More

    ಅವರಷ್ಟು ದೊಡ್ಡ ಲೀಡರ್​ ರಾಜ್ಯದ ಯಾವ ಪಕ್ಷಗಳಲ್ಲೂ ಇಲ್ಲ; ಅವರ ಕೈಯಲ್ಲೇ ಇದೆ ಎಲ್ಲ ಬ್ರೇಕ್!

    ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ರಾಜ್ಯ ಪ್ರವಾಸ ಕುರಿತಂತೆ ಕೇಳಿಬಂದಿರುವ ಕೆಲವು ಆಕ್ಷೇಪಗಳಿಗೆ ಇದೀಗ ಪರೋಕ್ಷವಾಗಿ ತಕ್ಕ ಉತ್ತರವೇ ಹೊರಬಿದ್ದಿದೆ. ಮಾತ್ರವಲ್ಲ ಅವರ ರಾಜ್ಯ ಪ್ರವಾಸವನ್ನು ಸಮರ್ಥಿಸುವಂಥ ಹೇಳಿಕೆಗಳೂ ವ್ಯಕ್ತವಾಗಿವೆ.

    ರಾಜ್ಯ ಪ್ರವಾಸ ಕೈಗೊಳ್ಳಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾರ ಅನುಮತಿಯನ್ನೂ ಕೇಳುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್ ಅವರೇ ಸ್ಪಷ್ಟ ಪಡಿಸಿದ್ದಾರೆ. ಬಿಎಸ್‌ವೈ ನಮ್ಮ ಪಕ್ಷದ ಹಿರಿಯ ನಾಯಕರು. ಅವರಷ್ಟು ದೊಡ್ಡ ಲೀಡರ್ ರಾಜ್ಯದ ಬೇರಾವ ಪಕ್ಷಗಳಲ್ಲೂ ಇಲ್ಲ. ಅವರು ನಮ್ಮ ಪಕ್ಷದ ಅತಿ ದೊಡ್ಡ ಆಸ್ತಿ ಎಂದು ದಾವಣಗೆರೆಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಸಿಂಗ್ ಉತ್ತರಿಸಿದರು. ಯಡಿಯೂರಪ್ಪ ಅವರ ರಾಜ್ಯ ಪ್ರವಾಸದಿಂದ ಪಕ್ಷಕ್ಕೆ ಬಲ ಬರಲಿದೆ. ಸಂಘಟನೆ ಸದೃಢವಾಗಲಿದೆ. ಕಾರ್ಯಕರ್ತರಲ್ಲಿ ಹೊಸ ಹುರುಪು ಬರಲಿದೆ ಎಂದು ಕೂಡ ಅವರು ತಿಳಿಸಿದರು.

    ಇದನ್ನೂ ಓದಿ: ಸ್ಟಾರ್ ನಟನ ತೋಟದಲ್ಲಿ ಅಪ್ರಾಪ್ತ ವಯಸ್ಸಿನವಳ ಮೇಲೆ ಅತ್ಯಾಚಾರ; ಪೋಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ..

    ಮತ್ತೊಂದೆಡೆ ಬಿಎಸ್​ವೈ ಪರವಾಗಿ ಅವರ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷರೂ ಆಗಿರುವ ಬಿ.ವೈ. ವಿಜಯೇಂದ್ರ ಕೂಡ ಸಮರ್ಥನೆ ನೀಡಿದ್ದಾರೆ. ಯಾರು ಒಪ್ಪಿಗೆ ಕೊಡಲಿ, ಬಿಡಲಿ, ಯಡಿಯೂರಪ್ಪ ಅವರು ಪಕ್ಷ ಸಂಘಟನೆ ಮಾಡೇ ಮಾಡುತ್ತಾರೆ. ಬಿಜೆಪಿಯನ್ನು ಬಲಪಡಿಸಿ ಮತ್ತೆ ಅಧಿಕಾರಕ್ಕೆ ತರಬೇಕು ಎಂಬುದು ಅವರ ಹೆಬ್ಬಯಕೆ ಎಂದು ದಾವಣಗೆರೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

    ಇದನ್ನೂ ಓದಿ: ಅತ್ತ ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದ ಕಾರ್ಖಾನೆ ಬಂದ್​; ಇತ್ತ ಬೇಕಾಬಿಟ್ಟಿಯಾಗಿ ಸಾಲ ನೀಡಿದ್ದ ಅಧಿಕಾರಿ ಸಸ್ಪೆಂಡ್..​

    ಹೈಕಮಾಂಡ್ ಸೂಚಿಸಿದರೆ ರಾಜ್ಯದಲ್ಲಿ ಎಲ್ಲಿಯೇ ಆಗಲಿ ಚುನಾವಣೆಗೆ ನಿಲ್ಲಲು ಸಿದ್ಧ. ಈ ಬಗ್ಗೆ ವರಿಷ್ಠರು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧ. ರಾಜ್ಯಾಧ್ಯಕ್ಷರ ಸೂಚನೆಯಂತೆ ಪಕ್ಷದ ಸಂಘಟನೆಯಲ್ಲಿ ತೊಡಗಿರುವೆ ಎಂದು ಹೇಳಿದ ವಿಜಯೇಂದ್ರ, ಯಡಿಯೂರಪ್ಪ ಅವರ ರಾಜ್ಯ ಪ್ರವಾಸಕ್ಕೆ ಯಾರೂ ಬ್ರೇಕ್ ಹಾಕುವ ಪ್ರಶ್ನೆಯೇ ಇಲ್ಲ. ಎಲ್ಲ ಬ್ರೇಕ್‌ಗಳು ಅವರ ಕೈಯಲ್ಲೇ ಇವೆ ಎಂದು ಕೂಡ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts