More

    ಆಟೋ ರಿಕ್ಷಾ ಚಾಲಕರ ಪ್ರತಿಭಟನೆ; ಅಲರ್ಟ್​ ಆದ ಬಿಎಂಟಿಸಿ!

    ಬೆಂಗಳೂರು: ಆಟೋ ರಿಕ್ಷಾ ಚಾಲಕರು ಬೈಕ್​ ಟ್ಯಾಕ್ಸಿ ಸೇವೆಗಳನ್ನು ನಿಷೇಧಿಸುವಂತೆ ಪ್ರತಿಭಟನೆಗೆ ಇಳಿದಿದ್ದು ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡಿರುವ ಬಿಎಂಟಿಸಿ, ಪ್ರಯಾಣಿಕರಿಗೆ ತೊಂದರೆ ಆಗಬಾರದು ಎಂದು ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

    ಪ್ರಯಾಣಿಕರಿಗೆ ತೊಂದರೆಯಾಗದಂತೆ ಹೆಚ್ಚಿನ ಬಸ್ ಕಾರ್ಯಚರಣೆಗೆ ಬಿಎಂಟಿಸಿ ಮುಂದಾಗಿದೆ. ಈಗಾಗಲೇ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸೇವೆ ನೀಡಲು ತಯಾರಿ ನಡೆಸಲಾಗಿದ್ದು ಅಗತ್ಯ ಭಾಗಗಳಿಗೆ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್, ಮಾರುಕಟ್ಟೆ, ಶಾಂತಿನಗರ, ಶಿವಾಜಿನಗರ, ಯಶವಂತಪುರ, ಸೇರಿ ಪ್ರಮುಖ ನಿಲ್ದಾಣಗಳಿಂದ ಹೆಚ್ಚಿನ ಕಾರ್ಯಚರಣೆಗೆ ಬಿಎಂಟಿಸಿ ಮುಂದಾಗಿದೆ.

    ಇದನ್ನೂ ಓದಿ: ಬಿಎಂಟಿಸಿ ಬಸ್​ನಲ್ಲಿ ನಿರ್ವಾಹಕನ ಸಜೀವ ದಹನ; ಆಕಸ್ಮಿಕನಾ ಅಥವಾ ಇದರ ಹಿಂದಿದ್ಯಾ ಸಂಚಿನ ಕಥೆ?

    ಆಟೋ ಮುಷ್ಕರ ಹಿನ್ನೆಲೆ ಒನ್ ಟು ಡಬಲ್ ದರ

    ಮೀಟರ್ ಮೇಲೆ ಒಂದಿಷ್ಟು ಹಣ ಕೊಡಿ ಅಂತ ಕೇಳ್ತಿದ್ದ ಆಟೋ ಚಾಲಕರು ಇದೀಗ ಆಟೋ ಬಂದ್​ಅನ್ನೇ ಬಂಡವಾಳ ಮಾಡಿಕೊಂಡು ಮನಸೋ ಇಚ್ಛೆ ಕೆಲ ಆಟೋ ಚಾಲಕರು ಹಣ ಕೇಳುತ್ತಿದ್ದಾರೆ. ಆಟೋ ಮುಷ್ಕರ ಹಿನ್ನೆಲೆ ಪ್ರಯಾಣಿಕರು ಮೆಟ್ರೋ, ಬಿಎಂಟಿಸಿ ಕಡೆಗೆ ಕಡೆ ಮುಖ ಮಾಡಿದ್ದಾರೆ. ನಮ್ಮ ಮೆಟ್ರೋ ಮುಖಾಂತರ ನಗರದ ಬೇರೆ ಬೇರೆ ಭಾಗಗಗಳಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಪ್ರತಿದಿನಕ್ಕೆ ಹೋಲಿಕೆ ಮಾಡಿದ್ರೆ ಮೆಟ್ರೋ ಪ್ರಯಾಣವನ್ನೇ ಸಾರ್ವಜನಿಕರು ಆಯ್ಕೆ ಮಾಡಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts