More

    ಜೂ. 7ರಂದು ಬಿಎಂಟಿಸಿ ಬಸ್​ ಸಂಚಾರ ಶುರು; ಚಾಲಕ-ನಿರ್ವಾಹಕರಿಗೆ ಲಸಿಕೆ-ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯ

    ಬೆಂಗಳೂರು: ಕರೊನಾ ಸೋಂಕಿನ ತೀವ್ರತೆ ಹಿನ್ನೆಲೆಯಲ್ಲಿ ಜಾರಿಯಾಗಿರುವ ಲಾಕ್‌ಡೌನ್ ಜೂ. 7ಕ್ಕೆ ಕೊನೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಜೂ. 7ರಿಂದ ಬಿಎಂಟಿಸಿ ಹಂತ ಹಂತವಾಗಿ ಬಸ್ ಸೇವೆ ಆರಂಭಿಸಲು ನಿರ್ಧರಿಸಿದೆ.

    ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ರಾಜ್ಯ ಸರ್ಕಾರ ಜೂ. 7ರ ನಂತರ ಲಾಕ್‌ಡೌನ್ ಸಡಿಲಿಕೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಬಿಎಂಟಿಸಿ ಬಸ್ ಸೇವೆ ಮತ್ತೆ ಆರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರ ಸಂಖ್ಯೆಗನುಗುಣವಾಗಿ ಹಂತ ಹಂತವಾಗಿ ಬಸ್ ಸೇವೆ ನೀಡಲಾಗುತ್ತದೆ. ಅದಕ್ಕಾಗಿ ಅಗತ್ಯವಿರುವ ಚಾಲಕ-ನಿರ್ವಾಹಕ ಸೇರಿ ಇನ್ನಿತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

    ಇದನ್ನೂ ಓದಿ: ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ವೈದ್ಯಕೀಯ ಪರೀಕ್ಷೆ ಕಡ್ಡಾಯ: ಕೆಲಸಕ್ಕೆ ಹಾಜರಾಗುವ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ತಿಳಿಸಲಾಗಿದೆ. ಅದರ ಜತೆಗೆ ಕರೊನಾ ಸಂಬಂಧ ವೈದ್ಯಕೀಯ ಪರೀಕ್ಷೆಗೂ ಒಳಗಾಗಿ ಪ್ರಮಾಣ ಪತ್ರ ಪಡೆದಿರುವಂತೆ ಸೂಚಿಸಲಾಗಿದೆ. ಅಲ್ಲದೆ, ಸೂಕ್ತ ಕಾರಣವಿಲ್ಲದೆ ಕೆಲಸಕ್ಕೆ ಬರದ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಗಿದೆ.

    150 ಬಸ್‌ಗಳ ಸಂಚಾರ: ಸದ್ಯ ಲಾಕ್‌ಡೌನ್ ಜಾರಿಯಲ್ಲಿದ್ದರೂ ಆಸ್ಪತ್ರೆಗೆ ತೆರಳುವವರು, ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗಾಗಿ ಬಿಎಂಟಿಸಿ ಬಸ್ ಸೇವೆ ನೀಡುತ್ತಿದೆ. ನಿತ್ಯ 150 ಬಸ್‌ಗಳು ಸಂಚರಿಸುತ್ತಿವೆ. ಜೂ. 7ರಿಂದ ಲಾಕ್‌ಡೌನ್‌ಗೂ ಮುನ್ನ ನೀಡಲಾಗುತ್ತಿದ್ದ ಸೇವೆಯ ಪ್ರಮಾಣದಲ್ಲಿ ಬಸ್‌ಗಳ ಸಂಚಾರಕ್ಕೆ ಬಿಎಂಟಿಸಿ ನಿರ್ಧರಿಸಿದೆ.

    ಪತಿಯನ್ನು ಹೋಮಕುಂಡದಲ್ಲಿ ಹಾಕಿ ಕೊಲೆ ಮಾಡಿದ್ದ ಪತ್ನಿ; ಬೆಚ್ಚಿಬೀಳಿಸಿದ್ದ ಹತ್ಯೆ ಪ್ರಕರಣದ ತೀರ್ಪು ಮುಂದೂಡಿಕೆ

    ರಾಜಕೀಯ ಬಿಟ್ಟು ಇನ್ಯಾವ ಬಿಜಿನೆಸ್ಸೂ ಜಾತಿ ಆಧಾರದ ಮೇಲೆ ನಡೆಯಲ್ಲ: ಉಪೇಂದ್ರ; ‘ದಿಗ್ವಿಜಯ ನ್ಯೂಸ್’ ಸಂದರ್ಶನ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts