More

    VIDEO| ನೇಮಕಾತಿ ಹಗರಣ; ಪೊಲೀಸರ ಕಪಾಳಕ್ಕೆ ಬಾರಿಸಿದ YSRCP ನಾಯಕಿ

    ಹೈದರಾಬಾದ್​: ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

    ತೆಲಂಗಾಣ ಸರ್ಕಾರ ನಡೆಸಿದ ನೇಮಕಾತಿ ಪ್ರೀಕ್ಷಗೆಳಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ವಿಶೇಷ ತನಿಕಾ ತಂಡ(SIT) ಕಚೇರಿಗೆ ತೆರಳುವ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.

    ಕಪಾಳಮೋಕ್ಷ

    ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ YSRCP​ ಪಕ್ಷದ ನಾಯಕಿ ಶರ್ಮಿಳಾ SIT ಕಚೇರಿಗೆ ತೆರಳುವ ಮಾರ್ಗ ಮಧ್ಯೆ ಪೊಲೀಸರು ಅವರ ವಾಹನವನ್ನು ತಡೆಯುತ್ತಾರೆ. ಆದರೆ, ಇದಕ್ಕೆ ಒಪ್ಪದ ಶರ್ಮಿಳಾ ಪೊಲೀಸ್​ ಅಧಿಕಾರಿಗಳ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ.

    ಇದನ್ನೂ ಓದಿ: ಲಿಂಗಾಯತರೆಲ್ಲ ಭ್ರಷ್ಟರೆಂದು ನಾನು ಹೇಳಿಯೇ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

    ಈ ವೇಳೆ ಮಹಿಳಾ ಪೊಲೀಸ್​ ಅಧಿಕಾರಿ ಒಬ್ಬರು ಶರ್ಮಿಳಾ ಅವರ ಕೈಯನ್ನು ಹಿಡಿದು ಎಳೆಯುವುದು ಕಂಡು ಬರುತ್ತದೆ. ಇದಕ್ಕೆ ಕೋಪಗೊಂಡ ಶರ್ಮಿಳಾ ಮಹಿಳಾ ಅಧಿಕಾರಿ ಕೆನ್ನೆಗೆ ಭಾರಿಸುವುದು ವಿಡಿಯೋದಲ್ಲಿ ಕಂಡು ಬರುತ್ತದೆ.

    ವ್ಯಾಪಕ ಪ್ರತಿಭಟನೆ

    ಸರ್ಕಾರಿ ಸಂಸ್ಥೆಗಳಿಗೆ ತೆಲಂಗಾಣ ಸರ್ಕಾರ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಪಕ್ಷಗಳು ರಾಜ್ಯಾದ್ಯಂತ ಪ್ರತಿಭಟನೆಯನ್ನು ನಡೆಸುತ್ತಿವೆ. ಈವರೆಗೆ ವಿಶೇಷ ತನಿಖಾ ತಂಡವು ಹಗರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.

    ಪರೀಕ್ಷೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ವಿಪಕ್ಷಗಳಿ ಕೆಸಿಆರ್​ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದ್ದು ಸಿಬಿಐ ತನಿಖೆಗೆ ಆಗ್ರಹಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts