More

    ಬಡತನದ ಹೊರತಾಗಿಯೂ ತನ್ನ ದುಷ್ಕೃತ್ಯ ಬಿಡದ ಪಾಕಿಸ್ತಾನ; ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯ ಬಳಿ ಡ್ರೋನ್ ಪತ್ತೆ

    ಚಂಡೀಗಢ: ಪಂಜಾಬ್‌ನ ಅಮೃತಸರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ ಮತ್ತೊಮ್ಮೆ ಪಾಕಿಸ್ತಾನದ ಡ್ರೋನ್ ವಶಪಡಿಸಿಕೊಳ್ಳಲಾಗಿದೆ. ಅಮೃತಸರ ಸೆಕ್ಟರ್‌ನಲ್ಲಿ ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗಡಿ ಭದ್ರತಾ ಪಡೆ ಪಾಕಿಸ್ತಾನದ ಡ್ರೋನ್ ಅನ್ನು ವಶಪಡಿಸಿಕೊಂಡಿದೆ ಎಂದು ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ಶುಕ್ರವಾರ ತಿಳಿಸಿದೆ. ಅಧಿಕಾರಿಗಳ ಪ್ರಕಾರ, ಡ್ರೋನ್ ಅನ್ನು ಅಮೃತಸರದ ಧನೋ ಕಲನ್ ಗ್ರಾಮದ ಪಕ್ಕದ ಹೊಲದಿಂದ ವಶಪಡಿಸಿಕೊಳ್ಳಲಾಗಿದೆ. ಈ ಡ್ರೋನ್ ಅನ್ನು ಚೀನಾದಲ್ಲಿ ತಯಾರಿಸಲಾಗಿದೆ.

    ಭಾನುವಾರವೂ ಡ್ರೋನ್ ಪತ್ತೆ
    ಇದಕ್ಕೂ ಮುನ್ನ ಅಮೃತಸರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ ಭಾನುವಾರ ತಡರಾತ್ರಿ ಡ್ರೋನ್ ಪತ್ತೆಯಾಗಿತ್ತು. ಭಾನುವಾರ ರಾತ್ರಿ 3:40 ಗಂಟೆಗೆ ಅಮೃತಸರದ ಚನ್​ ಕಲಾನ್ ಗ್ರಾಮದ ಬಳಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಡ್ರೋನ್ ಅನ್ನು ತಡೆದರು. ಹುಡುಕಾಟದ ವೇಳೆ ಗದ್ದೆಯೊಂದರಲ್ಲಿ ಚೀನಾ ನಿರ್ಮಿತ ಡ್ರೋನ್ ಪತ್ತೆಯಾಗಿದೆ. ಬಿಎಸ್ಎಫ್ ಮತ್ತು ಪಂಜಾಬ್ ಪೊಲೀಸರು ಪಾಕಿಸ್ತಾನದ ಚಟುವಟಿಕೆಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿದ್ದಾರೆ.

    ಎರಡು ಗ್ಲಾಕ್ ಪಿಸ್ತೂಲ್‌ಗಳು ವಶ
    ಪಂಜಾಬ್‌ನ ತರನ್​​​ ತಾರನ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಶನಿವಾರ ಎರಡು ಗ್ಲಾಕ್ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡ್ರೋನ್ ಮೂಲಕ ಅದನ್ನು ಬೀಳಿಸಿರಬಹುದು ಎಂದು ಶಂಕಿಸಲಾಗಿದೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಬಿಎಸ್‌ಎಫ್ ಪಡೆಗಳು ತರನ್​​​ ತಾರನ್ ಜಿಲ್ಲೆಯ ಖಲ್ರಾ ಗ್ರಾಮದ ಮೈದಾನದಿಂದ ಚೀನಾ ನಿರ್ಮಿತ ಡ್ರೋನ್ ಅನ್ನು ವಶಪಡಿಸಿಕೊಂಡಿವೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶೋಧದ ವೇಳೆ ಬಿಎಸ್‌ಎಫ್ ಯೋಧರು ಆಸ್ಟ್ರಿಯಾದಲ್ಲಿ ತಯಾರಿಸಿದ ಎರಡು ಗ್ಲಾಕ್ ಪಿಸ್ತೂಲ್‌ಗಳನ್ನು ಖಾಲ್ಡಾದ ಸರ್ಕಾರಿ ಶಾಲೆಯ ಆವರಣದಿಂದ ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

    ಖಾಲ್ಡಾ ಗ್ರಾಮದಲ್ಲಿ ಪಾಕಿಸ್ತಾನದ ಡ್ರೋನ್ ವಶಪಡಿಸಿಕೊಂಡ ನಂತರ, ಬಿಎಸ್ಎಫ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿತು. ಇದರಲ್ಲಿ ಎರಡು ಆಸ್ಟ್ರಿಯನ್ ನಿರ್ಮಿತ ಗ್ಲೋಕ್ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದೆ.

    ನಗರ ಪ್ರವಾಹ ನಿರ್ವಹಣಾ ಯೋಜನೆಗೆ ಪ್ರಧಾನಿ ಅಸ್ತು; ಇದು ದೇಶದಲ್ಲೇ ಪ್ರಥಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts