More

    ಜೂನ್ 15ರಿಂದ ಬಾಲಿವುಡ್​ನಲ್ಲಿ ಸಿನಿಮಾ ಶೂಟಿಂಗ್​ ಶುರು; ಸ್ಯಾಂಡಲ್​ವುಡ್​ನಲ್ಲಿ ಯಾವಾಗ?

    ಮುಂಬೈ: ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಸಿನಿಮಾ ಶೂಟಿಂಗ್​ ಸಂಪೂರ್ಣ ಸ್ಥಗಿತಗೊಂಡಿದೆ. ಹೈದರಾಬಾದ್​ನಲ್ಲಿ ಧಾರಾವಾಹಿಗಳ ಶೂಟಿಂಗ್ ನಡೆಯುತ್ತಿದೆಯಾದರೂ, ಪೂರ್ಣ ಪ್ರಮಾಣದಲ್ಲಿ ಕೆಲಸ ಶುರುವಾಗಿಲ್ಲ. ಈ ನಡುವೆ ಮುಂಬೈನಲ್ಲಿ ಸಿನಿಮಾ ಚಿತ್ರೀಕರಣವೇ ಶುರುವಾಗಲಿದೆ. ಜೂ. 15ರಿಂದ ಹಲವು ಚಿತ್ರತಂಡಗಳು ಚಿತ್ರೀಕರಣಕ್ಕೆ ಪ್ಲಾನ್ ಸಿದ್ಧಪಡಿಸಿವೆ.

    ಇದನ್ನೂ ಓದಿ: ಮೊದಲು ಮಾನವರಾಗೋಣ … ರಶ್ಮಿಕಾ ಬಗ್ಗೆ ಮಾತಾಡಿದವರ ಬಗ್ಗೆ ರಕ್ಷಿತ್ ಬೇಸರ

    ಸದ್ಯ ಅಧಿಕೃತವಾಗಿ ಶೂಟಿಂಗ್​ ಆರಂಭಿಸಲಿದ್ದೇವೆ ಎಂದು ಗಂಗೂಬಾಯಿ ಕಥೈವಾಡಿ ತಂಡ ಘೋಷಣೆ ಮಾಡಿದೆ. ಜೂ. 15ರಿಂದ ಹಾಡಿನ ಶೂಟಿಂಗ್​ ಮಾಡಿಕೊಳ್ಳಲಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಈ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿದೆ. ಇದೀಗ ಬಾಕಿ ಉಳಿದ ಹಾಡುಗಳ ಕೆಲಸಕ್ಕೆ ಇಳಿದಿದೆ.

    ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಈ ನಿರ್ಧಾರಕ್ಕೆ ಬಂದಿದ್ದು, ಕೇವಲ ಗಂಗೂಬಾಯಿ ಕಥೈವಾಡಿ ಅಷ್ಟೇ ಅಲ್ಲದೆ, ಇನ್ನೂ ಹಲವು ಸಿನಿಮಾತಂಡಗಳೂ ಚಿತ್ರೀಕರಣಕ್ಕೆ ತೆರೆಮರೆಯಲ್ಲಿಯೇ ಪ್ಲಾನ್ ಮಾಡಿಕೊಂಡಿವೆ. ನೂತನ ಮಾರ್ಗಸೂಚಿ ಪ್ರಕಾರ ಶೂಟಿಂಗ್​ನಲ್ಲಿ ಭಾಗಿಯಾಗಲಿವೆ.

    ಇದನ್ನೂ ಓದಿ: ದರ್ಶನ್-ಪ್ರೇಮ್ ಹೊಸ ಚಿತ್ರ … ಸುದ್ದಿ ನಿರಾಕರಿಸಿದ ರಕ್ಷಿತಾ ಪ್ರೇಮ್

    ಹಾಗಾದರೆ ಸ್ಯಾಂಡಲ್​ವುಡ್​ನಲ್ಲಿ ಶೂಟಿಂಗ್ ಯಾವಾಗ?

    ಸದ್ಯದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಅಧಿಕೃತವಾಗಿ ಲಾಕ್​ಡೌನ್ ತೆರವಾಗಿಲ್ಲ. ಈ ನಡುವೆ ಮೂರನೇ ಅಲೆಯ ಭಯವೂ ಜೋರಾಗಿರುವುದರಿಂದ ಸರ್ಕಾರ ಶೂಟಿಂಗ್​ಗೆ ಅನುಮತಿ ನೀಡುವ ಲಕ್ಷಣಗಳು ಕಾಣುತ್ತಿಲ್ಲ. ಹಾಗಾಗಿಯೇ ಇಲ್ಲಿನ ಒಂದಷ್ಟು ಧಾರಾವಾಹಿ ತಂಡಗಳು ಹೈದರಾಬಾದ್​ನಲ್ಲಿ ಬೀಡು ಬಿಟ್ಟಿವೆ. ಈಗಾಗಲೇ ಸರ್ಕಾರದಿಂದ ಅವಕಾಶ ಸಿಗುವುದನ್ನೇ ಸಾಕಷ್ಟು ಚಿತ್ರತಂಡಗಳು ಕಾಯುತ್ತಿವೆ. ಒಂದು ವೇಳೆ ಕೋವಿಡ್ ಪ್ರಕರಣಗಳ ಸಂಖ್ಯೆ ಎರಡಂಕಿಗೆ ಇಳಿದರೆ ಆಗ ಶೂಟಿಂಗ್​ಗೆ ಅನುಮತಿ ನೀಡಬಹುದು. ಇತ್ತೀಚಿನ ಕೆಲ ದಿನಗಳಿಂದ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಡಿಮೆ ಆಗಿದ್ದು, ಜುಲೈಗೆ ಶೂಟಿಂಗ್​ಗೆ ಅನುಮತಿ ಸಿಗಬಹುದು ಎನ್ನಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts