More

    ‘777 ಚಾರ್ಲಿ’ ಟೀಮ್​ಗೆ ಬಂದ ಕಾಲಿವುಡ್​ನ ಬಾಬ್ಬಿ ಸಿಂಹ

    ಬೆಂಗಳೂರು: ಹಲವು ಕುತೂಹಲಗಳಿಂದಲೇ ಗಮನಸೆಳೆಯುತ್ತಿದೆ ನಟ ರಕ್ಷಿತ್​ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ. ಈಗಾಗಲೇ ಬಹುತೇಕ ಕೆಲಸಗಳನ್ನು ಮುಗಿಸಿಕೊಂಡಿರುವ ಚಾರ್ಲಿ ತಂಡ, ಶುಭ ಶುಕ್ರವಾರ ಸಿನಿಮಾಭಿಮಾನಿಗಳಿಗೆ ಸರ್ಪ್ರೈಸ್ ಉಡುಗೊರೆ ನೀಡಿದೆ. ತಮಿಳಿನ ಖ್ಯಾತ ನಟ ಬಾಬ್ಬಿ ಸಿಂಹ ಚಾರ್ಲಿ ಚಿತ್ರದಲ್ಲಿ ನಟಿಸಿದ್ದು, ಅವರ ಲುಕ್​ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ಮಜಾಭಾರತ ಮತ್ತೆ ಶುರು: ನವೆಂಬರ್ 7ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರ

    ಇಂದು (ನ.6) ಬಾಬ್ಬಿ ಸಿಂಹ ಜನ್ಮದಿನ. ಅವರ ಹುಟ್ಟುಹಬ್ಬಕ್ಕೆ ಚಿತ್ರದಲ್ಲಿನ ಫಸ್ಟ್ ಲುಕ್​ ಬಿಡುಗಡೆ ಮಾಡಲಾಗಿದೆ. ಮೊದಲ ಬಾರಿ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಅವರ ಆಗಮನವಾಗುತ್ತಿದೆ. ಚಿತ್ರದ ದ್ವಿತೀಯಾರ್ಧದಲ್ಲಿ ವಂಶಿನಾಧನ್​ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಾಬ್ಬಿ ಸಿಂಹ, ತೆರೆಮೇಲೆ ಕಡಿಮೆ ಸಮಯ ಕಾಣಿಸಿಕೊಂಡರು, ಒಂದಷ್ಟು ತಿರುವು ನೀಡಿ ಹೋಗುತ್ತಾರಂತೆ.


    ಬಹುತೇಕ ಚಿತ್ರೀಕರಣವನ್ನೂ ಇಡೀ ತಂಡ ಮುಗಿಸಿಕೊಂಡಿರುವುದರಿಂದ, ಇನ್ನೇನು ಶೀಘ್ರದಲ್ಲಿ ಸಿನಿಮಾ ಬಗ್ಗೆ ಅಪ್​ಡೇಟ್​ ಮಾಹಿತಿ ನೀಡಲಿದೆ. ಪರಮ್ವಾ ಸ್ಟುಡಿಯೋಸ್ ಮತ್ತು ಪುಷ್ಕರ್​ ಫಿಲಂಸ್​ ಬ್ಯಾನರ್​ನಲ್ಲಿ ಸಿದ್ಧವಾಗಿರುವ 777 ಚಾರ್ಲಿ ಚಿತ್ರವನ್ನು ರಕ್ಷಿತ್​ ಶೆಟ್ಟಿ ಮತ್ತು ಪುಷ್ಕರ್​ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಕಿರಣ್​ ರಾಜ್​ ಆ್ಯಕ್ಷನ್​ ಕಟ್​ ಹೇಳಿದ್ದು, ಚಿತ್ರದ ಶೇ. 90 ಭಾಗದ ಶೂಟಿಂಗ್​ ಮುಗಿದಿದೆ.

    ಯಾರೂ ಮಾಡದ ಸಾಹಸಕ್ಕೆ ಕೈಹಾಕಿದ ಮಂಸೋರೆ; ಚಿತ್ರಮಂದಿರಕ್ಕೆ ಬರಲು ಸಜ್ಜಾಯ್ತು ‘ಆ್ಯಕ್ಟ್ 1978’ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts