More

    ದಲಾಲ್​ ಸ್ಟ್ರೀಟ್​ನಲ್ಲಿ ಬ್ಲಡ್​ಬಾತ್​: 7 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ ಸೆನ್ಸೆಕ್ಸ್

    ಮುಂಬಯಿ: ರೂಪಾಂತರಗೊಂಡ ಕರೊನಾ ವೈರಸ್​ ಸೋಂಕು ಬ್ರಿಟನ್​ನಲ್ಲಿ ಹರಡುತ್ತಿರುವ ಸುದ್ದಿ ಕಾರಣ ಭಾರತೀಯ ಷೇರುಪೇಟೆಯಲ್ಲಿ ಇಂದು ಬ್ಲಡ್ ಬಾತ್ ಕಂಡುಬಂತು. ಸೆನೆಕ್ಸ್ ಪಟ್ಟಿಯ ಎಲ್ಲ ಷೇರುಗಳು ಕೂಡ ಕೆಂಪುಬಣ್ಣಕ್ಕೆ ತಿರುಗಿದ್ದು, 7 ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ನಷ್ಟ ಅನುಭವಿಸಿದೆ.

    ಇಂದು ಪ್ರಾದೇಶಿಕ ಮಾರುಕಟ್ಟೆಯಲ್ಲಿ ಷೇರು ಮಾರಾಟ ಪ್ರಮಾಣ ಹೆಚ್ಚಾಗಿದ್ದ ಪರಿಣಾಮ ಒಂದೇ ದಿನ ಏಳು ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಕರಗಿಹೋಗಿದೆ.
    – ಬಿನೋದ್ ಮೋದಿ, ರಿಲಯನ್ಸ್ ಸೆಕ್ಯೂರಿಟೀಸ್

    ಮೂವತ್ತು ಷೇರುಗಳ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಇಂದು 1,406.73 ಅಂಶ (3%) ಕುಸಿತ ಕಂಡು ದಿನದ ಅಂತ್ಯಕ್ಕೆ 45,553.96 ಅಂಶದಲ್ಲಿ ವಹಿವಾಟು ಮುಗಿಸಿದೆ. ಇದೇ ರೀತಿ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ 432.15 ಅಂಶ (3.14%) ಕುಸಿದು 13,328.40 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ.

    ಇದನ್ನೂ ಓದಿ: ಈ ಮಗುವಿಗೆ 60 ವರ್ಷ ಎಷ್ಟು ಬೇಕೋ ಅಷ್ಟು ಪಿಜ್ಜಾ ಫ್ರೀ! ಕಾರಣ ಕೇಳಿದ್ರೆ ಅಚ್ಚರಿಯಾಗ್ತೀರಾ…

    ಸೆನ್ಸೆಕ್ಸ್ ಪಟ್ಟಿಯಲ್ಲಿ ಇಂದು ಎಲ್ಲ ಷೇರುಗಳು ಕೂಡ ನಷ್ಟ ಅನುಭವಿಸಿದ್ದು, ಒಎನ್​ಜಿಸಿಯ ಷೇರು ಮೌಲ್ಯ ಗರಿಷ್ಠ ಶೇಕಡ 9 ಕುಸಿತ ಕಂಡಿದೆ. ಇದರ ಬೆನ್ನಿಗೆ ಇಂಡಸ್​ಇಂಡ್ ಬ್ಯಾಂಕ್​, ಎಂಆ್ಯಂಡ್​ಎಂ, ಎಸ್​ಬಿಐ, ಎನ್​ಟಿಪಿಸಿ, ಐಟಿಸಿ, ಏಕ್ಸಿಸ್ ಬ್ಯಾಂಕ್ ಮತ್ತು ಪವರ್ ಗ್ರಿಡ್ ಷೇರುಗಳು ಶೇಕಡ 7 ನಷ್ಟ ಅನುಭವಿಸಿವೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ಹೊಸಮಾದರಿ ಕೋವಿಡ್ 19 – ತುರ್ತುಸಭೆ ಕರೆದಿರುವ ಕೇಂದ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts