More

    ಮಹಾರಾಷ್ಟ್ರದ ತಾರಾಪುರ ರಾಸಾಯನಿಕ ವಲಯದಲ್ಲಿ ಸ್ಫೋಟ, ಸ್ಯಾನಿಟೈಸರ್​ ಕಾರ್ಖಾನೆಯಲ್ಲಿ ಇಬ್ಬರ ಸಾವು

    ಮುಂಬೈ: ಮಹಾರಾಷ್ಟ್ರದ ಪಲ್ಗಾರ್​ನಲ್ಲಿರುವ ತಾರಾಪುರ ರಾಸಾಯನಿಕ ವಲಯದಲ್ಲಿ ಸೋಮವಾರ ಸಂಭವಿಸಿದ ಭಾರಿ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸೋಪು, ಡಿಟರ್ಜೆಂಟ್​ ಮತ್ತು ಸ್ಯಾನಿಟೈಸರ್​ ತಯಾರಿಸುವ ಕಾರ್ಖಾನೆಯಲ್ಲಿ 105 ಕೆಲಸಗಾರರು ಮತ್ತು ಆಡಳಿತ ವರ್ಗದ ಅಧಿಕಾರಿಗಳು ಸೋಮವಾರ ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು. ಸ್ಯಾನಿಟೈಸರ್​ ಉತ್ಪಾದನಾ ಘಟಕದಲ್ಲಿ ಮಧ್ಯಾಹ್ನ ಹಠಾತ್​ ಸ್ಫೋಟ ಸಂಭವಿಸಿತು ಎನ್ನಲಾಗಿದೆ.

    ಅಗತ್ಯ ಸೇವೆಗಳ ಕಾರ್ಖಾನೆಗಳು ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ಕೊಟ್ಟ ಹಿನ್ನೆಲೆಯಲ್ಲಿ ಈ ಘಟಕದಲ್ಲಿ ಉದ್ಯೋಗಿಗಳು ಎಂದಿನಂತೆ ಕೆಲಸಕ್ಕೆ ಹಾಜರಾಗಿದ್ದರು ಎಂದು ಹೇಳಲಾಗಿದೆ.

    ತಾರಾಪುರ ರಾಸಾಯನಿಕ ವಲಯದ ಇನ್ನೊಂದು ರಾಸಾಯನಿಕ ಕಾರ್ಖಾನೆಯಲ್ಲಿ ಜನವರಿಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದರು.

    ಕಚೇರಿಗಳಿಗೆ ಮರಳಿದ ಕೇಂದ್ರ ಸಚಿವರು, ಅಧಿಕಾರಿಗಳು, ಹಂತಹಂತವಾಗಿ ಲಾಕ್​ಡೌನ್​ ತೆರವುಗೊಳಿಸುವ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts