More

    IPL 2023| ಹಾರ್ದಿಕ್​ ಪಾಂಡ್ಯ ಫಿಫ್ಟಿ-ಬೌಲರ್​ಗಳ ಸಂಘಟಿತ ದಾಳಿ; ಗುಜರಾತ್​​ ಟೈಟಾನ್ಸ್​ಗೆ 7ರನ್​ ಜಯ

    ಲಖನೌ: ನಾಯಕ ಹಾರ್ದಿಕ್​ ಪಾಂಡ್ಯ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ದಾಳಿಯ ಫಲವಾಗಿ ಗುಜರಾತ್​ ಟೈಟಾನ್ಸ್​ ತಂಡವು ಲಖನೌ ಸೂಪರ್​ಜೈಂಟ್ಸ್​ ವಿರುದ್ಧ 7ರನ್​ಗಳ ಜಯ ಸಾಧಿಸಿದೆ.

    ಲಖನೌನ ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟಾನ್ಸ್​ ತಂಡವು 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 135 ರನ್​ ಗಳಿಸಿತ್ತು.

    ಹಾರ್ದಿಕ್​-ಸಾಹ ಬಿರುಸಿನ ಆಟ

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟಾನ್ಸ್ ತಂಡವು ನಾಯಕ ಹಾರ್ದಿಕ್​ ಪಾಂಡ್ಯ(66ರನ್​, 50ಎಸೆತ, 2ಬೌಂಡರಿ, 4ಸಿಕ್ಸರ್​), ವಿಕೆಟ್​ ಕೀಪರ್​ ಬ್ಯಾಟ್ಸ್​ಮ್ಯಾನ್​ ವೃದ್ಧಿಮಾನ್​ ಸಾಹಾ(47ರನ್​, 37ಎಸೆತ, 6ಬೌಂಡರಿ) 72ರನ್​ಗಳ ಜೊತೆಯಾಟದ ಫಲವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 135ರನ್​ ಗಳಿಸಿತ್ತು.

    ಇದನ್ನೂ ಓದಿ: VIDEO| ಖ್ಯಾತ ಗಾಯಕಿ ಕೈಯಿಂದ ಮೈಕ್ ಕಸಿದುಕೊಂಡ ನಿರೂಪಕಿ; ಮುಂದೇನಾಯ್ತು?

    ರಾಹುಲ್​ ಏಕಾಂಗಿ ಹೋರಾಟ

    ಗುರಿ ಬೆನ್ನತ್ತಿದ್ದ ಲಖನೌ ಸೂಪರ್​ ಜೈಂಟ್ಸ್​ ತಂಡಕ್ಕೆ ನಾಯಕ ಕೆ.ಎಲ್​. ರಾಹುಲ್​(68ರನ್​, 61ಎಸೆತ, 8 ಬೌಂಡರಿ) ಏಕಾಂಗಿ ಹೋರಾಟದ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 128ರನ್​ ಗಳಿಸಿ ಸೋಲೊಪ್ಪಿಕೊಂಡಿತ್ತು.

    ಗುಜರಾತ್​ ಪರ ಮೊಹಮ್ಮದ್​ ಶಮಿ(3-1-18-0), ಜಯಂತ್​ ಯಾದವ್​(4-0-26-0), ರಶೀದ್​ ಖಾನ್​(4-0-33-1), ಮೋಹಿತ್​ ಶರ್ಮಾ(3-0-17-2), ನೂರ್​ ಅಹ್ಮದ್​(4-0-18-2), ಹಾರ್ದಿಕ್​ ಪಾಂಡ್ಯ(1-0-7-0), ರಾಹುಲ್​ ತೆವಾಟಿಯಾ(1-0-8-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts