More

    ಸಿಗ್ನಲ್​ನಲ್ಲಿ ನಿಂತಿದ್ದ ವಾಹನಗಳತ್ತ ನುಗ್ಗಿ ಮಹಿಳೆ ಸಮೇತ ಸ್ಕೂಟಿ ಎಳೆದೊಯ್ದ ಬಿಎಂಡಬ್ಲ್ಯು

    ಮಂಗಳೂರು: ಟ್ರಾಫಿಕ್​ ಸಿಗ್ನಲ್​ನಲ್ಲಿ ನಿಂತಿದ್ದ ವಾಹನಗಳ ಕಡೆ ಏಕಾಏಕಿ ನುಗ್ಗಿದ ಬಿಎಂಡಬ್ಲ್ಯು ಕಾರು ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆಯ ಮೇಲೆ ಹರಿದಿರುವ ಭೀಕರ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಮಂಗಳೂರಿನ ಬಲ್ಲಾಬಾಗ್​ ಜಂಕ್ಷನ್​ನಲ್ಲಿ ಶನಿವಾರ ಮಧ್ಯಾಹ್ನ 1.20ಕ್ಕೆ ಈ ದುಘರ್ಟನೆ ನಡೆದಿದೆ.

    ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಂದ ರಶ್ಮಿಕಾಗೆ ಛೀಮಾರಿ! ಕಾರಣ ಗೊತ್ತಾ?

    ಟ್ರಾಫಿಕ್​ ಸಿಗ್ನಲ್​ ಇದ್ದುದರಿಂದ ಸ್ಕೂಟಿಯಲ್ಲಿ ಬಂದ ಮಹಿಳೆ ದ್ವಿಚಕ್ರವಾಹನವನ್ನು ನಿಲ್ಲಿಸಿದ್ದರು,ಇದೇ ವೇಳೆ ಮತ್ತೋರ್ವ ಮಹಿಳೆ ರಸ್ತೆ ದಾಟಲು ಅಲ್ಲೇ ನಿಂತಿದ್ದರು ಎತ್ತಲಿಂದಲೋ ಬಂದ ಬಿಎಂಡಬ್ಲ್ಯು  ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ನಿಂತಿರುವ ವಾಹನಗಳತ್ತ ನುಗ್ಗಿದೆ. ಘಟನೆಯಲ್ಲಿ ಮಹಿಳೆ ಗಂಭೀರ ಗಾಯಗೊಂಡಿದ್ದು, ಸ್ಕೂಟಿ ನುಜ್ಜುಗುಜ್ಜಾಗಿದೆ. ರಸ್ತೆ ದಾಟುತ್ತಿದ್ದ ಮಹಿಳೆಯೂ ಗಾಯಗೊಂಡಿದ್ದಾರೆ.ಕೂಡಲೇ ಅಲ್ಲಿದ್ದ ಜನರು ಕಾರು ಚಾಲಕನನ್ನು ಹಿಡಿದು ಥಳಿಸಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಚಾಲಕ ಮದ್ಯಪಾನ ಮಾಡಿರುವುದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಟ್ರಾಫಿಕ್​ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    ತರಗತಿ ಒಳಗೆ ಯುವತಿಯರ ಎಣ್ಣೆ ಪಾರ್ಟಿ: ವಿಡಿಯೋ ವೈರಲ್​ ಆದ ಬೆನ್ನಲ್ಲೇ ಐವರಿಗೆ ಬಿಗ್​ ಶಾಕ್!​

    ಹಗಲುಹೊತ್ತಿನಲ್ಲೇ 500 ಟನ್​ ತೂಕದ ಸ್ಟೀಲ್​ ಬ್ರಿಡ್ಜ್​​ ಕಳವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts