More

  ಮದುವೆ ಮನೆಗೆ ಏಕಾಏಕಿ ನುಗ್ಗಿದ ಆನೆಗಳು; ವಧುವಿನೊಂದಿಗೆ ವರ ಪರಾರಿ

  ಕೊಲ್ಕತ್ತ: ಮದುವೆ ಕಾರ್ಯಕ್ರಮಕ್ಕೆ ಆಹ್ವಾನವಿಲ್ಲದೆ ಕೆಲವು ಅತಿಥೀಗಳು ಆಗಮಿಸಿದ ಪರಿಣಾಮ ಛತ್ರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅತಿಥಿಗಳನ್ನು ಕಂಡೊಡನೆ ನವ ವಧು ಮತ್ತು ವರ ಭಯಬೀತರಾಗಿ ಬೈಕಿನಲ್ಲಿ ಪರಾರಿಯಾಗಿರುವ ಘಟನೆ ಪಶ್ಚಿಮ ಬಂಗಳಾದ ಜಾರ್ಗ್ರಾಮ್​ ಜಿಲ್ಲೆಯಲ್ಲಿ ನಡೆದಿದೆ.

  ತನ್ಮೋಯ್​ ಸಿಂಘ ಹಾಗೂ ಮಂಪಿ ವಿವಾಹ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯನ್ನು ಹುಟ್ಟು ಹಾಕಿದೆ. ಯಾರಿರಬಹುದು ಎಂದು ನೋಡಿದಾಗ ಆನೆಗಳ ಹಿಂಡು ಎಂದು ತಿಳಿದು ಬಂದಿದೆ.

  ಮದುವೆ ಮನೆಯಲ್ಲಿ ಮಾಡಿಸಿದ್ದ ಅಡುಗೆಯ ವಾಸನೆಯನ್ನು ಹಿಡಿದು ಬಂದ ಆನೆಗಳು ಏಕಾಏಕಿ ಅಡುಗೆ ಕೋಣೆಗೆ ನುಗ್ಗಿವೆ. ಇದನ್ನು ಗಮನಿಸಿದ ನೆರೆದಿದ್ದ ಜನತೆ ಓಡಲು ಪ್ರಾರಂಭಿಸಿದ್ದು, ನವ ವಧು ಹಾಗೂ ವರ ಸಂಬಂಧಿಕರೊಬ್ಬರ ಬೈಕಿನಲ್ಲಿ ಎಸ್ಕೇಪ್​ ಆಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  ಇದನ್ನೂ ಓದಿ: 2002 ಗುಜರಾತ್​ ಗಲಭೆ ಪ್ರಕರಣ; ತೀಸ್ತಾ ಸೆಟಲ್ವಾಡ್​ಗೆ ಸುಪ್ರೀಂ ಕೋರ್ಟ್​ ಜಾಮೀನು

  ಯಾವುದೇ ಪ್ರಯೋಜನವಿಲ್ಲ

  ಈ ಕುರಿತು ಪ್ರತಿಕ್ರಿಯಿಸಿರುವ ವರ ತನ್ಮೋಯ್​ ಸಿಂಘ ಮದುವೆಗಂದು ಬಂದ ಅತಿಥಿಗಳ ಊಟಕ್ಕಾಗಿ ಮಟನ್​ ಹಾಗೂ ತರಕಾರಿಗಳನ್ನು ಬಳಸಿ ಅಡುಗೆಯನ್ನು ಮಾಡಿಸಲಾಗಿತ್ತು. ಇದರ ಸುವಾಸನೆ ಹಿಡಿದು ಆನೆಗಳ ಗುಂಪು ಆಗಮಿಸಿದ್ದು, ನೇರ ಅಡುಗೆ ಮಾಡಿದ ಸ್ಥಳಕ್ಕೆ ನುಗ್ಗಿದ್ದಾವೆ. ಇದರಿಂದ ಭಯಗೊಂಡ ಜನ ದಿಕ್ಕಾಪಾಲಾಗಿ ಓಡಲು ಶುರು ಮಾಡಿದ್ದಾರೆ.

  ಈ ಪ್ರದೇಶದಲ್ಲಿ ಆನೆಗಳ ಹಾವಳಿ ಜಾಸ್ತಿಯಿದ್ದು, ಅರಣ್ಯ ಇಲಾಖೆಗೆ ಹಲವು ಬಾರಿ ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಆನೆಗಳ ದಾಳಿಯಿಂದಾಗಿ ಆರತಕ್ಷತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ವರ ತನ್ಮೋಯ್​ ಸಿಂಘ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts