More

    ಲೋಕಸಭೆ ಚುನಾವಣೆ: ವೈಮನಸ್ಸು ಮರೆತು ಮತ್ತೆ ಒಂದಾದ ಬಿಎಸ್‌ವೈ ಮತ್ತು ಸೋಮಣ್ಣ!

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯನವರ ವಿರುದ್ದವೇ ಸ್ಪರ್ಧಿಸಿ ವಿ.ಸೋಮಣ್ಣ ಅವರು ಸೋತಿದ್ದರು. ಬಳಿಕ ಬಿಜೆಪಿ ಮುಖಂಡರ ವಿರುದ್ಧ ಮುನಿಸಿಕೊಂಡಿದ್ದ ಮಾಜಿ ಸಚಿವ ಸೋಮಣ್ಣ ಶನಿವಾರ ಸಂಜೆ ನಗರದ ಡಾಲರ್ಸ್ ಕಾಲನಿಯ ಬಿ.ಎಸ್ ಯಡಿಯೂರಪ್ಪನವರ ನಿವಾಸಕ್ಕೆ ವಿ ಸೋಮಣ್ಣ ಭೇಟಿ ನೀಡಿದ್ದಾರೆ.

    ಇದನ್ನೂ ಓದಿ: ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಲೋಕಸಭೆ ಚುನಾವಣೆಗೆ ಬಿಜೆಪಿ ಶನಿವಾರ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು ಸಾಧ್ಯತೆ ಇದ್ದು, ರಾಜ್ಯ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.ಯಡಿಯೂರಪ್ಪ ಸಿಎಂ ಆಗಿದ್ದಾಗ ಸೋಮಣ್ಣ ಭೇಟಿಯಾಗಿದ್ದರು. ಅದಾದ ಬಳಿಕ ನಾಲ್ಕು ವರ್ಷಗಳ ನಂತರ ಈಗ ಸೋಮಣ್ಣ ಭೇಟಿಯಾಗಿದ್ದಾರೆ. ಭೇಟಿ ವೇಳೆ ಯಡಿಯೂರಪ್ಪಗೆ ಹೂಗುಚ್ಛವನ್ನು ಸೋಮಣ್ಣ ನೀಡಿದ್ದಾರೆ.

    ಇನ್ನು ಇಬ್ಬರ ರಾಜಿ ಸಂಧಾನದಲ್ಲಿ ಎಂ.ಡಿ.ಲಕ್ಷ್ಮಿನಾರಾಯಣ್, ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಯಶಸ್ವಿಯಾಗಿದ್ದಾರೆ. ಹೈಕಮಾಂಡ್​ ಮಟ್ಟದಲ್ಲಿ ಸೋಮಣ್ಣ, ಬಿಎಸ್​ವೈ ನಡುವೆ ಮಾತುಕತೆ ನಡೆದಿತ್ತು. ಅಷ್ಟೇ ಅಲ್ಲ, ಕೇಂದ್ರ ಬಿಜೆಪಿ ನಾಯಕರು ಸಹ ಇಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ. ಜಗದೀಶ್​ ಶೆಟ್ಟರ್ ಮತ್ತು ತುಮಕೂರು ಸಂಸದ ಬಸವರಾಜ್ ಜೊತೆ ಸೋಮಣ್ಣ ಮಾತಾಡಿದ್ದರು.

    ಇದೀಗ ವಿಧಾನಸಭೆ ಟಿಕೆಟ್​ ಹಂಚಿಕೆ ವೇಳೆ ಶುರುವಾಗಿದ್ದ ಇಬ್ಬರ ನಡುವಿನ ವೈಮನಸ್ಸು ಇಂದು ಅಂತ್ಯವಾಗಿದೆ. ಅದು ಅಲ್ಲದೆ ಲೋಕಸಭೆ ಚುನಾವಣೆ ಸನಿಹದಲ್ಲೇ ಇಬ್ಬರು ಬಲಿಷ್ಠ ನಾಯಕರು ಮತ್ತೆ ಒಂದಾಗಿದ್ದಾರೆ. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಸೋಮಣ್ಣ ವಿರೋಧ ಮಾಡುತ್ತಿದ್ದರು. ಆದರೆ ಲೋಕಸಭೆ ಚುನಾವಣೆ ಹೊತ್ತಲ್ಲಿ ಬಿಎಸ್‌ವೈ ಭೇಟಿ ಕುತೂಹಲ ಮೂಡಿಸಿದೆ.

    ಯಡಿಯೂರಪ್ಪ ಭೇಟಿ ಮೂಲಕ ಸೋಮಣ್ಣ ರಾಜಕೀಯ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ. ತಮಗೆ ವಿರೋಧ ಮಾಡುತ್ತಿರುವ ತುಮಕೂರು ನಾಯಕರಿಗೆ ಈ ಮೂಲಕ ಸೋಮಣ್ಣ ಠಕ್ಕರ್ ಕೊಟ್ಟಿದ್ದಾರೆ. ತಮಗೆ ಯಡಿಯೂರಪ್ಪ ಬೆಂಬಲ ಇದೆ ಎಂದು ಸಂದೇಶ ರವಾನೆಗೆ ಮುಂದಾಗಿದ್ದಾರೆ. ಯಡಿಯೂರಪ್ಪ ಭೇಟಿ ಮೂಲಕ ಚುನಾವಣೆಗೆ ಹಾದಿ ಸುಗಮ ಮಾಡಿಕೊಳ್ಳುವ ಲೆಕ್ಕಾಚಾರ ಇದು ಎನ್ನಲಾಗುತ್ತಿದೆ. ಜೊತೆಗೆ ತುಮಕೂರು ಲಿಂಗಾಯತ ಮತದಾರರಿಗೂ ಒಂದು ಸ್ಪಷ್ಟ ಸಂದೇಶ ರವಾನೆ ತಂತ್ರ ಇದಾಗಿದೆ ಎಂದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.

    ಸನಾ ಜಾವೆದ್ ಕೈಹಿಡಿಯುತ್ತಿದ್ದಂತೆ ಕೈಕೊಟ್ಟ ಶೋಯೆಬ್ ಮಲಿಕ್ ಅದೃಷ್ಟ..! ಸಾನಿಯಾ ಶಾಪ ಇಷ್ಟು ಬೇಗ ತಟ್ಟಿತಾ ಎಂದ ನೆಟ್ಟಿಗರು 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts