More

    VIDEO | ಟೀಮ್ ಇಂಡಿಯಾ ಜೆರ್ಸಿ ಧರಿಸಿ ಲಾರ್ಡ್ಸ್ ಮೈದಾನಕ್ಕೆ ನುಗ್ಗಿದ ಇಂಗ್ಲೆಂಡ್ ಪ್ರೇಕ್ಷಕ!

    ಲಂಡನ್: ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ವೇಳೆ ಭಾರತೀಯ ಜೆರ್ಸಿ ಧರಿಸಿದ್ದ ಇಂಗ್ಲೆಂಡ್ ಪ್ರೇಕ್ಷಕನೊಬ್ಬ ಲಾರ್ಡ್ಸ್ ಮೈದಾನ ಪ್ರವೇಶಿಸಿ ಕೆಲಕಾಲ ಅಡಚಣೆ ಉಂಟುಮಾಡಿದ್ದಲ್ಲದೆ, ಕರೊನಾ ಕಾಲದ ಬಯೋಬಬಲ್‌ನಲ್ಲಿ ಭದ್ರತಾ ಮತ್ತು ಸುರಕ್ಷತೆಯ ಭೀತಿಯನ್ನೂ ಸೃಷ್ಟಿಸಿದ.

    ಭದ್ರತಾ ಸಿಬ್ಬಂದಿ ತಡೆದರೂ, ಎದೆಭಾಗದಲ್ಲಿನ ಬಿಸಿಸಿಐ ಲಾಂಛನ ತೋರಿಸಿದ ಆತ ನಾನು ಭಾರತ ತಂಡದ ಆಟಗಾರ ಎಂಬಂತೆ ವರ್ತಿಸಿದ. ಅಲ್ಲದೆ ಚಪ್ಪಾಳೆ ತಟ್ಟುತ್ತ ಬನ್ನಿ ಆಡೋಣ ಎಂದು ಭಾರತೀಯ ಆಟಗಾರರಿಗೆ ಸೂಚಿಸಿದ. ಆಗ ಆತನನ್ನು ಬಲವಂತವಾಗಿ ಭದ್ರತಾ ಸಿಬ್ಬಂದಿ ಮೈದಾನದಿಂದ ಹೊರಕಳುಹಿಸಿದರು. ‘ಜಾರ್ವೋ’ ಎಂದು ಆತನ ಜೆರ್ಸಿಯ ಬೆನ್ನಹಿಂದೆ ಬರೆದಿತ್ತು.

    ಇದನ್ನೂ ಓದಿ: ಕಬಡ್ಡಿ ಯಾಕೆ ಇನ್ನೂ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಿಲ್ಲ? ಹೀಗಿದೆ ಕಾರಣ…

    ಈ ಘಟನೆಯನ್ನು ನೋಡಿ ವೇಗಿ ಮೊಹಮದ್ ಸಿರಾಜ್ ದೊಡ್ಡದಾಗಿ ನಕ್ಕರು. ಅಲ್ಲದೆ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ಮುನ್ನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡದ ಆಟಗಾರರು ಜನಾಂಗೀಯ ನಿಂದನೆಯನ್ನೂ ಎದುರಿಸಿದ್ದರು.

    ರಾಹುಲ್‌ಗೆ ಕಾರ್ಕ್ ಎಸೆತ!
    3ನೇ ದಿನದಾಟದಲ್ಲಿ ಭೋಜನ ವಿರಾಮಕ್ಕೆ ಮುನ್ನ ಕೆಎಲ್ ರಾಹುಲ್ ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಲಾರ್ಡ್ಸ್ ಕ್ರೀಡಾಂಗಣದ ಪ್ರೇಕ್ಷಕರ ಸ್ಟಾೃಂಡ್‌ನಿಂದ ಶಾಂಪೇನ್ ಬಾಟಲಿಯ ಕಾರ್ಕ್‌ಗಳು (ಬಿರಡೆ) ತೂರಿಬಂದವು. ಈ ಘಟನೆಯ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದರು ಮತ್ತು ಕಾರ್ಕ್‌ಗಳನ್ನು ಮೈದಾನದಿಂದ ಹೊರಕ್ಕೆ ಎಸೆಯುವಂತೆ ಸೂಚಿಸಿದರು. ಅಲ್ಲದೆ ಈ ಬಗ್ಗೆ ಅಂಪೈರ್‌ಗೆ ದೂರು ಸಲ್ಲಿಸಿದ ಕಾರಣ ಕೆಲಕಾಲ ಆಟಕ್ಕೂ ಅಡಚಣೆಯಾಯಿತು.

    ಜಮೈಕಾ ಅಥ್ಲೀಟ್ ಚಿನ್ನದ ಪದಕ ಗೆಲುವಿಗೆ ನೆರವಾದ ಒಲಿಂಪಿಕ್ಸ್ ಸ್ವಯಂಸೇವಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts