಗೊಳಿಸಿದ ನ್ಯಾಯಾಲಯ
ಬಳಿಕ ಅಡುಗೆ ಮನೆಗೆ ಬಂದು ನೋಡಿದಾಗ ಫ್ರಿಡ್ಜ್ ಬಾಗಿಲು ಓಪನ್ ಆಗಿದ್ದನ್ನು ನೋಡಿ, ಮುಚ್ಚಲೆಂದು ಹೋದಾಗ ಅದರಲ್ಲಿಟ್ಟ ಒಂದು ಕಿಲೋ ಟೊಮ್ಯಾಟೋ ಕಾಣದೇ ಇದ್ದುದ್ದನ್ನು ಗಮನಿಸಿದ್ದಾರೆ. ಕೊನೆಗೆ ರಫಿ ಪೊಲೀಸರಿಗೆ ಮನೆ ಕಳ್ಳತನದ ಬಗ್ಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಎಸ್‌ಎಸ್‌ಐ ಪೀಟರ್ ಹಾಗೂ ಕ್ಲೂಸ್ ಟೀಮ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.(ಏಜೆನ್ಸೀಸ್)
ದರೋಡೆಗೆ ಬಂದು ಲಕ್ಷಾಂತರ ನಗದು, ಚಿನ್ನದ ಜತೆ ಫ್ರಿಡ್ಜ್‌ನಲ್ಲಿದ್ದ ಟೊಮ್ಯಾಟೋವನ್ನು ಎಗರಿಸಿದ ಖದೀಮರು
You Might Also Like
ಈ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಕುಕ್ಕರ್‌ನಲ್ಲಿ ಬೇಯಿಸಬೇಡಿ, ವಿಷಕಾರಿಯಾಗಬಹುದು ಎಚ್ಚರ! Pressure Cooker
Pressure Cooker : ಪ್ರೆಶರ್ ಕುಕ್ಕರ್ ಇಂದು ಪ್ರತಿ ಮನೆಗಳಲ್ಲೂ ಅಗತ್ಯವಿರುವ ಅಡುಗೆ ಸಲಕರಣೆಗಳಲ್ಲಿ ಒಂದಾಗಿದೆ.…
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…