More

    VIDEO| ಬಾಡಿ ಬಿಲ್ಡ್​ ಮಾಡುವವರೇ ಹುಷಾರ್​! ಚೂರು ಹೆಚ್ಚು ಕಡಿಮೆಯಾದರೂ ನಿಮ್ಮ ಜೀವಕ್ಕೇ ಕುತ್ತು!

    ದುಬೈ: ಬಾಡಿ ಬಿಲ್ಡ್​ ಮಾಡುವ ಕನಸು ಈಗಿನ ಯುವ ಸಮಾಜದಲ್ಲಿ ಸಾಮಾನ್ಯವೆನ್ನುವಂತಾಗಿದೆ. ಈ ಬಾಡಿ ಬಿಲ್ಡಿಂಗ್​ ಸರಿಯಾದ ಕ್ರಮದಲ್ಲಿ ಮಾಡಿದರೆ ಒಳ್ಳೆಯದು. ಅದರಲ್ಲಿ ಚೂರು ಹೆಚ್ಚು ಕಡಿಮೆಯಾದರೂ ಯಾವ ರೀತಿಯ ಸಮಸ್ಯೆಯಾಗಬಹುದು ಎನ್ನುವುದಕ್ಕೆ ಈ ಘಟನೆ ಒಂದು ಸಾಕ್ಷಿ.

    ದುಬೈನ ಬಾಡಿ ಬಿಲ್ಡರ್​ ರಿಯಾನ್ ಕ್ರೌಲಿಯ ಕಥೆಯಿದು. ಇತ್ತೀಚೆಗೆ ಒಂದು ದಿನ ಜಿಮ್​ನಲ್ಲಿ ಆತ ವರ್ಕ್​ಔಟ್​ ಮಾಡುವಾಗ ಆಗಬಾರದ್ದು ಆಗಿದೆ. ಸುಮಾರು 180 ಕೆಜಿ ತೂಕವನ್ನು ಎರಡೂ ಕೈಗಳಿಂದ ಎತ್ತುವಾಗ ಇದ್ದಕ್ಕಿದ್ದಂತೆ ಬಲಗೂ ಮಾಂಸ ಜಾರಿದೆ. ಒಂದೇ ಕಡೆಯಲ್ಲಿ ಹಿಡಿದುಕೊಂಡು ರಿಯಾನ್​ ನೋವಿನಿಂದ ಬಳಲುವಂತಾಗಿದೆ. ಆತನ ಜತೆಗೆ ಆತನ ಟ್ರೈನರ್​ ಕೂಡ ಇದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ರಿಯಾನ್​ನ ಕೈಗೆ ಆಪರೇಷನ್​ ಮಾಡಲಾಗಿದೆ. ಇದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗಿದೆಯಂತೆ. ತನ್ನ ಶಿಷ್ಯನ ಆಪರೇಷನ್​ಗಾಗಿ ರಿಯಾನ್​ನ ಟ್ರೈನರ್​ ಸಾಮಾಜಿಕ ಜಾಲತಾಣಗಳಲ್ಲಿ ಹಣ ಸಂಗ್ರಹಿಸಿದ್ದಾನೆ. ಸುಮಾರು 27 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆಯಂತೆ. ಆದರೆ ರಿಯಾನ್​ ಮೊದಲಿನಂತಾಗಲು ಇನ್ನು ಸಾಕಷ್ಟು ತಿಂಗಳುಗಳು ಬೇಕಾಗಬಹುದು ಎಂದಿದ್ದಾರೆ ವೈದ್ಯರು. (ಏಜೆನ್ಸೀಸ್​)

    ವಾಷಿಂಗ್​ ಮಷಿನ್​​ ಒಳಗೆ ಸೇರಿಕೊಂಡ ಹಾವು! ಸ್ವಿಚ್​ ಆನ್​ ಮಾಡಿದ ಮಹಿಳೆ.. ಮುಂದೇನಾಯ್ತು?

    ಆಮೆಗಳನ್ನೇ ತಿನ್ನುತ್ತವೆ ಏಡಿಗಳು! ಏಡಿ ಹುಟ್ಟಿದ್ದು ಜೇಡದಿಂದ..! ಏಡಿ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts