More

    ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​; ದ್ವಾರದಲ್ಲಿದ್ದ ಪ್ಲಾಸ್ಟಿಕ್​ ಚೀಲದ ಮೇಲೆ ಏನಿದೆ ಗೊತ್ತಾ?

    ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿರುವ ಅಂತಾರಾಷ್ಟ್ರೀಯ ಗಡಿ ಬಳಿ ಸುರಂಗವೊಂದು ಪತ್ತೆಯಾಗಿದೆ. ಅಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್​ಎಫ್​ ಯೋಧರು ಈ ಸುರಂಗವನ್ನು ಪತ್ತೆಹಚ್ಚಿದ್ದಾರೆ.

    ಇದು ಉಗ್ರರು ಒಳನುಸುಳಲು ಬಳಸುತ್ತಿದ್ದ ಸುರಂಗ ಮಾರ್ಗ ಎಂದು ಬಿಎಸ್​ಎಫ್​ ಶಂಕೆ ವ್ಯಕ್ತಪಡಿಸಿದೆ. ಗಡಿಯಲ್ಲಿ ಭಾರತದ ಬದಿಯಲ್ಲಿರುವ ಬೇಲಿಯಿಂದ ಸುಮಾರು 50 ಮೀಟರ್​ ಅಂತರಲ್ಲಿ ಈ ಸುರಂಗ ಕಂಡುಬಂದಿದೆ.

    ಸುರಂಗ ಮಾರ್ಗದ ಚಿಕ್ಕ ದ್ವಾರಗಳ ಬಳಿ ಮರಳಿನ ಪ್ಲಾಸ್ಟಿಕ್​ ಚೀಲಗಳು ಇವೆ. ಹಾಗೇ ಅದರ ಮೇಲೆ ಪಾಕಿಸ್ತಾನದ ಗುರುತುಗಳೂ ಇವೆ ಎಂದು ಬಿಎಸ್​ಎಫ್ ಮಾಹಿತಿ ನೀಡಿದೆ. ಇದನ್ನೂ ಓದಿ: ‘ತಾಯಿ-ಮಗಳು-ಮೊಮ್ಮಗಳು..’: ನಡೆದೇ ಹೋಯ್ತು ಕ್ರೈಂ..ಅಜ್ಜಿಯೇ ಆರೋಪಿ

    ಇತ್ತೀಚೆಗೆ ಸುರಿದ ಮಳೆಯಿಂದ ಕೆಲವು ಜಾಗಗಳಲ್ಲಿ ನೀರು ಅತಿಯಾಗಿ ತುಂಬುತ್ತಿರುವುದನ್ನು ನೋಡಿದ ಗಡಿ ಭದ್ರತಾ ಪಡೆಯ ಸಿಬ್ಬಂದಿ, ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಅಲ್ಲಿ ಸುರಂಗ ಮಾರ್ಗಗಳು ಕಂಡುಬಂದಿವೆ ಎನ್ನಲಾಗಿದೆ. ಹಾಗೇ, ಸುರಂಗ ಈಗಾಗಲೇ 20 ಮೀಟರ್​​ ಉದ್ದವಾಗಿದೆ ಎಂಬುದು ಗೊತ್ತಾಗಿದೆ. ಇನ್ನೂ ನಿರ್ಮಾಣ ಹಂತದಲ್ಲಿದೆ ಎಂಬುದು ಬೆಳಕಿಗೆ ಬಂದಿದೆ.
    ಬಿಎಸ್​ಎಫ್​ನ ಜಮ್ಮು ಐಜಿ ಎನ್​.ಎಸ್​.ಜಮ್​ವಾಲ್​ ಅವರೂ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಕಂಡು ಬಂದ 8-10 ಪ್ಲಾಸ್ಟಿಕ್​ ಚೀಲಗಳ ಮೇಲೆ ಕರಾಚಿ ಮತ್ತು ಶಕರ್​ಗಢ್​​ ಎಂದು ಬರೆದುಕೊಂಡಿದೆ. ಸುರಂಗ ಕಂಡು ಬಂದ ಸ್ಥಳದಿಂದ ಪಾಕಿಸ್ತಾನದ ಗುಲ್ಜಾರ್​ ಪೋಸ್ಟ್​ 700 ಮೀಟರ್​ ದೂರದಲ್ಲಿದೆ ಎಂದು ಬಿಎಸ್​ಎಫ್​ ಹೇಳಿದೆ. (ಏಜೆನ್ಸೀಸ್​)

    ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​; ದ್ವಾರದಲ್ಲಿದ್ದ ಪ್ಲಾಸ್ಟಿಕ್​ ಚೀಲದ ಮೇಲೆ ಏನಿದೆ ಗೊತ್ತಾ? ಗಡಿಯಲ್ಲಿ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​; ದ್ವಾರದಲ್ಲಿದ್ದ ಪ್ಲಾಸ್ಟಿಕ್​ ಚೀಲದ ಮೇಲೆ ಏನಿದೆ ಗೊತ್ತಾ?

    ಮಾವನ ಹತ್ಯೆ, ಅತ್ತೆಯ ಪರಿಸ್ಥಿತಿ ತೀವ್ರ ಗಂಭೀರ: ಇದು ಸುರೇಶ್​ ರೈನಾ ವಾಪಸ್​ ಆಗಲು ಕಾರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts