More

    ಸೆನ್ಸೆಕ್ಸ್ 437 ಅಂಶ ಏರಿಕೆ, ಮತ್ತೆ 13,600ರ ಗಡಿ ದಾಟಿದ ನಿಫ್ಟಿ

    ಮುಂಬಯಿ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಬುಧವಾರದ ವಹಿವಾಟಿನಲ್ಲಿ ಚೇತರಿಕೆ ತೋರಿದ್ದು 437 ಅಂಶ ಏರಿಕೆ ದಾಖಲಿಸಿದೆ. ಜಾಗತಿಕ ಮಾರುಕಟ್ಟೆಯ ಧನಾತ್ಮಕ ಟ್ರೆಂಡ್​ಗೆ ಅನುಗುಣವಾಗಿ ಇನ್​ಫೋಸಿಸ್​, ಎಚ್​ಯುಎಲ್​, ಟಿಸಿಎಸ್​ ಷೇರುಗಳು ಲಾಭಾಂಶ ದಾಖಲಿಸಿದ್ದೇ ಇದಕ್ಕೆ ಕಾರಣ. ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಮತ್ತೆ 13,600 ಅಂಶದ ಗಡಿ ದಾಟಿದೆ.

    ಮೂವತ್ತು ಷೇರುಗಳ ಬಿಎಸ್​ಇ ಸೆನ್ಸೆಕ್ಸ್ 437.49 (0.95%) ಅಂಶ ಏರಿಕೆ ದಾಖಲಿಸಿ 46,444.18 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಇದೇ ರೀತಿ ನಿಫ್ಟಿ 134.80 (1%) ಅಂಶ ಏರಿಕೆಯೊಂದಿಗೆ 13,601.10 ಅಂಶ ಏರಿಕೆ ದಾಖಲಿಸಿ ದಿನದ ವಹಿವಾಟು ಕೊನೆಗೊಳಿಸಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಎಚ್​ಯುಎಲ್​ ಷೇರು ಗರಿಷ್ಠ ಶೇಕಡ 3 ಏರಿಕೆ ದಾಖಲಿಸಿದ್ದು, ಇನ್​ಫೋಸಿಸ್​, ಎಂಆ್ಯಂಡ್​ಎಂ, ಐಟಿಸಿ, ಎಸ್​ಬಿಐ, ಇಂಡಸ್​ಇಂಡ್ ಬ್ಯಾಂಕ್​, ಬಜಾಜ್ ಫೈನಾನ್ಸ್​, ಏಷ್ಯನ್ ಪೇಂಟ್ಸ್, ಟಿಸಿಎಸ್​, ಭಾರ್ತಿ ಏರ್​ಟೆಲ್​ ಷೇರುಗಳು ಲಾಭಾಂಶ ಕಂಡಿವೆ.

    ಇದನ್ನೂ ಓದಿ: ಗ್ರಾಮಾಯಣ : ಯಾರು ಹೆಚ್ಚು ಹಣ ಕೊಡ್ತೀರೋ ಹೇಳಿ ಅವರಿಗೆ ಮತ ಚಲಾಯಿಸುವೆ!

    ಇನ್ನೊಂದೆಡೆ, ಟೈಟಾನ್​, ಪವರ್​ಗ್ರಿಡ್​, ಎನ್​ಟಿಪಿಸಿ ಷೇರುಗಳು ನಷ್ಟ ಅನುಭವಿಸಿವೆ. ಹೊಸ ಕರೊನಾ ವೈರಸ್ ಸೋಂಕು ಹಾಗೂ ವಿವಿಧ ದೇಶಗಳು ವಿಧಿಸಿರುವ ಆರ್ಥಿಕ ನಿರ್ಬಂಧಗಳ ಕಾರಣ ಜಾಗತಿಕ ಷೇರುಪೇಟೆಯಲ್ಲಿ ತೀವ್ರಗತಿಯ ಏರಿಳಿತ ದಾಖಲಾಗಿದೆ. ಆದಾಗ್ಯೂ, ಭಾರತದ ಷೇರುಪೇಟೆಯಲ್ಲಿ ಇಂದು ಉತ್ತಮ ವಹಿವಾಟು ದಾಖಲಾಗಿದೆ. (ಏಜೆನ್ಸೀಸ್)

    ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

    ದಲಾಲ್​ ಸ್ಟ್ರೀಟ್​ನಲ್ಲಿ ಬ್ಲಡ್​ಬಾತ್​: 7 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ ಸೆನ್ಸೆಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts