More

    ಬ್ರೇಕ್​ ವಿಫಲಗೊಂಡ ಬಿಎಂಟಿಸಿ ಬಸ್​ ಹರಿದು ಇಬ್ಬರು ಸಾವು: ಮೂವರ ಸ್ಥಿತಿ ಗಂಭೀರ

    ಬೆಂಗಳೂರು: ಬ್ರೇಕ್​ ವಿಫಲಗೊಂಡ ಪರಿಣಾಮ ಬಿಎಂಟಿಸಿ ಬಸ್​ ಪಾದಚಾರಿಗಳ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡಿರುವ ಘಟನೆ ಕೊಟ್ಟಿಗೆಪಾಳ್ಯದಲ್ಲಿ ಸೋಮವಾರ ನಡೆದಿದೆ.

    ಬೈಲಪ್ಪ (43) ಹಾಗೂ ವಿಶ್ವಾರಾಧ್ಯ (46) ಮೃತಟ್ಟವರು. ಅಭಿಷೇಕ್​, ಹರ್ಷಿತ ಹಾಗೂ ನಾಗರಾಜ್ ಗಂಭೀರ ಗಾಯಗೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ.

    ಬಸ್​ಗೆ ಅವಡಿಸಿದ್ದ ಬ್ರೇಕ್​ ವ್ಯವಸ್ಥೆ ಸಮಸ್ಯೆ ಇದೆ ಎಂದು 15 ದಿನಗಳಿಂದ ಚಾಲಕ ವೆಂಕಟೇಶ್​ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಹೀಗಿದ್ದರೂ ಅಧಿಕಾರಿಗಳು ಬ್ರೇಕ್​ ಸರಿಪಡಿಸಲು ಕ್ರಮ ತೆಗೆದುಕೊಂಡಿರಲಿಲ್ಲ . ಹೀಗಾಗಿ ಅಪಘಾತ ಸಂಭವಿಸಿದೆ.

    ತಪ್ಪಿದ ಭಾರಿ ಅನಾಹುತ: ಸುಂಕದಕಟ್ಟೆ ಕಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್​​ನ​ ಬ್ರೇಕ್​ ವಿಫಲಗೊಂಡಿತ್ತು. ಬ್ರೇಕ್​ ವಿಫಲವಾಗಿ 200 ಮೀಟರ್​ ದೂರ ಬಸ್​ ಚಲಿಸಿತು. ಎದುರಲ್ಲೇ ಕಾಮಗಾರಿ ನಡೆಯುತ್ತಿತ್ತು. ಬಸ್​ನ ಬಲಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದರೆ, ಎಡ ಭಾಗದಲ್ಲಿ ದೇವಾಲಯ ಇತ್ತು. ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಜನರು ಬಂದಿದ್ದರು. ಹೀಗಾಗಿ ಚಾಲಕ ವೆಂಕಟೇಶ್​ ಜಾಗರೂಕತೆಯಿಂದ ಬಸ್​ ಅನ್ನು ಬಲ ಭಾಗಕ್ಕೆ ತಿರುಗಿಸಿ ಕಾಮಗಾರಿ ನಡೆಯುತ್ತಿದ್ದ ಸ್ಥಳದತ್ತ ಚಲಾಯಿಸಿದರು. ಬಸ್​ ಎಡಭಾಗಕ್ಕೆ ತಿರುಗಿದ್ದರೇ ಅಧಿಕ ಮಂದಿ ಬಲಿಯಾಗುತ್ತಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

    ಬಸ್​ ಬ್ರೇಕ್​ ವ್ಯವಸ್ಥೆ ತನಿಖೆ: ಬಿಎಂಟಿಸಿ ಬಸ್​ನಿಂಸ ಸಂಭವಿಸಿದ ಅಪಘಾತದಿಂದ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಬಸ್​ನ ಬ್ರೇಕ್​ ವ್ಯವಸ್ಥೆಯನ್ನು ತನಿಖೆ ಮಾಡುವಂತೆ ಆರ್​ಟಿಒ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಸ್​ಗೆ ಬ್ರೇಕ್​ ಸಮಸ್ಯೆ ಇದ್ದದ್ದು ಪತ್ತೆಯಾದರೆ ಡಿಪೋ ಮ್ಯಾನೇಜರ್​ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಂಟಿ ಪೊಲೀಸ್​ ಆಯುಕ್ತ ರವಿಕಾಂತೇಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts