More

    ಭದ್ರಾ ಕಾಡಾ ಕಾಮಗಾರಿಗೆ ಬೇಕು 400 ಕೋಟಿ ರೂ. ಅನುದಾನ

    ಶಿವಮೊಗ್ಗ: ಭದ್ರಾ ಕಾಡಾ ಅಭಿವೃದ್ಧಿ ಕಾಮಗಾರಿಗಳಿಗೆ 400 ಕೋಟಿ ರೂ. ಬೇಕು ಎಂದು ಅಧ್ಯಕ್ಷೆ ಪವಿತ್ರಾ ರಾಮಯ್ಯ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಪ್ರತಿ ಬಜೆಟ್​ನಲ್ಲೂ ನಿಗಮ ಮಂಡಳಿಗಳಿಗೆ ಅನುದಾನ ಮೀಸಲಿಡುವಂತೆ ಭದ್ರಾ ಕಾಡಾಕ್ಕೂ ಅನುದಾನ ಮೀಸಲಿಡಬೇಕು ಎಂದು ಕೋರಿಕೆ ಸಲ್ಲಿಸಿದ್ದಾರೆ.

    ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸೋಮವಾರ ಆಯೋಜಿಸಿದ್ದ ಸಂವಾದದಲ್ಲಿ ಈ ವಿಷಯ ತಿಳಿಸಿದ ಪವಿತ್ರಾರಾಮಯ್ಯ, 400 ಕೋಟಿ ರೂ. ಅನುದಾನ ಬೇಡಿಕೆಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ, ಸಿಎಂ ಯಡಿಯೂರಪ್ಪ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.

    ಎಲ್ಲ ನಿಗಮ ಮಂಡಳಿಗಳಿಗೂ ಪ್ರತಿ ಬಜೆಟ್​ನಲ್ಲಿ ನಿರ್ದಿಷ್ಟ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಭದ್ರಾ ಕಾಡಾಗೆ ನಿಗದಿತ ಅನುದಾನ ಸಿಗುತ್ತಿಲ್ಲ. ಹೀಗಾಗಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಬರಲಿರುವ ಬಜೆಟ್​ನಿಂದ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರಕ್ಕೂ ಏಕರೂಪದ ಅನುದಾನ ಒದಗಿಸಬೇಕು ಎಂದು ಸಿಎಂಗೆ ಮನವಿ ಮಾಡಲಾಗಿದೆ.

    ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಚ್ಚುಕಟ್ಟು ಭಾಗದ ಹಲವು ರೈತರು ಮನವಿ ಸಲ್ಲಿಸಿದ್ದಾರೆ. ಈ ಕಾಮಗಾರಿಗಳನ್ನು ಕೈಗೊಳ್ಳಲು 40 ಕೋಟಿ ರೂ. ಅನುದಾನ ಅವಶ್ಯಕತೆಯಿದೆ. ಕರೊನಾ ಕಾರಣದಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ತೀರಾ ಉತ್ತಮವಾಗಿಲ್ಲ. ಸ್ವಲ್ಪ ಸಮಯ ಸಹಕಾರ ನೀಡುವಂತೆ ರೈತರಿಗೆ ಮನವಿ ಮಾಡಿದ್ದೇನೆ ಎಂದರು. ಪ್ರೆಸ್​ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೇರಿಗೆ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts