More

    ಐಪಿಎಲ್ ಪಂದ್ಯ ವೀಕ್ಷಣೆ, ಬಿಎಂಟಿಸಿಯಿಂದ ಬಸ್ ಸೌಲಭ್ಯ

    ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ (ಏ.15), ಮೇ 4, 12, 14 ಹಾಗೂ 18 ರಂದು ನಡೆಯಲಿರುವ ಐಪಿಎಲ್-2024ರ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಸೌಲಭ್ಯವನ್ನು ಕಲ್ಪಿಸಿದೆ.

    ಚಿನ್ನಸ್ವಾಮಿ ಕ್ರೀಡಾಂಗಣದ ಮಾರ್ಗಸಂಖ್ಯೆ ಎಸ್‌ಬಿಎಸ್-1ರಿಂದ ಕಾಡಗೋಡಿ ಬಸ್ ನಿಲ್ದಾಣ (ಎಚ್‌ಎಎಲ್ ರಸ್ತೆ), ಎಸ್‌ಬಿಎಸ್-13 ಮಾರ್ಗದಿಂದ ಕಾಡುಗೋಡಿ ಬಸ್ ನಿಲ್ದಾಣ (ಹೂಡಿ ರಸ್ತೆ), ಜಿ-2 ಮಾರ್ಗದಿಂದ ಸರ್ಜಾಪುರ, ಜಿ-3 ಮಾರ್ಗದಿಂದ ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ), ಜಿ-4 ಮಾರ್ಗದಿಂದ ಬನ್ನೇರುಘಟ್ಟ ಮೃಗಾಲಯ, ಜಿ-6 ಮಾರ್ಗದಿಂದ ಕೆಂಗೇರಿ ಕೆಎಚ್‌ಬಿ ಕ್ವಾಟ್ರಸ್ (ಎಂಸಿಟಿಸಿ ನಾಯಂಡಹಳ್ಳಿ), ಜಿ-7 ಮಾರ್ಗದಿಂದ ಜನಪ್ರಿಯ ಟೌನ್‌ಷಿಪ್ (ಮಾಗಡಿ ರಸ್ತೆ), ಜಿ-8 ಮಾರ್ಗದಿಂದ ನೆಲಮಂಗಲ, ಜಿ-9 ಮಾರ್ಗದಿಂದ ಯಲಹಂಕ 5ನೇ ಹಂತ, ಜಿ-10 ಮಾರ್ಗದಿಂದ ಹೆಗಡೆನಗರ (ನಾಗವಾರ, ಟ್ಯಾನರಿ ರಸ್ತೆ), ಜಿ-11 ಮಾರ್ಗದಿಂದ ಬಾಗಲೂರು (ಹೆಣ್ಣೂರು ರಸ್ತೆ), ಕೆಬಿಎಸ್ 12 ಎಚ್‌ಕೆ ಮಾರ್ಗದಿಂದ ಹೊಸಕೋಟೆಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts