More

    ಕಾಶ್ಮೀರದ ಸಾಂಬಾ ವಲಯದಲ್ಲಿ ಭಾರಿ ಸುರಂಗ ಪತ್ತೆ: ಮುಂದುವರಿದ ಸೇನಾ ಕಾರ್ಯಾಚರಣೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ರೇಗಲ್​ ಏರಿಯಾದಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್​ಎಫ್​)ಯ ಯೋಧರು ಭೂಗತ ಸುರಂಗವನ್ನು ಭಾನುವಾರ ಪತ್ತೆ ಹಚ್ಚಿದ್ದಾರೆ.

    ಬಿಎಸ್​ಎಫ್​ ಅಧಿಕಾರಿಗಳ ಪ್ರಕಾರ ಸುರಂಗವನ್ನು ಗಸ್ತು ಪಡೆ ಪತ್ತೆಹಚ್ಚಿದ್ದು, ಗಡಿಯ ಸುತ್ತ ಅಕ್ರಮವಾಗಿ ಒಳನುಸುಳಲು ಸುರಂಗ ಮಾರ್ಗವನ್ನು ಬಳಸಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ಗುರುವಾರವಷ್ಟೇ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಮೃತಪಟ್ಟ ಜೈಷ್​ ಇ ಮೊಹಮ್ಮದ್​ ಸಂಘಟನೆಯ ನಾಲ್ವರು ಉಗ್ರರು ಇದೇ ಸುರಂಗದ ಮೂಲಕ ಒಳನುಸುಳಿದ್ದರು ಎಂದು ಸಂಶಯ ವ್ಯಕ್ತವಾಗಿದೆ. ಗಡಿಯಲ್ಲಿ ಭಾರಿ ಸೇನಾ ಭದ್ರತೆಯೊಂದಿಗೆ ಕಣ್ಗಾವಲು ಪಡೆ ಇರುವುದರಿಂದ ಪಾಕಿಸ್ತಾನದಿಂದ ಸುರಂಗ ಮೂಲಕ ಉಗ್ರರು ಒಳನುಸುಳಿರುವ ಶಂಕೆ ಇದೆ.

    ಇದನ್ನೂ ಓದಿ: ಲಾಕ್​ಡೌನ್​ ಬಗ್ಗೆ 8-10 ದಿನದಲ್ಲಿ ನಿರ್ಧಾರ; ಎಲ್ಲದಕ್ಕೂ ಸಿದ್ಧರಾಗಿರಿ

    ಶುಕ್ರವಾರದಿಂದ ಸುರಂಗ ವಿರೋಧಿ ಕಾರ್ಯಾಚರಣೆ ನಡೆಯುತ್ತಿದ್ದು, ಸೇನೆ ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಸಾಂಬಾ ವಲಯದ ಅಂತಾರಾಷ್ಟ್ರೀಯ ಗಡಿಯ ಮೂಲಕ ನಾಲ್ವರು ಉಗ್ರರು ಒಳನುಸುಳಿರುವ ಬಗ್ಗೆ ಮಾಹಿತಿ ತಿಳಿದ ಬಳಿಕ ಸೇನಾ ಕಾರ್ಯಾಚರಣೆಯಲ್ಲಿ ಸುರಂಗ ಪತ್ತೆಯಾಗಿದೆ.

    ಕಾಶ್ಮೀರ ಮೂಲದ ಟ್ರಕ್​ ಮೂಲಕ ನಾಲ್ವರು ಉಗ್ರರು ಸಂಚಾರ ಮಾಡುವಾಗ ಗುರುವಾರ ನಡೆದ ಎನ್​ಕೌಂಟರ್​ನಲ್ಲಿ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಉಗ್ರರನ್ನು ಹೊಡೆದುರುಳಿಸಲಾಯಿತು. ಅಲ್ಲದೆ, ಉಗ್ರರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು. ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts