More

    ಮಾಮಾ ಬಂದ್ರು…. ಬಿಎಸ್​ಎಫ್​ ಯೋಧರು ಎಚ್ಚರಿಸಿದ್ದು ಯಾರನ್ನು?

    ನವದೆಹಲಿ: ಗಜರಾಜನ ಗಾಂಭೀರ್ಯ ನಡಿಗೆ ನೋಡುವುದೇ ಚಂದ. ಅದರಲ್ಲೂ ಗಜರಾಜ ಪಡೆ ಹಿಂಡು ಹಿಂಡಾಗಿ ಸಂಚರಿಸುವುದನ್ನು ನೋಡಿದರೆ ಅಬ್ಬಾ…! ಎಂದು ರೋಮಾಂಚನಗೊಳ್ಳದವರೇ ಇಲ್ಲ ಎನ್ನಬಹುದು… ಅಂಥದ್ದೊಂದು ಸನ್ನಿವೇಶ ಮೇಘಾಲಯದ ಬೆಟ್ಟಗಳಲ್ಲಿ ಇತ್ತೀಚೆಗೆ ಕಂಡುಬಂದಿದ್ದು, ಗಡಿ ಭದ್ರತಾ ಪಡೆ (ಬಿಎಸ್​ಎಫ್) ಬಿಡುಗಡೆ ಮಾಡಿದ ವಿಡಿಯೋ ತುಣುಕು ಹಾಗೂ ವಾಕಿಟಾಕಿ ಸಂದೇಶ ವೈರಲ್ ಆಗಿ ನೆಟ್ಟಿಗರ ಮನ ಗೆದ್ದಿದೆ.
    ಮೇಘಾಲಯದ ಬೆಟ್ಟಗಳಲ್ಲಿ ಒಂದರ ಹಿಂದೊಂದು ಸಾಲಾಗಿ ಹೊರಟ ಆನೆಗಳ ಹಿಂಡಿನ ವಿಡಿಯೋ ತುಣುಕನ್ನು ಮತ್ತು ವಾಕಿಟಾಕಿಯಲ್ಲಿ ಯೋಧನೊಬ್ಬ ಎಚ್ಚರಿಕೆ ಸಂದೇಶ ನೀಡುತ್ತಿರುವುದನ್ನು ಗಡಿ ಭದ್ರತಾ ಪಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಇಷ್ಟ ಪಟ್ಟು ಪ್ರತಿಕ್ರಿಯಿಸಿದ್ದಾರೆ.  


    ಮಾಮಾ ಆ ರಹಾ ಹೈ, ಛೋಟಾ ಯಾ ಬಡಾ ವಿಕ್ಟರ್ ಕೋಯಿ ಭೀ ಮತ್ ಭೇಜ್ನಾ (ಮಾಮಾ ಬರುತ್ತಿದ್ದಾರೆ. ಸಣ್ಣವರು ಅಥವಾ ದೊಡ್ಡವರು ಯಾರೂ ಬರಬೇಡಿ, ಯಾರನ್ನೂ ಕಳುಹಿಸಬೇಡಿ) ಎಂದು ಆ ವ್ಯಕ್ತಿ ಸಂದೇಶ ನೀಡಿರುವುದು ಕೇಳಿಬರುತ್ತದೆ.
    ಬಿಎಸ್​ಎಫ್​ ಯೋಧರು ಆನೆಗಳನ್ನು ‘ಮಾಮಾ’ ಎಂದೇ ಸಂಬೋಧಿಸುತ್ತಾರೆ. ಜತೆಗೆ ಗ್ಯಾರೋ ಭಾಷೆಯಲ್ಲಿ ಆನೆಗಳನ್ನು ಮೊಂಗ್ಮಾ ಎಂದು ಕರೆಯಲಾಗುತ್ತದೆ. ಗಜ ಪಡೆ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ನಿರ್ಭಯವಾಗಿ ಸಂಚರಿಸುತ್ತ ಇಲ್ಲಿನ ಅರಣ್ಯವನ್ನಾಳುತ್ತಿದೆ ಎಂದು ಬಿಎಸ್​ಎಫ್ ಅಧಿಕಾರಿಗಳು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

    ಕರೊನಾ ಕದನ ಕೊನೆಯಾಯಿತೆಂದು ಘೋಷಿಸಿ ವಿದೇಶಿಗರಿಗೆ ಗಡಿ ತೆರೆದ ಸ್ಲೊವೇನಿಯಾ…!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts