More

    ಟೋಕಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್ ರಿಂಗ್‌ನಲ್ಲೇ ಪ್ರತಿಭಟನೆಗೆ ಕುಳಿತ ಬಾಕ್ಸರ್!

    ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಸೂಪರ್ ಹೆವಿವೇಟ್ ಬಾಕ್ಸಿಂಗ್ ಸ್ಪರ್ಧೆಯ ಕ್ವಾರ್ಟರ್​ಫೈನಲ್‌ನಲ್ಲಿ ಅನರ್ಹಗೊಂಡ ಫ್ರಾನ್ಸ್ ಬಾಕ್ಸರ್ ಮೌರಡ್ ಅಲೀವ್, ಬಾಕ್ಸಿಂಗ್ ರಿಂಗ್‌ನಲ್ಲೇ ಸುಮಾರು ಒಂದು ಗಂಟೆ ಕಾಲ ಕುಳಿತುಕೊಂಡು ರೆಫ್ರಿ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಿದರು.

    ಮೌರಡ್ ಉದ್ದೇಶಪೂರ್ವಕವಾಗಿ ತಲೆಯಿಂದ ಗುದ್ದಿ ಎದುರಾಳಿ ಬ್ರಿಟನ್‌ನ ಫ್ರೇಜರ್ ಕ್ಲಾರ್ಕ್ ಕಣ್ಣಿನ ಪಕ್ಕ ಗಾಯಗೊಳಿಸಿದರು ಎಂದು ಆರೋಪಿಸಿ ರೆಫ್ರಿ ಆಂಡಿ ಮುಸ್ಟಾಚಿಯೊ, 2ನೇ ಸುತ್ತಿನಲ್ಲಿ 4 ಸೆಕೆಂಡ್ ಬಾಕಿ ಇರುವಾಗಲೇ ಅವರನ್ನು ಅನರ್ಹಗೊಳಿಸಿದ್ದರು. ಆದರೆ ರೆಫ್ರಿ ತೀರ್ಪು ಹೊರಬಿದ್ದ ಬಳಿಕ ಮೌರಡ್ ಅಲೀವ್ ರಿಂಗ್‌ನಿಂದ ನಿರ್ಗಮಿಸದೆ, ರಿಂಗ್ ಹಗ್ಗದ ಹೊರಗೆ ಮೆಟ್ಟಿಲುಗಳ ಮೇಲೆ ಕಾಲಿಟ್ಟು ಕುಳಿತುಕೊಂಡರು. ಅವರ ತವರಿನ ಫ್ರಾನ್ಸ್ ತಂಡದ ಅಧಿಕಾರಿಗಳು ಬಂದು ಒತ್ತಾಯಿಸಿದರೂ ಅವರು ಅಲ್ಲಿಂದ ನಿರ್ಗಮಿಸಲಿಲ್ಲ.

    ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ 5 ಸ್ವರ್ಣ ಪದಕ ಬೇಟೆಯಾಡಿದ ಅಮೆರಿಕದ ಚಿನ್ನದ ಮೀನು ಡ್ರೆಸ್ಸೆಲ್

    ‘ನಿಮ್ಮ ತೀರ್ಪು ನ್ಯಾಯೋಚಿತವಾಗಿರಲಿಲ್ಲ ಎಂಬುದನ್ನು ನಾನು ಈ ರೀತಿ ವ್ಯಕ್ತಪಡಿಸುತ್ತಿರುವೆ. ಅನ್ಯಾಯದ ವಿರುದ್ಧ ನಾನು ಪ್ರತಿಭಟಿಸಿದೆ. ಈ ಅವಕಾಶಕ್ಕಾಗಿ ನಾನು ಜೀವನವಿಡೀ ತರಬೇತಿ ಪಡೆದಿದ್ದೆ. ಒಬ್ಬ ರೆಫ್ರಿಯ ಕೆಟ್ಟ ತೀರ್ಪಿನಿಂದ ನಾನಿಂದು ಸೋತೆ. ನನ್ನ ಪಾಲಿಗೆ ಎಲ್ಲವೂ ಮುಗಿಯಿತು’ ಎಂದು ಮೌರಡ್ ಹೇಳಿದ್ದಾರೆ. ಮೌರಡ್ ಪ್ರತಿಭಟನೆಯಿಂದ ಕೂಟದ ಇತರ ಪಂದ್ಯಗಳಿಗೆ ಯಾವುದೇ ಅಡಚಣೆಯಾಗಲಿಲ್ಲ. ಯಾಕೆಂದರೆ ಅದು ಮಧ್ಯಾಹ್ನದ ಅವಧಿಯ ಕೊನೇ ಪಂದ್ಯವಾಗಿತ್ತು.

    ಒಲಿಂಪಿಕ್ಸ್ ಹೈಜಂಪ್‌ನಲ್ಲಿ ಇಬ್ಬರಿಗೆ ಚಿನ್ನದ ಪದಕ! ಕಾರಣವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts