More

  ಸಂವಿಧಾನ ಅರಿತರೆ ಸಮಸಮಾಜ ನಿರ್ಮಾಣ

  ಸೊರಬ: ನಮ್ಮ ದೇಶದ ಸಂವಿಧಾನ ಭಗವದ್ಗೀತೆ ಇದ್ದಂತೆ. ಅದರ ಸಾರವನ್ನು ಅರಿತು ಎಲ್ಲರು ಗೌರವಿಸಿ ಅದರ ಘನತೆಯನ್ನು ಮತ್ತಷ್ಟು ಹೆಚ್ಚಿಸ ಬೇಕಿದೆ ಎಂದು ದೂಗೂರು ಗ್ರಾಪಂ ಅಧ್ಯಕ್ಷ -Àಯಾಜ್ ಅಹಮ್ಮದ್ ಹೇಳಿದರು.
  ತಾಲೂಕಿನ ದೂಗೂರು ಗ್ರಾಪಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಬ ಸಾಹೇಬ್ ಅಂಬೇಡ್ಕ ರಚಿಸಿದ ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಬುದ್ಧ, ಬಸವಣ್ಣನವರು ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದಂತೆ ಅಂಬೇಡ್ಕರ್ ಅವರು ಹೋರಟ ಮಾಡಿ ಸಮಸಮಾಜ ನಿರ್ಮಾಣ ಮಾಡಿ ಸಂವಿಧಾನ ರಚಿಸಿದರು. ಅದನ್ನು ಉಳಿಸಿ ಬೆಳೆಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.
  ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಪುಟ್ಟಪ್ಪ ಬರಗಿ, ತುಳಸಿ, ಗೌರಮ್ಮ, ಶಶಿಕಲಾ, ಪ್ರಶಾಂತ್, ಅಶ್ವಿನಿ, ಶ್ರೀರಾಮ, ಹರೀಶ್, ವಿರೂಪಾಕ್ಷಪ್ಪ, ಪಿಡಿಒ ಸಿ.ಕೆ.ನಾಗರಾಜ್, ಪ್ರದೀಪ್, ನಂದಿನಿ, ಇಲಿಯಾಸ್, ರಾಜಶೇಖರ್ ಸೇರಿ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts