More

    ಮಳೆಗಾಲದಲ್ಲಿ ಕಾಲುಸಂಕವೇ ಆಧಾರ

    ಮಳೆಗಾಲದಲ್ಲಿ ಕಾಲುಸಂಕವೇ ಆಧಾರ

    ಎನ್.ಆರ್.ಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನರು ಕಾಲುಸಂಕಗಳನ್ನೇ ಸಂಪರ್ಕಕ್ಕಾಗಿ ಬಳಸಿಕೊಂಡಿದ್ದಾರೆ. ಕಳೆದ ಬಾರಿ ಅತಿವೃಷ್ಟಿಯಿಂದ ಕಾಲುಸಂಕಗಳು ಮುಳುಗಿ ಹಲವು ಗ್ರಾಮಗಳಿಗೆ ಸಂಪರ್ಕವೇ ಇಲ್ಲದಂತಾಗಿತ್ತು. ಕೆಲವು ಕಾಲುಸಂಕಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಅಂತಹ ಪ್ರದೇಶಗಳಲ್ಲಿ ಸೇತುವೆ ನಿರ್ಮಾಣ ಮಾಡಿಲ್ಲ.

    ತಾಲೂಕಿನಲ್ಲಿ 23ಕ್ಕೂ ಅಧಿಕ ಕಾಲುಸಂಕಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ 8-10ಕ್ಕೂ ಅಧಿಕ ಕಾಲುಸಂಕಗಳಿವೆ. ಕಾನೂರು ಗ್ರಾಪಂ ವ್ಯಾಪ್ತಿಯ ಕಟ್ಟಿನಮನೆ ಗ್ರಾಮದಿಂದ ದೊಡ್ಡಹಡ್ಡಲು ಮತ್ತು ನಾಗರಗಂಡಿ ಗ್ರಾಮಕ್ಕೆ ಹೋಗುವ ಜನರು ಗ್ರಾಮ ಮಧ್ಯದ ಹಳ್ಳ ದಾಟಬೇಕು. ಹನ್ನೆರಡು ವರ್ಷಗಳ ಹಿಂದೆ ಗ್ರಾಮಸ್ಥರೇ ಮರಗಳ ದಿಮ್ಮಿಗಳಿಂದ ಕಾಲುಸಂಕ ನಿರ್ವಿುಸಿಕೊಂಡಿದ್ದಾರೆ. ಇಲ್ಲಿ 100 ರಿಂದ 125 ಕುಟುಂಬಗಳು ಇವೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾಲುಸಂಕದಲ್ಲಿ ದಾಟಿ ಎನ್.ಆರ್.ಪುರ , ಕೊಪ್ಪ ಅಥವಾ ಬಾಳೆಹೊನ್ನೂರಿಗೆ ಹೋಗುತ್ತಾರೆ. ಅತಿಯಾಗಿ ಮಳೆಯಾದಾಗ ಕಾಲುಸಂಕ ಮುಳುಗುತ್ತದೆ. ಕಟ್ಟಿನಮನೆಗೆ ಈ ಕಾಲುಸಂಕದ ಮೂಲಕ ತೆರಳಿದರೆ ಕೇವಲ 2 ಕಿಮೀ ಆಗುತ್ತದೆ. ಕಾಲುಸಂಕ ಮುಳುಗಿದಲ್ಲಿ ಕಟ್ಟಿನಮನೆಗೆ ಜೋಗಿಮಕ್ಕಿ ಮಾರ್ಗವಾಗಿ ಸುಮಾರು 10 ಕಿಮೀ ಸುತ್ತಿ ಬಳಸಿ ಬರಬೇಕಾಗುತ್ತದೆ. ಸೇತುವೆ ನಿರ್ವಣಕ್ಕಾಗಿ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

    ಕಾನೂರು ಗ್ರಾಪಂ ವ್ಯಾಪ್ತಿಯ ರಾಮನಹಡ್ಡಲುವಿನ ದೊಡ್ಡ ಹಳ್ಳಕ್ಕೆ ಮರದ ದಿಮ್ಮಿ ಬಳಸಿ ಕಾಲುಸಂಕ ನಿರ್ವಿುಸಿಕೊಂಡಿದ್ದಾರೆ. ಈ ಹಳ್ಳಕ್ಕೆ ಕಳ್ಳದಹಳ್ಳದ ನೀರು ಸಹ ಸೇರಿ ಬರುತ್ತದೆ. ಈ ಕಾಲುಸಂಕದ ಎರಡೂ ಕಡೆ ಹಿಡಿದುಕೊಳ್ಳಲು ದಬ್ಬೆ ಕಟ್ಟಿಕೊಂಡಿದ್ದಾರೆ. ಇದರಲ್ಲಿ ಸಂಚರಿಸುವಾಗ ಸ್ವಲ್ಪ ಆಯ ತಪ್ಪಿದರೂ ಜೀವಕ್ಕೆ ಅಪಾಯವಾಗಬಹುದು. ಇತ್ತೀಚೆಗೆ ಮಳೆ ಬರುವಾಗ ಗ್ರಾಮದ ಮಹಿಳೆಯೊಬ್ಬರು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

    ಗ್ರಾಮದಲ್ಲಿ 50 ಕುಟುಂಬಗಳು ವಾಸವಿದ್ದು, 200ಕ್ಕೂ ಅಧಿಕ ಜನ ಪಟ್ಟಣಕ್ಕೆ ತೆರಳುವುದು ಇದೇ ಕಾಲುಸಂಕದಲ್ಲಿ. ಇಲ್ಲಿನ ಗ್ರಾಮಸ್ಥರು ಬಸ್​ಗಾಗಿ 2 ಕಿಮೀ ದೂರದ ಕೆರೆಮನೆ ಸಮೀಪದ ಎಲೆಗುಡಿಗೆ ಬಸ್​ಸ್ಟಾ್ಯಂಡ್​ಗೆ ತೆರಳಬೇಕು. ಗ್ರಾಮಸ್ಥರು 25 ವರ್ಷ ಹಿಂದಿನಿಂದಲೂ ಸೇತುವೆ ನಿರ್ವಣಕ್ಕಾಗಿ ಸರ್ಕಾರ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ. ಶ್ರೀಮಂತರು ಸ್ವಂತ ವಾಹನದಲ್ಲಿ 12 ಕಿಮೀ ಸುತ್ತಿ ಪಟ್ಟಣಕ್ಕೆ ಹೋಗುತ್ತಾರೆ. ಬಡವರಿಗೆ ಕಾಲುಸಂಕವೇ ಗತಿಯಾಗಿದೆ.

    ಕಳೆದ ಬಾರಿ 23 ಕಾಲುಸಂಕಗಳ ನಿರ್ವಣಕ್ಕಾಗಿ 3.29 ಕೋಟಿ ರೂ. ಅನುದಾನದ ಕ್ರಿಯಾಯೋಜನೆಗೆ ಅನುಮೋದನೆ ದೊರೆತಿದೆ. ಅದರಲ್ಲಿ 15 ಕಾಲುಸಂಕಗಳು ಮಾತ್ರ ಪೂರ್ಣಗೊಂಡಿವೆ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರವಿಚಂದ್ರ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts