More

    ರಾಮಮಂದಿರ ಭೂಮಿ ಪೂಜೆಗಾಗಿ 151 ಪವಿತ್ರ ನದಿಗಳ ನೀರು ಸಂಗ್ರಹಿಸಿ, ಅಯೋಧ್ಯೆ ತಲುಪಿದ ಸಹೋದರರು

    ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆಗೆ ದಿನಗಣನೆ ಶುರುವಾಗಿದ್ದು, ಅಲ್ಲಿ ಭರದಿಂದ ಸಿದ್ಧತೆಗಳು ನಡೆಯುತ್ತಿದೆ. ಹಾಗೇ ಕೆಲವು ಭಕ್ತರು ಕೂಡ ಅಲ್ಲಿಗೆ ತಲುಪುತ್ತಿದ್ದಾರೆ.

    ಹಾಗೇ 70 ವರ್ಷಗಳ ಮೇಲ್ಪಟ್ಟಿರುವ ಇಬ್ಬರು ಸಹೋದರರು ಕೂಡ ಅಯೋಧ್ಯೆಯನ್ನು ತಲುಪಿದ್ದಾರೆ. ವಿಶೇಷವೆಂದರೆ ರಾಮಮಂದಿರ ಭೂಮಿಪೂಜೆಗಾಗಿ ಇವರಿಬ್ಬರೂ ಸುಮಾರು 151 ನದಿಗಳ ನೀರನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ.
    ರಾಧೆ ಶ್ಯಾಮ್​ ಪಾಂಡೆ ಹಾಗೂ ಶಬ್ದ್ ವೈಜ್ಞಾನಿಕ್ ಮಹಾಕವಿ ತ್ರಿಫಲಾ ಎಂಬ ಸೋದರರು 151 ನದಿಗಳ ನೀರನ್ನು ಸಂಗ್ರಹಿಸಿದ್ದಾರೆ. ತಾವು 1968ರಿಂದಲೂ ಈ ಕಾರ್ಯದಲ್ಲಿ ತೊಡಗಿದ್ದೇವೆ. ಒಟ್ಟು 151 ನದಿಗಳಲ್ಲಿ, 8 ಅತಿ ದೊಡ್ಡ ನದಿಗಳು, ಮೂರು ಸಾಗರಗಳ ನೀರು ಇದೆ. ಹಾಗೇ ಶ್ರೀಲಂಕಾದ 16 ಪ್ರದೇಶಗಳ ಮಣ್ಣನ್ನೂ ಕೂಡ ಸಂಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್‌ಚಾರ್ಜ್‌: ಆರೋಗ್ಯ ಸ್ಥಿರ

    ಯಾವಾಗ ರಾಮ ಮಂದಿರ ನಿರ್ಮಾಣವಾಗುತ್ತದೆಯೋ ಆಗ ಪವಿತ್ರ ನದಿಗಳ ನೀರನ್ನು ಅರ್ಪಿಸಬೇಕು ಎಂಬುದು ನಮ್ಮ ಕನಸಾಗಿತ್ತು. ಹಾಗಾಗಿ ಭಾರತಾದ್ಯಂತ ಇರುವ ಪವಿತ್ರ ನದಿಗಳ ನೀರಿನ ಸಂಗ್ರಹದಲ್ಲಿ ತೊಡಗಿಕೊಂಡೆವು. ಹಾಗೇ, ಶ್ರೀಲಂಕಾದ ಮಣ್ಣನ್ನೂ ತಂದಿದ್ದೇವೆ. ಶ್ರೀರಾಮನ ಆಶೀರ್ವಾದದಿಂದ ಅದು ಸಾಧ್ಯವಾಗಿದೆ ಎಂದು ರಾಧೆ ಶ್ಯಾಮ್​ ಅವರು ತಿಳಿಸಿದ್ದಾರೆ.

    1968ರಿಂದ 2019ರವರೆಗೆ ಈ ಕಾರ್ಯ ನಡೆಸಿದ್ದೇವೆ. ಎಷ್ಟೋ ಕಡೆಗಳಿಗೆ ಕಾಲ್ನಡಿಗೆಯಲ್ಲಿ ಹೋಗಿದ್ದೇವೆ. ಸೈಕಲ್​, ಬೈಕ್​, ರೈಲು ಹಾಗೇ ವಿಮಾನದ ಮೂಲಕವೂ ಸ್ಥಳಕ್ಕೆ ತೆರಳಿ, ಮಣ್ಣು, ನೀರು ಸಂಗ್ರಹಿಸಿದ್ದೇವೆ ಎಂದಿದ್ದಾರೆ.(ಏಜೆನ್ಸೀಸ್​)

    6 ಮಂದಿ ಕೊವಿಡ್​-19 ಸೋಂಕಿತರು ಸೇರಿ 10 ರೋಗಿಗಳು ಆಸ್ಪತ್ರೆಯಿಂದ ಪರಾರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts