More

    ಬ್ಲೂಫ್ಲ್ಯಾಗ್ ಬೀಚ್ ರಸ್ತೆ ಇಕ್ಕಟ್ಟು

    ಹೇಮನಾಥ್ ಪಡುಬಿದ್ರಿ

    ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿರುವ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಾಹನ ನಿಬಿಡತೆ ತಪ್ಪಿಸಲು ಬೀಚ್ ಸಂಪರ್ಕಿಸುವ ಪ್ರಮುಖ ರಸ್ತೆ ಶೀಘ್ರ ವಿಸ್ತರಣೆಯಾಗಬೇಕಿದೆ.

    ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಪೇಟೆಯಿಂದ ಬೀಚ್ ಸಂಪರ್ಕಿಸುವ 3.5 ಕಿ.ಮೀ. ವ್ಯಾಪ್ತಿಯ ಪ್ರಮುಖ ರಸ್ತೆ ಹಾಗೂ ಕಾಮಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಕಿರಿದಾಗಿದ್ದು, ಕೇವಲ ಏಕಮುಖ ವಾಹನ ಸಂಚಾರಕ್ಕೆ ಮಾತ್ರ ಸೀಮಿತವಾಗಿದೆ. ಬ್ಲೂೃಫ್ಲಾೃಗ್ ಬೀಚ್ ಪ್ರವೇಶ ದ್ವಾರದಿಂದ ನಡಿಪಟ್ಣವರೆಗಿನ 800 ಮೀಟರ್ ವ್ಯಾಪ್ತಿ ರಸ್ತೆಯನ್ನು ದ್ವಿಪಥಗೊಳಿಸಿ ವರ್ಷದ ಹಿಂದೆ ಕಾಂಕ್ರೀಟ್ ಮಾಡಬೇಕಿತ್ತು. ಬೀಚ್ ಬಳಿ 150 ವಾಹನಗಳ ನಿಲುಗಡೆಗೆ ಅನುಕೂಲ ಕಲ್ಪಿಸುವ ಪಾರ್ಕಿಂಗ್ ಪ್ರದೇಶದ ಕಾಮಗಾರಿ ಇನ್ನಷ್ಟೇ ಪೂರ್ಣಗೊಳ್ಳಬೇಕಿರುವ ಪರಿಣಾಮ ರಸ್ತೆಯಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡಬೇಕಾಗಿದೆ.

    ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಕ್ರಮ
    ಪ್ರವಾಸಿಗರ ಹಾಗೂ ಸ್ಥಳೀಯರ ವಾಹನಗಳ ಸಂಖ್ಯೆ ಹೆಚ್ಚಳ ಮತ್ತು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನಗಳ ಅತಿವೇಗದಿಂದ ಬೀಚ್ ರಸ್ತೆಗೆ ಸಂಪರ್ಕ ಕಲ್ಪಿಸಿರುವ ತಿರುವು ಅಪಘಾತಗಳ ಕೇಂದ್ರವಾಗುತ್ತಿದೆ. ಈ ಪ್ರದೇಶದಲ್ಲಿ ಸೂಕ್ತ ಸಂಚಾರ ವ್ಯವಸ್ಥೆ ಕಲ್ಪಿಸುವ ಅಗತ್ಯವಿದೆ. ತೆಂಕ ಎರ್ಮಾಳು ಮೂಲಕ ಕರಾವಳಿ ತೀರದ ಮಾರ್ಗದಲ್ಲಿ ವಾಹನಗಳು ಸಾಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಲು ಕ್ರಮಕೈಗೊಂಡು ಕಿರಿದಾಗಿರುವ ಬೀಚ್ ರಸ್ತೆಯ ವಾಹನ ನಿಬಿಡತೆಗೆ ಕಡಿವಾಣ ಹಾಕಲು ಯೋಚಿಸಬೇಕಿದೆ.

    ಪರ್ಯಾಯ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಒತ್ತು
    ರಾಷ್ಟ್ರೀಯ ಹೆದ್ದಾರಿ 66ರ ಪಡುಬಿದ್ರಿ ಬೀಡು ಬಳಿಯಿಂದ ಪಡುಹಿತ್ಲು ಜಾರಂದಾಯ ದೈವಸ್ಥಾನ ಮಾರ್ಗವಾಗಿ 2.5 ಕಿ.ಮೀ. ವ್ಯಾಪ್ತಿಯಾಗಿ ಬ್ಲೂಫ್ಲ್ಯಾಗ್ ಬೀಚ್ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಬೇಕಿದೆ. ಹೆಜಮಾಡಿ ಅಮಾವಾಸೆಕರಿಯದಿಂದ ಮುಟ್ಟಳಿವೆ ಮೂಲಕ ಬೀಚ್ ಸಂಪರ್ಕಿಸಲು ಈ ಹಿಂದೆ ಅವೈಜ್ಞಾನಿಕವಾಗಿ ನಿರ್ಮಿಸಿರುವ ಸೇತುವೆಗೆ ಪರ್ಯಾಯವಾಗಿ ನದಿ ನೀರು ಹರಿಯಲು ಸೂಕ್ತ ವ್ಯವಸ್ಥೆಯೊಂದಿಗೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಮತ್ತು ತೆಂಕ ಎರ್ಮಾಳು ಕಡಲ ತೀರದಿಂದ ಪಡುಬಿದ್ರಿ ಬೀಚ್‌ವರೆಗೆ ಇರುವ ಮೀನುಗಾರಿಕಾ ರಸ್ತೆಯನ್ನು ವಿಸ್ತಾರಗೊಳಿಸಿ ಅಭಿವೃದ್ಧಿಪಡಿಸಲು ಸಂಬಂಧಿಸಿದ ಇಲಾಖೆಗಳು ಒತ್ತು ನೀಡಿದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

    ಕರೊನಾ ಕಾರಣದಿಂದ ಹೊಸ ಯೋಜನೆಗಳ ಪ್ರಸ್ತಾವನೆಗೆ ತೊಡಕಾಗಿದೆ. ಬೀಚ್ ಸಂಪರ್ಕ ರಸ್ತೆಗಳ ದ್ವಿಪಥಗೊಳಿಸಲು ಬೇಡಿಕೆಯಿದ್ದು, ಸಂಬಂಧಿತ ಇಲಾಖೆಗಳಿಗೆ ಪ್ರಸ್ತಾವನೆಗೆ ಶಿಫಾರಸ್ಸು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಹೊಂದಾಣಿಕೆ ಮಾಡಿಕೊಂಡು ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
    ಲಾಲಾಜಿ ಆರ್.ಮೆಂಡನ್, ಕಾಪು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts