More

    ಚೆಪಾಕ್ ಅಂಗಳದಲ್ಲಿ ಆಂಗ್ಲರಿಗೆ ಮೊದಲ ದಿನದ ಗೌರವ, ದಾಖಲೆ ಬರೆದ ರೂಟ್

    ಚೆನ್ನೈ: ನಾಯಕ ಜೋ ರೂಟ್ (128*ರನ್, 197 ಎಸೆತ, 14 ಬೌಂಡರಿ, 1 ಸಿಕ್ಸರ್) ಹಾಗೂ ಡೊಮಿನಿಕ್ ಸಿಬ್ಲೆ (87 ರನ್, 286 ಎಸೆತ, 12 ಬೌಂಡರಿ) ಜೋಡಿಯ ಭರ್ಜರಿ ಜತೆಯಾಟಕ್ಕೆ ತಲೆಬಾಗಿದ ಆತಿಥೇಯ ಭಾರತ ತಂಡ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಮೊದಲ ದಿನದಾಟದ ಗೌರವ ಬಿಟ್ಟುಕೊಟ್ಟಿತು. ಚೆಪಾಕ್ ಅಂಗಳದಲ್ಲಿ ಶುಕ್ರವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ದಿನದಂತ್ಯಕ್ಕೆ 89.3 ಓವರ್‌ಗಳಲ್ಲಿ 3 ವಿಕೆಟ್‌ಗೆ 263 ಗಳಿಸಿದೆ. ಜೋ ರೂಟ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ 9ನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು.

    ಇದನ್ನೂ ಓದಿ: ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸೆನ್ ಟ್ವೀಟ್‌ಗೆ ಪ್ರಧಾನಿ ಮೋದಿ ಕೊಟ್ಟ ಉತ್ತರವೇನು ಗೊತ್ತೇ?, 

    ಕರೊನಾ ಕಾಲದಲ್ಲಿ ಭಾರತದಲ್ಲಿ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಪಂದ್ಯ ಇದಾಗಿದ್ದು, ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳ ಅಬ್ಬರದ ಎದುರು ಭಾರತೀಯ ಬೌಲರ್‌ಗಳು ಸಂಪೂರ್ಣ ಮಂಕಾದರು. ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಎಚ್ಚರಿಕೆಯ ಆರಂಭ ಕಂಡಿತು. ಆರಂಭಿಕರಾದ ಡೊಮಿನಿಕ್ ಸಿಬ್ಲೆ ಹಾಗೂ ರೋರಿ ಬರ್ನ್ಸ್ (33) ಜೋಡಿ ಮೊದಲ ವಿಕೆಟ್‌ಗೆ 63 ರನ್ ಕಲೆಹಾಕಿತು. ಸ್ಥಳೀಯ ಪ್ರತಿಭೆ ಆರ್.ಅಶ್ವಿನ್ ಈ ಜೋಡಿಯನ್ನು ಬೇರ್ಪಡಿಸಲು ಯಶಸ್ವಿಯಾದರು. ಅಶ್ವಿನ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿದ ರೋರಿ ಬರ್ನ್ಸ್ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. ಇದರ ಬೆನ್ನಲ್ಲೇ ಡೇನಿಯಲ್ ಲಾರೆನ್ಸ್ (0) ಕೂಡ ನಿರಾಸೆ ಅನುಭವಿಸಿದರು.

    ಚೆಪಾಕ್ ಅಂಗಳದಲ್ಲಿ ಆಂಗ್ಲರಿಗೆ ಮೊದಲ ದಿನದ ಗೌರವ, ದಾಖಲೆ ಬರೆದ ರೂಟ್

    *ಕಾಡಿದ ರೂಟ್-ಸಿಬ್ಲೆ ಜೋಡಿ
    ಇಂಗ್ಲೆಂಡ್ ತಂಡ 63 ರನ್‌ಗಳಿಗೆ 2 ವಿಕೆಟ್‌ಗೆ ಕಳೆದುಕೊಂಡಿದ್ದ ವೇಳೆ ಜತೆಯಾದ ಜೋ ರೂಟ್ ಹಾಗೂ ಡೊಮಿನಿಕ್ ಸಿಬ್ಲೆ ಜೋಡಿ ಭಾರತಕ್ಕೆ ತಿರುಗೇಟು ನೀಡಿತು. ಭೋಜನ ವಿರಾಮದವರೆಗೂ ವಿಕೆಟ್ ಕಾಯ್ದುಕೊಂಡ ಈ ಜೋಡಿ, ಎರಡನೇ ಅವಧಿಯಲ್ಲೂ ಯಾವುದೇ ಅಪಾಯವಾಗದಂತೆ ಎಚ್ಚರಿಕೆ ವಹಿಸಿತು. ಒಂದೆಡೆ, ರೂಟ್ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್‌ಗೆ ಮುಂದಾದರೆ, ಸಿಬ್ಲೆ ಸಂಪೂರ್ಣ ಮಂದಗತಿ ಬ್ಯಾಟಿಂಗ್ ನಡೆಸಿದರು. ಜಸ್‌ಪ್ರಿತ್ ಬುಮ್ರಾ ಎಸೆದ ದಿನದ ಕಡೇ ಓವರ್‌ನ 3ನೇ ಎಸೆತದಲ್ಲಿ ಸಿಬ್ಲೆ ಎಲ್‌ಬಿ ಬಲೆಗೆ ಬಿದ್ದರು. ಈ ಜೋಡಿ 3ನೇ ವಿಕೆಟ್‌ಗೆ 200 ರನ್ ಜತೆಯಾಟವಾಡಿತು. ಭಾರತಕ್ಕೆ ತಡೆಗೋಡೆಯಾಗಿದ್ದ ಈ ಜೋಡಿಯನ್ನು ಬೇರ್ಪಡಿಸಿದ ಬುಮ್ರಾ ದಿನದಾಟದ ಕಡೆಯಲ್ಲಿ ಇಂಗ್ಲೆಂಡ್‌ಗೆ ಶಾಕ್ ನೀಡಿದರು.

    ಇಂಗ್ಲೆಂಡ್: 89.3 ಓವರ್‌ಗಳಲ್ಲಿ 3 ವಿಕೆಟ್‌ಗೆ 263 (ಜೋ ರೂಟ್ 128*, ಸಿಬ್ಲೆ 87, ರೋರಿ ಬರ್ನ್ಸ್ 33, ಡೇನಿಯಲ್ ಲಾರೆನ್ಸ್ 0, ಜಸ್‌ಪ್ರೀತ್ ಬುಮ್ರಾ 40ಕ್ಕೆ 2, ಆರ್. ಅಶ್ವಿನ್ 68ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts