More

    ಕನ್ನಡಿಗ ಜಾವಗಲ್ ಶ್ರೀನಾಥ್ ದಾಖಲೆ ಹಿಂದಿಕ್ಕಿದ ಜಸ್‌ಪ್ರೀತ್ ಬುಮ್ರಾ..!

    ಚೆನ್ನೈ: ಭಾರತದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶಿಷ್ಟ ದಾಖಲೆ ಬರೆದರು. ಅವರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 17 ಪಂದ್ಯಗಳ ಬಳಿಕ ತವರಿನಲ್ಲಿ ಆಡಿದರು. ಬುಮ್ರಾ 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ 17 ಟೆಸ್ಟ್ ಪಂದ್ಯಗಳಿಂದ 79 ವಿಕೆಟ್ ಕಬಳಿಸಿದ್ದಾರೆ. ಇದಕ್ಕೂ ಮೊದಲು ಕನ್ನಡಿಗ ಜಾವಗಲ್ ಶ್ರೀನಾಥ್ 12 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಆಡಿದ್ದರು. ಇದೀಗ ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ಹೆಸರಿನಲ್ಲಿದ್ದ ದಾಖಲೆಯನ್ನು ಬುಮ್ರಾ ಹಿಂದಿಕ್ಕಿದರು.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸೆನ್ ಟ್ವೀಟ್‌ಗೆ ಪ್ರಧಾನಿ ಮೋದಿ ಕೊಟ್ಟ ಉತ್ತರವೇನು ಗೊತ್ತೇ?, 

    ಜಾವಗಲ್ ಶ್ರೀನಾಥ್ 12 ಟೆಸ್ಟ್ ಪಂದ್ಯಗಳ ತವರಿನಲ್ಲಿ ಆಡಿದರೆ, ಆರ್‌ಪಿ ಸಿಂಗ್ 11 ಟೆಸ್ಟ್, ದಿಗ್ಗಜ ಸಚಿನ್ ತೆಂಡುಲ್ಕರ್ ಹಾಗೂ ಆಶಿಶ್ ನೆಹ್ರಾ ತಲಾ 10 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಕಣಕ್ಕಿಳಿದಿದ್ದರು. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 3 ವರ್ಷಗಳ ಬಳಿಕ ಬುಮ್ರಾ ತವರಿನಲ್ಲಿ ಕಣಕ್ಕಿಳಿದರು. ವೆಸ್ಟ್ ಇಂಡೀಸ್‌ನ ಡರೇನ್ ಗಂಗಾ 17 ಟೆಸ್ಟ್ ಪಂದ್ಯಗಳ ಬಳಿಕ ತವರಿನಲ್ಲಿ ಆಡಿದ್ದರು. ಇದೀಗ ಬುಮ್ರಾ ಕೂಡ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಚೆನ್ನೈನಲ್ಲಿ ಶುಕ್ರವಾರ ಆರಂಭಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ತಮ್ಮ 7ನೇ ಓವರ್‌ನಲ್ಲಿ ಡಾನ್ ಲಾರೆನ್ಸ್ ಅವರನ್ನು ಎಲ್‌ಬಿ ಬಲೆಗೆ ಬೀಳಿಸುವ ಮೂಲಕ ಮೊದಲ ವಿಕೆಟ್ ಪಡೆದರು.

    ಚೆಪಾಕ್ ಅಂಗಳದಲ್ಲಿ ಆಂಗ್ಲರಿಗೆ ಮೊದಲ ದಿನದ ಗೌರವ, ದಾಖಲೆ ಬರೆದ ರೂಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts