More

    ಮೋಸದಿಂದ ಮಲೇಷ್ಯಾಗೆ ರವಾನೆಯಾಗಿದ್ದ ಯುವಕನನ್ನು ಕರೆತಂದ ಸಚಿವ…!

    ಬೀದರ್: ಈತ ಅರಿವಿಲ್ಲದೇ ಉದ್ಯೋಗ ಹುಡುಕುತ್ತಾ, ನಕಲಿ ಏಜೆಂಟರ ಬಳಿ ಹೋಗಿ ತಲುಪಿದ್ದಾನೆ. ಆತನನ್ನು ಈ ಏಜೆಂಟರು ಮೋಸದ ಜಾಲಕ್ಕೆ ಸಿಲುಕಿಸಿ ಮಲೇಷ್ಯಾ ತಲುಪಿಸಿದ್ದಾರೆ. ಆದರೆ ಅಲ್ಲಿ ಆತನಿಗೆ ಬೇರೆಯದೇ ವಿಧಿ ಕಾದಿತ್ತು.

    ಅಲ್ಲಿ ತಲುಪಿದ ಮೇಲೆ ಏಜೆಂಟರಿಂದ ಮೋಸ ಹೋಗಿ ಜೈಲು ಸೇರಿದ್ದರು. ನಂತರ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅವರ ಪ್ರಯತ್ನದಿಂದಾಗಿ ಯುವಕ ಮತ್ತೆ ಮನೆ ಸೇರಿದ್ದಾರೆ. ಅಂದ ಹಾಗೆ ಮೊಸ ಹೋದವರು ಶರಣಪ್ಪ ವೈಜಿನಾಥ ತಾಯ್ಕಲಕ್ಕೆ ಎಂದು. ಇವರು ಭಾಲ್ಕಿ ತಾಲ್ಲೂಕಿನ ಸಿದ್ಧೇಶ್ವರ ಗ್ರಾಮದವರು.

    ಯುವಕ ಮೋಸ ಹೋದ ವಿಷಯ ತಮ್ಮ ಗಮನಕ್ಕೆ ಬಂದ ಕೂಡಲೇ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ ಭಗವಂತ ಖೂಬಾ, ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಯುವಕನನ್ನು ಮಲೇಷ್ಯಾ ಜೈಲಿನಿಂದ ಬಿಡಿಸಿ, ಸ್ವದೇಶಕ್ಕೆ ಕರೆ ತಂದಿದ್ದಾರೆ.

    ಶನಿವಾರ ನಗರದ ಸಚಿವರ ಗೃಹ ಕಚೇರಿಗೆ ಬಂದ ಯುವಕ ಹಾಗೂ ಕುಟುಂಬದ ಸದಸ್ಯರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ‘ವಿದೇಶದಿಂದ ಕರೆ ತಂದು ನನಗೆ ಹೊಸ ಜೀವನ ನೀಡಿದ್ದೀರಿ. ನಮ್ಮ ಕುಟುಂಬ ನಿಮಗೆ ಚಿರಋಣಿಯಾಗಿದೆ’ ಎಂದು ಶರಣಪ್ಪ ಹೇಳಿದರು.

    ‘ನಮ್ಮಲ್ಲಿಯೇ ಮಾಡಲು ಬಹಳಷ್ಟು ಉದ್ಯೋಗಗಳಿವೆ. ಆದರೂ ವಿದೇಶಕ್ಕೆ ಹೋಗಲು ನಿರ್ಧಾರ ಮಾಡಿದ್ದಲ್ಲಿ ಏಜೆಂಟರ ಬಗ್ಗೆ ಸರಿಯಾಗಿ ತಿಳಿದುಕೊಂಡೇ ಹೋಗಬೇಕು. ನಕಲಿ ಏಜೆಂಟರಿಂದ ಮೋಸ ಹೋಗಬಾರದು’ ಎಂದು ಖೂಬಾ ಸಲಹೆ ನೀಡಿದ್ದಾರೆ.

    ಈ ಸಂದರ್ಭ ಮಾತನಾಡಿ ಸಚಿವರು ‘ಶರಣಪ್ಪ ಅವರಂಥ ಇನ್ನೂ ಎರಡು ಪ್ರಕರಣಗಳು ನಮ್ಮ ಬಳಿ ಇವೆ. ಅವರೂ ಮಲೇಷ್ಯಾದ ಜೈಲಿನಲ್ಲಿದ್ದಾರೆ. ಅವರನ್ನೂ ಆದಷ್ಟು ಬೇಗನೆ ವಾಪಸ್​ ಕರೆ ತರಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts