More

    ‘ಅಂಡರ್​ವೇರ್​ ರೀತಿಯ ಡ್ರೆಸ್​ನಲ್ಲಿ ಬರಬೇಡಿ’ ಅಮ್ಮಂದಿರಿಗೆ ಖಡಕ್​ ವಾರ್ನಿಂಗ್​ ಕೊಟ್ಟ ಸ್ಕೂಲ್​!

    ಬ್ರಿಟನ್​: ಶಾಲೆ ಬಿಟ್ಟ ತಕ್ಷಣ ಮಕ್ಕಳನ್ನು ಕರೆದುಕೊಂಡು ಹೋಗಲು ಅಮ್ಮ ಅಥವಾ ಅಪ್ಪ ಬರುತ್ತಾರೆ. ಆಗ ಬೇಡವೆಂದರೂ ಕೆಲವರ ಕಣ್ಣು ಆ ತಂದೆ/ತಾಯಿಯ ಮೇಲೆ ಬೀಳೋದು ಸಾಮಾನ್ಯ. ಅಂತದರಲ್ಲಿ ಅವರು ಮೈ ತೋರಿಸೋ ಬಟ್ಟೆ ಹಾಕಿಕೊಂಡಿದ್ದರಂತೂ ಮುಗಿದೇ ಹೋಯಿತು. ಇದೇ ಕಾರಣಕ್ಕೆ ಆ ಒಂದು ಶಾಲೆ ಖಡಕ್​ ವಾರ್ನಿಂಗ್​ ಕೊಟ್ಟಿದೆ.

    ಬ್ರಿಟನ್​ನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ತಾಯಂದಿರಿಗೆ ಖಡಕ್ ವಾರ್ನಿಂಗ್​ ಕೊಡಲಾಗಿದೆ. ಮಕ್ಕಳನ್ನು ಕರೆದುಕೊಂಡು ಹೋಗಲು ಬರುವಾಗ ತೀರಾ ತೆಳ್ಳಗಿರುವ ಅಥವಾ ಅಂಡರ್​ವೇರ್​ನಂತೆ ಕಾಣುವ ಬಟ್ಟೆಯನ್ನು ಹಾಕಿಕೊಂಡು ಬರಬೇಡಿ ಎಂದು ಸೂಚಿಸಲಾಗಿದೆ. ಈ ಸೂಚನೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. “ನಾನು ಚಳಿಗಾಲದ ಒಂದು ದಿನ ನನ್ನ ಮಗುವನ್ನು ಶಾಲೆಯಿಂದ ಕರೆದುಕೊಂಡು ಹೋಗಲು ಬಂದಿದ್ದೆ. ಆಗ ಒಬ್ಬಳು ತಾಯಿ ಮಿನಿ ಸ್ಕರ್ಟ್​ ಮತ್ತು ಕ್ರಾಪ್​ ಟಾಪ್​ನಲ್ಲಿ ಬಂದು ಆಕೆಯ ಮಗುವನ್ನು ಕರೆದುಕೊಂಡು ಹೋದರು. ಆ ಬಟ್ಟೆಯಲ್ಲಿ ಆಕೆಯ ದೇಹದ ಬಹುತೇಕ ಭಾಗಗಳು ಪ್ರದರ್ಶನವಾಗುತ್ತಿತ್ತು. ಇನ್ನೊಂದು ದಿನ ಇನ್ನೊಬ್ಬ ತಾಯಿ ವಿ ಶೇಪ್​ ಟಾಪ್​ ಹಾಕಿಕೊಂಡು ಬಂದಿದ್ದರು. ಅದು ಟಾಪ್​ ಅಥವಾ ಬ್ರಾ ಎನ್ನುವ ಗೊಂದಲ ಹುಟ್ಟಿಸುವಂತಿತ್ತು. ಶಾಲೆಯ ಈ ನಿರ್ಧಾರ ಸ್ವಾಗತಾರ್ಹ” ಎಂದಿದ್ದಾರೆ ಒಬ್ಬ ಪೋಷಕಿ.

    ಕೆಲ ಪೋಷಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಲೆ ವಾರ್ನಿಂಗ್​ನಲ್ಲಿ ಕೆಲ ಬದಲಾವಣೆ ತಂದಿದೆ. ಇದು ವಾರ್ನಿಂಗ್​ ಅಲ್ಲ ಬದಲಾಗಿ ಒಂದು ಮಾರ್ಗಸೂಚಿಯಷ್ಟೇ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಭಾರತೀಯರಿಗೆ ಸ್ಪೆಷಲ್​ ಆಗಿ ಬರ್ತಿದೆ ಸ್ಕೋಡಾ ‘ಕುಶಾಕ್​’; ಇದರ ಸ್ಪೆಷಾಲಿಟಿ ಏನೆಂದು ತಿಳಿದುಕೊಳ್ಳಿ

    ನಂದಿಗ್ರಾಮದಲ್ಲಿ ಎರಡು ಮನೆ ಬಾಡಿಗೆಗೆ ಪಡೆದ ದೀದಿ! ಚುನಾವಣೆ ಮುಗಿದ ತಕ್ಷಣ ಅಲ್ಲಿಂದ ಎಸ್ಕೇಪ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts