More

    ಕರೊನಾ ಕದನ ಕೊನೆಯಾಯಿತೆಂದು ಘೋಷಿಸಿ ವಿದೇಶಿಗರಿಗೆ ಗಡಿ ತೆರೆದ ಸ್ಲೊವೇನಿಯಾ…!

    ಲುಬ್ಲಿಯಾನಾ: ಕರೊನಾವೈರಸ್ ಹೊಸ ಸೋಂಕು ಪ್ರಕರಣಗಳು ಇನ್ನೂ ವರದಿಯಾಗುತ್ತಿದ್ದರೂ ಯೂರೋಪ್​​ನ ಸ್ಲೊವೇನಿಯಾ ರಾಷ್ಟ್ರ ಕರೊನಾವೈರಸ್ ಯುದ್ಧ ಇಲ್ಲಿ ಕೊನೆಗೊಂಡಿದೆ ಎಂದು ಘೋಷಿಸಿ ಗಡಿಯನ್ನು ಸಂಚಾರಕ್ಕೆ ಮುಕ್ತವಾಗಿಸಿದೆ.
    20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ, ಪರ್ವತ ರಾಷ್ಟ್ರವಾಗಿರುವ ಇದು ಇಟಲಿ, ಆಸ್ಟ್ರಿಯಾ, ಕ್ರೋಯೆಷಿಯಾ ಮತ್ತು ಹಂಗೇರಿ ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ. ಶುಕ್ರವಾರದವರೆಗೆ 1465 ಕರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು 103 ಜನ ಸಾವಿಗೀಡಾಗಿದ್ದಾರೆ.

    ಇದನ್ನೂ ಓದಿ: ನೋಡನೋಡುತ್ತಿದ್ದಂತೆ ಧರೆಗುರುಳಿದರು ಸ್ಕೈಡೈವರ್​​ಗಳು….!
    ಆದರೆ ಹೊಸ ಪ್ರಕರಣಗಳು ವರದಿಯಾಗುತ್ತಿರುವ ಪ್ರಮಾಣ ಇಳಿಮುಖವಾಗಿರುವ ಹಿನ್ನೆಲೆ ಅಲ್ಲಿಯ ಸರ್ಕಾರ ಯೂರೋಪ್ ಒಕ್ಕೂಟದ ನಾಗರಿಕರಿಗೆ ಗಡಿಯನ್ನು ತೆರೆಯಲು ಆದೇಶಿಸಿದೆ, ಆದರೆ ಯೂರೋಪ್ ಒಕ್ಕೂಟದ ವ್ಯಾಪ್ತಿಗೊಳಪಡದ ನಾಗರಿಕರು ಕ್ವಾರಂಟೈನ್​​ನಲ್ಲಿರಬೇಕಾಗುತ್ತದೆ. ಸ್ಲೊವೇನಿಯಾದಿಂದ ಬರುವ ಜನರು ಆಸ್ಟ್ರಿಯಾದಲ್ಲಿ ಎರಡು ವಾರ ಹೋಮ್ ಕ್ವಾರಂಟೈನ್​​ನಲ್ಲಿರಬೇಕೆಂದು ಅಲ್ಲಿಯ ಸರ್ಕಾರ ತಿಳಿಸಿದೆ. ಸ್ಲೊವೇನಿಯಾದಲ್ಲಿಯೂ ವೈರಸ್ ಪ್ರಕರಣಗಳು ಮತ್ತೆ ಹುಟ್ಟಿಕೊಳ್ಳದಂತೆ ತಡೆಯಲು ಕೆಲವು ಸುರಕ್ಷತಾ ಕ್ರಮಗಳ ಜಾರಿಯನ್ನು ಮುಂದುವರಿಸಿದೆ.
    ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳು, ಮಾಸ್ಕ್ ಧರಿಸುವಿಕೆಯನ್ನು ಕಡ್ಡಾಯವಾಗಿದೆ. ಕೆಲವು ಶಾಪಿಂಗ್ ಸೆಂಟರ್​ಗಳು, ಹೋಟೆಲ್​ಗಳನ್ನು ಮುಂದಿನ ವಾರ ತೆರೆಯಲು ಅನುಮತಿಸಲಾಗಿದೆ ಎಂದು ಸರ್ಕಾರ ಹೇಳಿದೆ.

    ಇದನ್ನೂ ಓದಿ: ಬದರಿನಾಥ ದೇಗುಲದ ಬಾಗಿಲು ತೆರೆದರೂ ಭಕ್ತಿರಿಗಿಲ್ಲ ಪ್ರವೇಶ

    ಕರೊನಾ ವೈರಸ್ ಸಾಂಕ್ರಾಮಿಕ ಕಾಯಿಲೆಗೆ ವಿಷಯಕ್ಕೆ ಬರುವುದಾದರೆ ಸದ್ಯ ಯೂರೋಪ್ ಖಂಡದಲ್ಲಿಯೇ ಸ್ಲೊವೇನಿಯಾದಲ್ಲಿ ಅತ್ಯುತ್ತಮ ಪರಿಸ್ಥಿತಿ ಇದೆ. ಈ ಸ್ಥಿತಿ ನಮಗೆ ಸಾಮಾನ್ಯ ಸಾಂಕ್ರಾಮಿಕ ಕಾಯಿಲೆಗಳನ್ನೂ ನಿವಾರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಪ್ರಧಾನಿ ಜಾನೆಜ್ ಜನ್ಸಾ ತಿಳಿಸಿದ್ದಾರೆ.
    ಸಾಂಕ್ರಾಮಿಕ ರೋಗಕ್ಕೆ ಅಂತ್ಯ ಹಾಡಲಾಗಿದೆ ಎಂದು ಸ್ಲೋವೇನಿಯಾದ ಘೋಷಿಸಿದರೂ ತಜ್ಞರು ಈ ರೋಗ ದೇಶದಲ್ಲಿ ಇನ್ನೂ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಭಾರತೀಯ ಮೂಲದ ಬಾಣಸಿಗನನ್ನು ವರಿಸಿದ್ದ ಆಸ್ಟ್ರೀಯಾದ ರಾಜಕುಮಾರಿ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts