More

    ಕಚೇರಿ ಬಳಿಕ ಕಂಗನಾ ಮನೆ ಕೆಡವಲು ಮುಂಬೈ ಪಾಲಿಕೆ ನಿರ್ಧಾರ!

    ಮುಂಬೈ: ಇತ್ತೀಚೆಗಷ್ಟೇ ಬಾಂದ್ರಾದ ಪಾಲಿ ಹಿಲ್​ನಲ್ಲಿರುವ ನಟಿ ಕಂಗನಾ ರಣಾವತ್​ ಅವರ ಕಚೇರಿಯ ಕೆಲ ಭಾಗ ಅತಿಕ್ರಮಣವಾಗಿ ಕಟ್ಟಲಾಗಿದೆ ಎಂದು ಆರೋಪಿಸಿ ಮುಂಬೈ ಮಹಾನಗರ ಪಾಲಿಕೆ ಒಡೆದು ಹಾಕಿತ್ತು. ಇದೀಗ ಕಂಗನಾ ಮನೆಯನ್ನು ಮುಂಬೈ ಮಹಾನಗರ ಪಾಲಿಕೆ ಟಾರ್ಗೇಟ್​ ಮಾಡಿದೆ!

    ಇದನ್ನೂ ಓದಿ: ಮುಂಬೈ ಬಿಟ್ಟು ತವರೂರಿಗೆ ವಾಪಸ್ಸಾದ ಕಂಗನಾ!

    ಹೌದು, ಇದೀಗ ಮುಂಬೈನ ಖರ್​ ಪ್ರದೇಶದಲ್ಲಿರುವ ಕಂಗನಾ ಮನೆಗೂ ಬಿಎಂಸಿ ನೋಟಿಸ್​ ರವಾನಿಸಿದ್ದು, ಅತಿಕ್ರಮಣವಾದ ಮನೆಯನ್ನು ತೆರೆವುಗೊಳಿಸಿ ಎಂದಿದೆ. ಖರ್ ಪ್ರದೇಶದ ಬಹು ಮಹಡಿಯ ಅಪಾರ್ಟ್ಮೆಂಟ್​ನಲ್ಲಿ ಮೂರು ಫ್ಲಾಟ್​​ಗಳು ಕಂಗನಾ ಅವರದ್ದಾಗಿವೆ.

    ಮೊದಲ ಫ್ಲಾಟ್​ 797 ಚದರ ಅಡಿ ವಿಸ್ತಿರ್ಣ, ಎರಡನೆಯದ್ದು 711 ಚದರ ಅಡಿ ಮತ್ತು ಮೂರನೇಯ ಫ್ಲಾಟ್ 459 ಚದರ ಅಡಿ ವಿಸ್ತೀರ್ಣ ಹೊಂದಿದೆ. 2019ರ ಮಾರ್ಚ್ 8ರಂದು ಕಂಗನಾ ಹೆಸರಿನಲ್ಲಿ ಈ ಮೂರು ಕಟ್ಟಡಗಳು ನೋಂದಣಿಯಾಗಿವೆ. ಕಟ್ಟಡದ ಪ್ಲಾನ್​ನಲ್ಲಿ ಇಲ್ಲದ ಒಂದಷ್ಟು ಭಾಗಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗಿದ್ದು, ಶೀಘ್ರದಲ್ಲಿ ಅವೆಲ್ಲವನ್ನು ತೆರವುಗೊಳಿಸುವಂತೆ ನೋಟಿಸ್​ನಲ್ಲಿ ಆದೇಶಿಸಿದೆ.

    ಇದನ್ನೂ ಓದಿ: ಶೀಘ್ರದಲ್ಲಿ ಯುವ ರಾಜಕುಮಾರ್ ಚಿತ್ರದ ಲಾಂಚಿಂಗ್​ ಟ್ರೇಲರ್​; ದೊಡ್ಡಪ್ಪ, ಚಿಕ್ಕಪ್ಪ ಕಡೆಯಿಂದ ಸಿಕ್ತು ಆಶೀರ್ವಾದ

    ಕಂಗನಾ ಅವರ ನಿವಾಸದ ಅನಧಿಕೃತ ಭಾಗಗಳಿಗೆ ಸಂಬಂಧಿಸಿದ ವಿಚಾರಣೆ ಸೆಪ್ಟೆಂಬರ್ 25 ರಂದು ನಡೆಯಲಿದ್ದು, ಸ್ವತಃ ಕಂಗನಾ ಈ ವಿಚಾರಣೆಗೆ ಹಾಜರಾಗಲಿದ್ದಾರೆ. (ಏಜೆನ್ಸೀಸ್​)

    ನಟಿ ಸಂಜನಾ ಮತ್ತೆ ಸಿಸಿಬಿ ವಶಕ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts