More

    ಭೂ ವ್ಯಾಜ್ಯ; ಸಹೋದರನನ್ನು ರಕ್ಷಿಸಲು ಹೋದ ಮಹಿಳೆಯ ಹತ್ಯೆ

    ಡಿಯೋರಿಯಾ: ತನ್ನ ಸಹೋದರನ ಮೇಲೆ ಹಲ್ಲೆ ನಡೆಸುತ್ತಿದ್ದ ಗುಂಪಿನಿಂದ ರಕ್ಷಿಸಲು ಮುಂದಾದ ಮಹಿಳೆಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಡಿಯೋರಿಯಾ ಜಿಲ್ಲೆಯ ಕುರ್ಮೌಟಾ ಠಾಕೂರ್​ ಗ್ರಾಮದಲ್ಲಿ ಘಟನೆ ನಡೆದಿದ್ದು ಹಳೇ ದ್ವೇಷದ ಹಿನ್ನಲೆ ಈ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.

    ಹಳೇ ವೈಷಮ್ಯ

    ಶೈಲೇಶ್​ ಸಾಹ್ನಿ ಕುಟುಂಬಸ್ಥರೊಂದಿಗೆ ಹಳೇ ವೈಷಮ್ಯ ಹೊಂದಿದ್ದ ಗುಂಪೊಂದು ಶುಕ್ರವಾರ ಸಂಜೆ ಯುವಕನ ಮೇಲೆ ಹಲ್ಲೆ ನಡೆಸಿತ್ತು. ಇದನ್ನು ತಿಳಿದು ಸ್ಥಳಕ್ಕೆ ತೆರಳಿದ ಮಹಿಳೆ ಅಲ್ಕಾ ಸಾಹ್ನಿ(25) ತನ್ನ ಸಹೋದರನ ರಕ್ಷಣೆಗೆ ಮುಂದಾಗಿದ್ದಾರೆ.

    ಇದನ್ನೂ ಓದಿ: ಬಿ.ವಿ. ಶ್ರೀನಿವಾಸ್​ ವಿರುದ್ಧ ಕಿರುಕುಳದ ಆರೋಪ; ಕಾಂಗ್ರೆಸ್​​ನಿಂದ ಮಹಿಳೆ ಉಚ್ಛಾಟನೆ

    ಈ ವೇಳೆ ಗುಂಪಿನಲ್ಲಿದ್ದ ಜಿತೇಂದ್ರ ಸಿಂಗ್ ಹಾಗೂ ರಾಜು ಸಿಂಗ್​ ಎಂಬುವವರು ಮಹಿಳೆ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಭೂ ವ್ಯಾಜ್ಯ

    ಭೂ ವ್ಯಾಜ್ಯ ಸಂಬಂಧ ಸಾಹ್ನಿ ಕುಟುಂಬ ಹಾಗೂ ಜಿತೇಂದ್ರ ಸಿಂಗ್​ ನಡುವೆ ವೈಷಮ್ಯವಿತ್ತು. ಇದೇ ವಿಚಾರಕ್ಕೆ ಸಾಹ್ನಿ ಕುಟುಂಬರ್ಸತರು ಗ್ರಾಮವನ್ನು ತೊರೆದು ಬೇರೆಡೆಗೆ ಸ್ಥಳಾಂತರಗೊಂಡಿದ್ದರು.

    ಶುಕ್ರವಾರ ಕಾರ್ಯನಿಮಿತ್ತ ಕುರ್ಮೌಟಾ ಠಾಕೂರ್​ ಗ್ರಾಮಕ್ಕರೆ ಭೇಟಿ ನೀಡಿದ್ದ ಶೈಲೇಶ್​ ಸಾಹ್ನಿ ಮೇಲೆ ಜಿತೇಂದ್ರ ಸಿಂಗ್​ ಹಾಗೂ ರಾಜು ಸಿಂಗ್​ ಹಲ್ಲೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಂಕಲ್ಪ್​ ಶರ್ಮಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts