ಕಚೇರಿಗಳಿಗೆ ಮರಳಿದ ಕೇಂದ್ರ ಸಚಿವರು, ಅಧಿಕಾರಿಗಳು, ಹಂತಹಂತವಾಗಿ ಲಾಕ್​ಡೌನ್​ ತೆರವುಗೊಳಿಸುವ ಸೂಚನೆ

ನವದೆಹಲಿ: ರಾಷ್ಟ್ರಾದ್ಯಂತ ಏ.14ರವರೆಗೆ ಜಾರಿಗೊಳಿಸಲಾಗಿರುವ ಮೊದಲ ಹಂತದ ಲಾಕ್​ಡೌನ್​ ಮುಗಿಯಲು ಕೆಲವೇ ಗಂಟೆಗಳು ಬಾಕಿ ಇವೆ. ಅದಾಗಲೇ ಏಪ್ರಿಲ್​ 30ರವರೆಗೆ ಎರಡನೇ ಹಂತದ ಲಾಕ್​ಡೌನ್​ ವಿಸ್ತರಣೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ, ಎರಡನೇ ಹಂತದಲ್ಲಿ ಒಂದಷ್ಟು ವಿನಾಯ್ತಿಗಳನ್ನು ನೀಡಿ, ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವ ಲಕ್ಷಣಗಳು ಕಂಡುಬರುತ್ತಿವೆ. ಹೀಗಿರುವಂತೆ ಕೇಂದ್ರ ಸಚಿವರು ಮತ್ತು ಅಧಿಕಾರಿಗಳು ಸೋಮವಾರ ತಮ್ಮ ಕಚೇರಿಗಳಿಗೆ ಬಂದು, ಅಲ್ಲಿಂದಲೇ ಕಾರ್ಯನಿರ್ವಹಿಸಲು ಆರಂಭಿಸಿದ್ದಾರೆ. ಇದರಿಂದಾಗಿ, 2ನೇ ಹಂತದ ಲಾಕ್​ಡೌನ್​ನಲ್ಲಿ ಕೆಲವೊಂದು ವಿನಾಯ್ತಿಗಳನ್ನು ನೀಡುವ ಸಾಧ್ಯತೆ ದಟ್ಟವಾಗಿದೆ. … Continue reading ಕಚೇರಿಗಳಿಗೆ ಮರಳಿದ ಕೇಂದ್ರ ಸಚಿವರು, ಅಧಿಕಾರಿಗಳು, ಹಂತಹಂತವಾಗಿ ಲಾಕ್​ಡೌನ್​ ತೆರವುಗೊಳಿಸುವ ಸೂಚನೆ