More

    ಲಾಕ್​ಡೌನ್ ಸಮಯದಲ್ಲಿ ಮೊಬೈಲ್​ಗೆ ತಾಳಿ ಕಟ್ಟಿದ್ರೂ ಮದುವೆಯಾದಂತೆ!​

    ನವದೆಹಲಿ: ಮದುವೆ, ಮುಂಜಿಯಂಥ ಶುಭ ಕಾರ್ಯಗಳಿಗೆ ಸದ್ಯಕ್ಕಂತೂ ಅವಕಾಶವಿಲ್ಲ. ಮದುವೆ ದಿನ ಗುರುತು ಮಾಡಿಕೊಂಡಿದ್ದವರೆಇಗೆ ಮುಂದೂಡದೇ ವಿಧಿಯಲ್ಲ ಅಥವಾ ಹತ್ತಾರು ಜನರೆದುರು ಮದುವೆ ಶಾಸ್ತ್ರ ಮುಗಿಸಿಕೊಳ್ಳಬೇಕಷ್ಟೇ.

    ಇದು ಮದುಮಗಳು- ಮದುಮಗ ಒಟ್ಟಿಗೆ ಇದ್ದಾಗ ಓಕೆ ಎನ್ನೋಣ. ಇಬ್ಬರೂ ಸಾವಿರಾರು ಕಿ.ಮೀ. ದೂರದಲ್ಲಿದ್ದರೆ, ಮೊಬೈಲ್​ನಲ್ಲಿ ಹುಡುಗಿ ವಿಡಿಯೋ ನೋಡಿಯೋ ಅಥವಾ ವಿಡಿಯೋ ಕಾಲ್​​ ಮಾಡಿಯೋ ತಾಳಿ ಕಟ್ಟಿದ್ರಾಯ್ತು….!!!

    ಹೌದು… ಇದನ್ನು ಲಾಕ್​​ಡೌನ್​ ಸಮಯದ ಮದುವೆ ಎನ್ನಲಾಗುತ್ತಿದೆ…. ಇಂಥ ಹಲವಾರು ಮದುವೆಗಳು ಈಗಾಗಲೇ ವಿಶ್ವಾದ್ಯಂತ ನಡೆದಿವೆ. ಅಮೆರಿಕದಲ್ಲಂತೂ ಇಂಟರ್​ನೆಟ್​ ಮದುವೆಗೆ ಮಾನ್ಯತೆ ಇದೆ. ಅಂಥದ್ದೇ ಮದುವೆಗೆ ಇದೊಂದು ಉದಾಹರಣೆ.

    ಜನವರಿಯಲ್ಲಿ ನಿಶ್ಚಯವಾಗಿದ್ದ ಮದುವೆಯದು. ಆದರೆ, ಅದ್ಯಾವುದೋ ಕಾರಣದಿಂದ ಏಪ್ರಿಲ್​ 26ಕ್ಕೆ ಮುಂದೂಡಿದರು. ಆದರೆ, ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ತಾವೆಂಥ ತಪ್ಪು ಮಾಡಿದ್ದೇವೆಂಬುದು ಅವರಿಗೆ ಅರ್ಥವಾಗತೊಡಗಿತು.

    ಮೊದಲ ಹಂತದ ಲಾಕ್​ಡೌನ್​ ಮುಗಿಯುತ್ತಿದ್ದಂತೆ ಸಿದ್ಧತೆಗಳನ್ನು ಜೋರಾಗಿ ನಡೆಸಿದರೆ ಅಂತಹ ಸಂಕಷ್ಟ ಎದುರಾಗಲಿಕ್ಕಿಲ್ಲ ಎಂದೇ ಅವರಂದುಕೊಂಡಿದ್ದರು. ಆದರೆ, ಮೇ 3ರವರೆಗೆ ಲಾಕ್​ಡೌನ್​ ಅವಧಿ ವಿಸ್ತರಣೆಯಾಗಿದ್ದು ಘೋಷಣೆಯಾಗುತ್ತಿದ್ದಂತೆ ಮದುವೆಯ ಆಸೆಯನ್ನೇ ಕೈ ಬಿಟ್ಟಿತ್ತು ಆ ಜೋಡಿ.

    ಉತ್ತರಪ್ರದೇಶದ ಐಟಿ ಉದ್ಯೋಗಿ 28 ವರ್ಷದ ಪಿ. ಅಂಜನಾ ಹಾಗೂ ಕೇರಳದ ಕೊಟ್ಟಾಯಂನ 30 ವರ್ಷದ ಶ್ರೀಜಿತ್​ ನದೇಸನ್​ ಜೋಡಿ ಏ.26ರಂದು ಹಸೆಮಣೆ ಏರಬೇಕಿತ್ತು. ಲಾಕ್​ಡೌನ್​ ಕಾರಣದಿಂದಾಗಿ ಲಕ್ನೋದಿಂದ ಕೇರಳಕ್ಕೆ ಬರಲು ವಧುವಿಗೆ ಸಾಧ್ಯವಾಗಲಿಲ್ಲ. ಆದರೆ, ಇಬ್ಬರೂ ಟೆಕ್ಕಿಗಳಾಗಿದ್ದರಿಂದ ಟೆಕ್ನಾಲಜಿ ಮೂಲಕವೇ ಮದುವೆಯಾಗಲು ನಿರ್ಧರಿಸಿದರು. ಇದಕ್ಕಾಗಿ ವಿಡಿಯೋ ಕಾಲಿಂಗ್​ ಆ್ಯಪ್​ ಬಳಸಿದರು.

    ಮೂರು ನಿಮಿಷಗಳ ವಿಡಿಯೋ ಈಗ ಆನ್​ಲೈನ್​ನಲ್ಲಿ ವೈರಲ್​ ಆಗಿದೆ. ರೇಷ್ಮೇ ಸೀರೆ, ಬಂಗಾರದೊಡವೆ ಧರಿಸಿ ಮೊಬೈಲ್​ ಎದುರು ವಧು ಕುಳಿತಿದ್ದಾಳೆ. ಇತ್ತ ಕಡೆಯಲ್ಲಿ ವಧು ಕಾಣುತ್ತಿದ್ದ ಮೊಬೈಲ್​ಗೆ ತಾಳಿ ಕಟ್ಟುತ್ತಾನೆ ವರ. ಇದೇ ವೇಳೆ ಅತ್ತ ವಧು ಮನೆಯವರ ಸಹಾಯದಿಂದ ತನ್ನ ಕುತ್ತಿಗೆಗೆ ತಾಳಿ ಕಟ್ಟಿಸಿಕೊಳ್ಳುತ್ತಾಳೆ. ಅಲ್ಲಿಗೆ ಮದುವೆ ಪರಿಸಮಾಪ್ತಿಯಾಯ್ತು. ಆದರೆ, ಭೂರಿ ಭೋಜನವಾಗಬೇಕಲ್ಲ, ಲಾಕ್​ಡೌನ್​ ಮುಗೀಲಿ ಪಾರ್ಟಿ ಕೊಡಿಸ್ತೀವಿ ಅಂತಾ ವಧು-ವರರಿಬ್ಬರೂ ಒಪ್ಪಿಕೊಂಡಿದ್ದಾರಂತೆ.

    ಲಾಕ್​ಡೌನ್ ಸಮಯದಲ್ಲಿ ಮೊಬೈಲ್​ಗೆ ತಾಳಿ ಕಟ್ಟಿದ್ರೂ ಮದುವೆಯಾದಂತೆ!​

    ಕರೊನಾ ವಿರುದ್ಧದ ಹೋರಾಟಕ್ಕೆ ಈ ಅಸ್ತ್ರ ಬಳಸಿ; ಸರ್ಕಾರಿ ನೌಕರರಿಗೆ ಕೇಂದ್ರದಿಂದಲೇ ಬಂತು ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts