More

    ಸೇನಾ ವಾಹನದ ಮೇಲೆ ದಾಳಿ; ಬುಲೆಟ್​ ನಿರ್ಮಿಸಿದ್ದು ಅಮೆರಿಕನಾ?

    ಶ್ರೀನಗರ: ಕಳೆದ ಗುರುವಾರ ಜಮ್ಮು-ಕಾಶ್ಮೀರದ ಪೂಂಚ್​ ಜಿಲ್ಲೆಯಲ್ಲಿ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ಬೆಳಕಿಗೆ ಬಂದಿದೆ.

    ಪೂಂಚ್​ನ ಗಡಿ ಭಾಗ ಭಟ್ಟ ದುರ್ರಿಯನ್​ನಲ್ಲಿ ಉಗ್ರರು ನಡೆಸಿದ ನಡೆದ ಗ್ರೆನೇಡ್​ ಹಾಗೂ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಐವರು ಯೋಧರು ಸಜೀವ ದಹನವಾಗಿದ್ದರು.

    US ಸೇನೆಯ ಬುಲೆಟ್​ಗಳು

    ಇನ್ನು ಘಟನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು ಉಗ್ರು ಸೇನಾ ವಾಹನದ ಮೇಲೆ ದಾಳಿ ನಡೆಸಿದ ಗುಂಡುಗಳು ಯುಎಸ್​ ಹಾಘೂ ಚೀನಾ ಸೇನೆಗೆ ಸಂಬಂಧಿಸಿದ್ದು ಎಂದು ತಿಳಿದು ಬಂದಿದೆ.

    2021ರಲ್ಲಿ ಯುಎಸ್​ ಸೇನಾ ಪಡೆಗಳು ಅಫ್ಘಾನಿಸ್ಥಾನದಲ್ಲಿ ಬಿಟ್ಟು ಹೋಗಿದ್ದ ಶಸ್ತ್ರಾಸ್ತ್ರಗಳು ತಾಲಿಬಾನ್​ ಕೈಸೇರಿದ್ದು ಇವರುಗಳ ಮೂಲಕ ಲಷ್ಕರ್​-ಇ-ತೋಯ್ಬಾ(LET) ಹಾಗೂ ಜೈಶ್​-ಎ-ಮೊಹಮ್ಮದ್​(JEM) ಸಂಘಟನೆಗಳ ಸದಸ್ಯರ ಕೈ ಸೇರಿರಬಹುದು ಎಂದು ಹೇಳಲಾಗಿದೆ.

    Army Truck (1)

    ಇದನ್ನೂ ಓದಿ: ಭಾರತೀಯ ಸೈನಿಕರಿದ್ದ ಸೇನಾ ವಾಹನಕ್ಕೆ ದಿಢೀರ್ ಬೆಂಕಿ

    ಈ ದಾಳಿಯನ್ನು ಮುವರು ಪಾಕಿಸ್ತಾನಿ ಉಗ್ರರು ನಡೆಸಿದ್ದು ಈ ಹಂತದಲ್ಲಿ ನಾವು ಸ್ಥಳೀಯರ ಪಾತ್ರ ಇರುವ ಬಗ್ಗೆ ಹೇಳಲು ಸಾಧ್ಯವಿಲ್ಲ. ತನಿಖೆ ಪ್ರಗತಿಯಲ್ಲಿದ್ದು ನಾವು ಆದಷ್ಟು ಬೇಗ ಮಾಹಿತಿಯನ್ನು ತಿಳಿಸಲಾಗುವುದು ಎಂದು ಜಮ್ಮು-ಕಾಶ್ಮೀರ ಡಿಜಿಪಿ ಮುಖೇಶ್​​ ಸಿಂಗ್​ ತಿಳಿಸಿದ್ಧಾರೆ.

    40 ಮಂದಿ ವಶಕ್ಕೆ

    ಇನ್ನು ಗುರುವಾರ ಸೇನಾ ವಾಹನದ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ 40 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

    ಇಫ್ತಾರ್‌ಗೆ ಹಣ್ಣು ಸಾಗಿಸುತ್ತಿತ್ತು

    ಉಗ್ರರ ದಾಳಿಗೆ ತುತ್ತಾದ ಸೇನಾ ವಾಹನವು ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ಘಟಕವು ಸಂಗಿಯೋಟೆ ಗ್ರಾಮದಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟಕ್ಕೆ ಹಣ್ಣುಗಳು ಹಾಗೂ ಇತರೆ ಪದಾರ್ಥಗಳನ್ನು ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ.

    ಗುರುವಾರ ಸಂಜೆ 7 ಗಂಟೆಗೆ ಇಫ್ತಾರ್ ಕೂಟ ನಡೆಯಬೇಕಿತ್ತು. ಆದರೆ ಐವರು ಯೋಧರ ಹತ್ಯೆಯ ಆಘಾತಕಾರಿ ಸುದ್ದಿಯಿಂದ ಕೂಟವನ್ನು ರದ್ದುಪಡಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts