More

    ತಾಲೂಕು ಪಂಚಾಯಿತಿ ಕಚೇರಿಗೆ ಡಿಕ್ಕಿ ಹೊಡೆದ ಬಸ್​!

    ಉಡುಪಿ: ಖಾಸಗಿ ಬಸ್​ವೊಂದು ಇಲ್ಲಿನ ತಾಲೂಕು ಪಂಚಾಯಿತಿ ಕಟ್ಟಡದತ್ತ ನುಗ್ಗಿದ್ದು, ಸೇವಾಸಿಂಧು ಕಚೇರಿಗೆ ಡಿಕ್ಕಿ ಹೊಡೆದಿದೆ.

    ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದ ಖಾಸಗಿ ಬಸ್​ ಸ್ಟಾರ್ಟ್ ಆಗದ ಕಾರಣ ಜರ್ಕ್ ನೀಡಲಾಗಿತ್ತು. ಇಳಿಜಾರಿದ್ದ ಪರಿಣಾಮ ವೇಗವಾಗಿ ಚಲಿಸಿದ ಬಸ್​, ಚಾಲಕನ ನಿಯಂತ್ರಣ ತಪ್ಪಿ ಎದುರಿದ್ದ ತಾಪಂ ಕಟ್ಟಡದತ್ತ ನುಗ್ಗಿತು.

    ತಾಲೂಕು ಪಂಚಾಯಿತಿ ಕಚೇರಿಗೆ ಡಿಕ್ಕಿ ಹೊಡೆದ ಬಸ್​!ಬಸ್​ನಲ್ಲಿ ಚಾಲಕನಿದ್ದರೂ ತಾಂತ್ರಿಕ ದೋಷ ಉಂಟಾಗಿ ಬ್ರೇಕ್ ಕೂಡ ಕೆಲಸ ಮಾಡಿಲ್ಲ. ವೇಗವಾಗಿ ಬಂದ ಬಸ್ ಸೇವಾಸಿಂಧು ಕಚೇರಿಗೆ ಡಿಕ್ಕಿ ಹೊಡೆದಿದೆ. ಕಟ್ಟಡದ ಮುಂಭಾಗ ಹಾನಿಯಾಗಿದ್ದು, ಕಚೇರಿ ಒಳಗಿದ್ದ ಕಂಪ್ಯೂಟರ್ ಕೂಡ ಜಖಂ ಆಗಿದೆ.

    ಘಟನೆಯಲ್ಲಿ ಬಸ್​ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಭಾನುವಾರ ರಜಾ ದಿನವಾಗಿದ್ದ ಹಿನ್ನೆಲೆಯಲ್ಲಿ ಸೇವಾ ಸಿಂಧು ಕಚೇರಿ ಮುಚ್ಚಿತ್ತು. ಹಾಗಾಗಿ ಅಲ್ಲಿ ಯಾರೂ ಇಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದೆ.

    ನಿವೇಶನದ ಸುತ್ತಲೂ 8 ಅಡಿ ಎತ್ತರದ ಕಾಂಪೌಂಡ್​ ನಿರ್ಮಿಸಿ ಗಾಂಜಾ ಬೆಳೆದರು!

    ಹಿಂದು ಎಂಬುದು ಧರ್ಮವೇ ಅಲ್ಲ; ಮತ್ತೊಂದು ವಿವಾದದ ಕಿಡಿ ಹಚ್ಚಿದ ಪ್ರೊ.ಭಗವಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts