More

    14 ದಿನಗಳ ಪ್ರತ್ಯೇಕ ನಿಯಮವನ್ನು ಮುರಿದ ಮೇರಿ ಕೋಮ್​; ರಾಷ್ಟ್ರಪತಿ ಭವನದಲ್ಲಿ ಬ್ರೇಕ್​ಫಾಸ್ಟ್​ ಪಾರ್ಟಿ

    ನವದೆಹಲಿ: ಜಗತ್ತಿನಾದ್ಯಂತ ಕರೊನಾ ವೈರಸ್​ ಭೀತಿ ಹೆಚ್ಚಿದೆ. ದೇಶದಲ್ಲಿ ಕರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು, ವೈರಸ್​ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ವಿದೇಶಗಳಿಂದ ದೇಶಕ್ಕೆ ಬಂದಿರುವ ಜನರಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಮನೆಯಿಂದ ಹೊರಬರದಿರಿ ಎಂದು ತಿಳಿಸಲಾಗಿದ್ದು, ಇದೀಗ ಪ್ರಸಿದ್ಧ ಬಾಕ್ಸರ್​ ಮತ್ತು ರಾಜ್ಯ ಸಭಾ ಸದಸ್ಯೆ ಮೇರಿ ಕೋಮ್​ ಈ ನಿಯಮವನ್ನು ಮುರಿದಿರುವ ವಿಚಾರ ಬೆಳಕಿಗೆ ಬಂದಿದೆ.

    ಜೋರ್ಡನ್​ನ ಅಮ್ಮನ್​ನಲ್ಲಿ ಏಷ್ಯಾ ಒಲಂಪಿಕ್​ ಕ್ವಾಲಿಪೈರ್​ ಪಂದ್ಯದಲ್ಲಿ ಭಾಗವಹಿಸಿರುವ ಮೇರಿ ಕೋಮ್​ ಮಾರ್ಚ್​ 13ರಂದು ಭಾರತಕ್ಕೆ ಮರಳಿದ್ದಾರೆ. ಅಂದಿನಿಂದ 14 ದಿನಗಳ ಕಾಲ ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ಆಕೆಗೆ ತಿಳಿಸಲಾಗಿತ್ತಾದರೂ ಅದನ್ನು ಮೀರಿ ಆಕೆ ರಾಷ್ಟ್ರಪತಿ ಭವನಕ್ಕೆ ಬಂದಿದ್ದಾರೆ.

    ಮಾರ್ಚ್​ 18ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಬ್ರೇಕ್​ಫಾಸ್ಟ್​ ಪಾರ್ಟಿ ನಡೆಸಿದ್ದು ಅದರಲ್ಲಿ ಮೇರಿ ಕೋಮ್​ ಪಾಲ್ಗೊಂಡಿದ್ದಾರೆ. ರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಬ್ರೇಕ್​ಫಾಸ್ಟ್​ ಪಾರ್ಟಿಯ ಫೋಟೋ ಹಾಕಲಾಗಿದ್ದು ಅದರಲ್ಲಿ ಮೇರಿ ಕೋಮ್​ ಕಾಣಿಸಿಕೊಂಡಿದ್ದಾರೆ. ತಾವು ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾಗಿ ಆಕೆ ಒಪ್ಪಿಕೊಂಡಿದ್ದಾರೆ.

    ರಾಷ್ಟ್ರಪತಿಗಳ ಬ್ರೇಕ್​ಫಾಸ್ಟ್ ಪಾರ್ಟಿಯಲ್ಲಿ ಕರೊನಾ ವೈರಸ್​ ಸೋಂಕಿತೆ ಕನ್ನಿಕಾ ಕಪೂರ್​ರನ್ನು ಭೇಟಿ ಮಾಡಿ ಬಂದಿದ್ದ ಬಿಜೆಪಿ ನಾಯಕ ದುಷ್ಯಂತ್​ ಸಿಂಗ್​ ಕೂಡ ಭಾಗವಹಿಸಿದ್ದರು. ಸೋಂಕಿತೆಯೊಂದಿಗೆ ಸಂಪರ್ಕ ಮಾಡಿ ಬಂದಿರುವವರೊಬ್ಬರು ತಮ್ಮ ಕಾರ್ಯಕ್ರಮದಲ್ಲಿದ್ದ ಕಾರಣ ರಾಷ್ಟ್ರಪತಿಗಳು ವೈರಸ್​ ತಪಾಸಣೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    ಭಾರತದ 30 ಕೋಟಿ ಜನರಿಗೆ ಹರಡುತ್ತೆ ಕರೊನಾ ವೈರಸ್​! ಎಚ್ಚರ ತಪ್ಪಿದರೆ ನೀವೂ ಬಲಿಯಾಗುತ್ತೀರಿ ಎಂದ ಪರಿಣತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts